ಪವಿತ್ರ ಹಬ್ಬ ಎಳ್ಳು ಅಮಾವಾಸ್ಯೆ ಭೂಮಿ – ತಾಯಿಯನ್ನು ಪೂಜಿಸಿದ ರೈತರು.
ಗುಬ್ಬೇವಾಡ ಡಿ.19

ಆಲಮೇಲ ತಾಲೂಕಿನ ಗುಬ್ಬೇವಾಡ ಗ್ರಾಮದ ರೈತರಾದ ಶ್ರೀ ವೇದಮೂರ್ತಿ ಸಂಗಯ್ಯ ಹಿರೇಮಠ ಇವರ ಹೊಲದಲ್ಲಿ ಇಂದು ದಿನಾಂಕ 19/12/2025 ಶುಕ್ರವಾರ ರಂದು ಎಳ್ಳು ಅಮಾವಾಸ್ಯೆ ದಿನ ದಂದು ರೈತರು ಭೂಮಿ ತಾಯಿಯನ್ನು ನಂಬಿ ವರ್ಷ ಇಡೀ ದುಡಿಯುವ. ರೈತ ತನ್ನ ಪರಿಶ್ರಮಕ್ಕೆ ತಕ್ಕ ಫಲವನ್ನು ನೀಡೆಂದು. ಭೂಮಿತಾಯಿಯನ್ನು ಪೂಜಿಸಿ ಬೇಡುವ ಪವಿತ್ರ ಹಬ್ಬ ಎಳ್ಳು ಅಮಾವಾಸ್ಯೆಯನ್ನು ರೈತರಿಗೆ ಈ ಹಬ್ಬ ಬಹಳ ವಿಶೇಷವಾಗಿದ್ದು.
ಈ ಹಬ್ಬದ ದಿನ ದಂದು ನಮ್ಮ ಉತ್ತರ ಕರ್ನಾಟಕದ ರುಚಿ ರುಚಿಯಾದ ಸಜ್ಜೆ ರೊಟ್ಟಿ ಸಜ್ಜೆ ಕಡಬು ಶೇಂಗಾದ ಹೋಳಿಗೆ ಪುಂಡಿ ಪಲ್ಯ ಬದನೆಕಾಯಿ ಪಲ್ಯ ಹಿಂಡಿ ಪಲ್ಯ ಶೇಂಗಾದ ಚಟ್ನಿನಿ ಪುಡಿ. ಹಾಗೂ ನಾನಾ ತರದ ಅಡಿಗೆಯನ್ನು ತಯಾರಿಸಿ ಸಹ ಕುಟುಂಬದ ಜೊತೆ ಸೇರಿ ಕೊಂಡು ಎತ್ತಿನ ಬಂಡೆಯಲ್ಲಿ ತಮ್ಮ ಜಮೀನಿಗೆ ಬಂದು ರುಚಿ ರುಚಿಯಾದ ಊಟವನ್ನು ಸವಿದು ನಂತರ ಕೆಲವು ಹೊತ್ತು ವಿಶ್ರಾಂತಿ ಖುಷಿಯಿಂದ ನಗು ನಗುತ ಮರಳಿ ಮನೆಗೆ ತೆರುಳುವ ಪದ್ಧತಿಯು ಇನ್ನೂ ನಮ್ಮ ಉತ್ತರ ಕರ್ನಾಟಕದಲ್ಲಿ ಬಂದಿರುತ್ತದೆ ಎಂದು ಹಿರಿಯರಾದ ಸಂಗಯ್ಯ ಸ್ವಾಮಿ ಹಿರೇಮಠ್ ಇವರು ಮನದಾಳದ ಮಾತು ಹೇಳಿದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ರೇವಣಸಿದ್ದಯ್ಯ.ಜಿ ಹಿರೇಮಠ ಆಲಮೇಲ

