ಶ್ರೀಶಾರದಾದೇವಿ ಸತ್ಸಂಗ ಕೇಂದ್ರ ದಿಂದ – ಶಾರದಾಮಾತೆ ಜಯಂತ್ಯುತ್ಸವ.
ಚಳ್ಳಕೆರೆ ಡಿ.20

ನಗರದ ಶ್ರೀಶಾರದಾದೇವಿ ಸತ್ಸಂಗ ಕೇಂದ್ರ ದಿಂದ ಶ್ರೀಮಾತೆ ಶಾರದಾದೇವಿಯವರ 173 ನೇ. ಜಯಂತ್ಯುತ್ಸವ ಸತ್ಸಂಗ ಕಾರ್ಯಕ್ರಮವನ್ನು ತ್ಯಾಗರಾಜ ನಗರದ ಶ್ರೀದತ್ತ ಮಂದಿರದಲ್ಲಿ ಡಿಸೆಂಬರ್ 21 ರ ಭಾನುವಾರ ಬೆಳಗ್ಗೆ 10 ಗಂಟೆಯಿಂದ ಆಯೋಜಿಸಿದ್ದು ಶ್ರೀಮತಿ ಸುಮಾ ಪ್ರಕಾಶ್ ಮತ್ತು ಸಂಗಡಿಗರಿಂದ ಶ್ರೀಸೌಂದರ್ಯ ಲಹರಿ ಪಾರಾಯಣ, ನವಲಗುಂದದ ಶ್ರೀಶಾರದೇಶ್ವರಿ ಆಶ್ರಮದ.

ಅಧ್ಯಕ್ಷರಾದ ಪೂಜ್ಯ ಮಾತಾಜೀ ಅನನ್ಯಮಯೀ ಅವರಿಂದ “ಶ್ರೀಶಾರದಾ ಗಾನ ಲಹರಿ” ಚಳ್ಳಕೆರೆ ಶ್ರೀಶಾರದಾಶ್ರಮದ ಅಧ್ಯಕ್ಷರಾದ ಮಾತಾಜೀ ತ್ಯಾಗಮಯೀ ಅವರಿಂದ “ಆಧುನಿಕ ಬದುಕಿಗೆ ಶ್ರೀಮಾತೆ ಶಾರದಾದೇವಿಯವರ ಜೀವನ-ಸಂದೇಶಗಳ ಪ್ರಸ್ತುತತೆ” ಎಂಬ ವಿಷಯವಾಗಿ ಪ್ರವಚನ, ಅನ್ನ ಪ್ರಸಾದದ ವ್ಯವಸ್ಥೆ ಮಾಡಲಾಗಿದೆ ಎಂದು ಶ್ರೀಶಾರದಾದೇವಿ ಸತ್ಸಂಗ ಕೇಂದ್ರದ ಮುಖ್ಯಸ್ಥರಾದ ಶ್ರೀಮತಿ ಎಚ್.ಲಕ್ಷ್ಮೀದೇವಮ್ಮ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.

