🔥 ಗಣಿ ಅಧಿಕಾರಿಗಳ ಐಷಾರಾಮಿ ಜೀವನದ ಹಿಂದೆ ಅಕ್ರಮ ಮಣ್ಣಿನ ವಾಸನೆ? ಲೋಕಾಯುಕ್ತ ದಾಳಿಗೆ ಸಾರ್ವಜನಿಕರ ಆಗ್ರಹ!📍 ಕೆಂಪು ಮಣ್ಣಿನ ಲೂಟಿ – ಭ್ರಷ್ಟ ಅಧಿಕಾರಿಗಳ ಕೋಟಿ ಕೋಟಿ ಹಗರಣ..!
ಉಡುಪಿ ಡಿ.20

ಜಿಲ್ಲೆಯ ಬ್ರಹ್ಮಾವರ ತಾಲೂಕಿನಲ್ಲಿ ಕೆಂಪು ಮಣ್ಣಿನ ಅಕ್ರಮ ಗಣಿಗಾರಿಕೆ ಹೆಮ್ಮರವಾಗಿ ಬೆಳೆದಿದ್ದು, ತಾಲೂಕಿನ ಸರ್ಕಾರಿ ಮತ್ತು ಆರ್.ಎಸ್ (RS) ಜಾಗಗಳು ಮಾಫಿಯಾದ ಪಾಲಾಗುತ್ತಿವೆ. ಈ ಲೂಟಿಯಲ್ಲಿ ಕೇವಲ ದಂಧೆಕೋರರಲ್ಲ, ಬದಲಾಗಿ ಇಡೀ ಇಲಾಖೆಯೇ ಶಾಮೀಲಾಗಿರುವುದು ಈಗ ರಾಜ್ಯ ಮಟ್ಟದಲ್ಲಿ ಸಂಚಲನ ಮೂಡಿಸಿದೆ.
🛑 ದಂಧೆಯ ಒಳ ಸಂಚು, ಅಧಿಕಾರಿಗಳೇ ದಂಧೆಕೋರರ ರಕ್ಷಕರು..!
ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿರುವ ಗಂಭೀರ ಆರೋಪವೆಂದರೆ, ಸ್ಥಳೀಯ ಕಂದಾಯ ಇಲಾಖೆ, ಪೊಲೀಸ್ ಠಾಣೆ ಮತ್ತು ಗಣಿ ಹಾಗೂ ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು ದಂಧೆಕೋರರ ಜೊತೆ ಅಪವಿತ್ರ ಮೈತ್ರಿ ಮಾಡಿಕೊಂಡಿದ್ದಾರೆ. ಹಗಲು-ರಾತ್ರಿ ಜೆಸಿಬಿಗಳು ಮಣ್ಣು ಅಗೆಯುತ್ತಿದ್ದರೂ, ನೂರಾರು ಟಿಪ್ಪರ್‌ಗಳು ಓಡಾಡುತ್ತಿದ್ದರೂ ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತಿರುವುದು ಯಾಕೆ?
💰 ಗಣಿ ಅಧಿಕಾರಿಗಳ ಐಶ್ವರ್ಯದ ರಹಸ್ಯವೇನು..?

ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು ಈ ಅಕ್ರಮಕ್ಕೆ ರಕ್ಷಾಕವಚದಂತೆ ನಿಂತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಅಕ್ರಮ ಆಸ್ತಿ ಗಳಿಕೆ:-
ಸಾಧಾರಣ ವೇತನ ಪಡೆಯುವ ಅಧಿಕಾರಿಗಳು ಇಂದು ಬ್ರಹ್ಮಾವರ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಕೋಟ್ಯಂತರ ರೂಪಾಯಿ ಬೆಲೆಬಾಳುವ ಆಸ್ತಿ, ಐಷಾರಾಮಿ ಕಾರು ಹಾಗೂ ಬಂಗಲೆಗಳನ್ನು ಹೊಂದಿದ್ದಾರೆ.
ಐಷಾರಾಮಿ ಬದುಕು:-
ಮಣ್ಣಿನ ದಂಧೆಯಿಂದ ಬರುತ್ತಿರುವ ‘ಕಮಿಷನ್’ ಹಣದಿಂದಲೇ ಈ ಅಧಿಕಾರಿಗಳ ಐಶ್ವರ್ಯ ವೃದ್ಧಿಸುತ್ತಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಲೋಕಾಯುಕ್ತ ದಾಳಿಗೆ ಆಗ್ರಹ:-
“ಈ ಭ್ರಷ್ಟ ಅಧಿಕಾರಿಗಳ ಬ್ಯಾಂಕ್ ಖಾತೆ ಮತ್ತು ಆಸ್ತಿಯನ್ನು ಪರಿಶೀಲಿಸಿದರೆ ದಂಧೆಯ ಅಸಲಿ ಮುಖವಾಡ ಕಳಚಲಿದೆ. ಕೂಡಲೇ ಲೋಕಾಯುಕ್ತರು ಇವರ ಮೇಲೆ ದಾಳಿ ನಡೆಸಬೇಕು” ಎಂದು ಸ್ಥಳೀಯ ಹೋರಾಟಗಾರರು ಒತ್ತಾಯಿಸಿದ್ದಾರೆ.
📢 ವರದಿಯ ಮುಖ್ಯಾಂಶಗಳು:
🚜 ಸರ್ಕಾರಿ ಭೂಮಿ ಬಲಿ:-
ಬ್ರಹ್ಮಾವರದ ಬೆಲೆ ಬಾಳುವ ಸರ್ಕಾರಿ ಜಾಗಗಳಲ್ಲಿ ಅಕ್ರಮವಾಗಿ ಗುಡ್ಡಗಳನ್ನು ಕುಸಿಯುವಂತೆ ಮಣ್ಣು ತೆಗೆಯಲಾಗುತ್ತಿದೆ.
👮 ಪೊಲೀಸ್-ಕಂದಾಯ ಇಲಾಖೆ ಮೌನ:-

ದೂರು ನೀಡಿದರೂ ಕ್ರಮ ಕೈಗೊಳ್ಳದ ಅಧಿಕಾರಿಗಳು, ಮಾಫಿಯಾಕ್ಕೆ ಫುಲ್ ಪ್ರೊಟೆಕ್ಷನ್!
📉 ರಾಜಸ್ವ ಸೋರಿಕೆ:-
ಸರ್ಕಾರಕ್ಕೆ ಸಲ್ಲಬೇಕಾದ ಕೋಟ್ಯಂತರ ರೂಪಾಯಿ ರಾಯಲ್ಟಿ ಹಣ ಅಧಿಕಾರಿಗಳ ಮತ್ತು ದಂಧೆಕೋರರ ಜೇಬು ಸೇರುತ್ತಿದೆ.
⚠️ ಪರಿಸರಕ್ಕೆ ಕುತ್ತು:-
ಅವೈಜ್ಞಾನಿಕ ಗಣಿಗಾರಿಕೆಯಿಂದ ಭವಿಷ್ಯದಲ್ಲಿ ಭೂಕುಸಿತದ ಭೀತಿ ಎದುರಾಗಿದೆ.
💥 ಸಚಿವರಿಗೆ ನೇರ ಸವಾಲು:-
ಕಂದಾಯ ಸಚಿವರೆ ಹಾಗೂ ಗಣಿ ಸಚಿವರೆ ಗಮನಿಸಿ! ಬ್ರಹ್ಮಾವರದಲ್ಲಿ ನಿಮ್ಮ ಇಲಾಖೆಯ ಅಧಿಕಾರಿಗಳೇ ಸರ್ಕಾರಿ ಆಸ್ತಿಯನ್ನು ಮಾರಾಟಕ್ಕಿಟ್ಟಿದ್ದಾರೆ.
ಸಾರ್ವಜನಿಕರ ಆಕ್ರೋಶದ ಕಟ್ಟೆ ಒಡೆಯುವ ಮುನ್ನ ಈ ಭ್ರಷ್ಟ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಜರುಗಿಸುವಿರಾ? ಅಥವಾ ಮಾಫಿಯಾದ ಹಣದ ಪ್ರಭಾವಕ್ಕೆ ಸರ್ಕಾರವೂ ಮೌನವಾಗುತ್ತದೆಯೇ? “ಬ್ರಹ್ಮಾವರದ ಮಣ್ಣು ಮಾರಾಟವಾಗುತ್ತಿಲ್ಲ, ಇಲ್ಲಿನ ಅಧಿಕಾರಿಗಳ ಪ್ರಾಮಾಣಿಕತೆ ಮಾರಾಟವಾಗಿದೆ. ಕೂಡಲೇ ಉನ್ನತ ಮಟ್ಟದ ತನಿಖೆಯಾಗದಿದ್ದರೆ ತಾಲೂಕು ಕಚೇರಿಗೆ ಮುತ್ತಿಗೆ ಹಾಕಲಾಗುವುದು” ಸಾರ್ವಜನಿಕರ ಎಚ್ಚರಿಕೆ.
ವರದಿ:ಆರತಿ.ಗಿಳಿಯಾರು.ಉಡುಪಿ

