ತಾರಾಪೂರ ಶಾಲೆಯ ಶಿಕ್ಷಕರಾದ ಅಶೋಕ್ ಬಡಿಗೇರವರಿಗೆ – ರಾಜ್ಯಮಟ್ಟದ ಶಿಕ್ಷಣ ರತ್ನ ಪ್ರಶಸ್ತಿ.
ತಾರಾಪೂರ ಡಿ.21

ಆಲಮೇಲ ಕಾವ್ಯಶ್ರೀ ಚಾರಿಟೇಬಲ್ ಟ್ರಸ್ಟ್ ಕರ್ನಾಟಕ ಮತ್ತು ಯುಗದರ್ಶಿನಿ ಮಹಿಳಾ ಫೌಂಡೇಶನ್.. ವಿಜಯಪುರ ಇವರ ಸಂಯುಕ್ತ ಆಶ್ರಯದಲ್ಲಿ ವಿಜಯಪುರ ಕವಿ ಕಾವ್ಯ ಸಂಭ್ರಮ -2025 ದಿ : 20-12-2025 ಶನಿವಾರ, ವಿಜಯಪುರದ ಸ್ವಂತ ಅಣ್ಣಮ್ಮನವರ ಚರ್ಚನಲ್ಲಿ ರತ್ನ ಸಮ್ಮಾನ.ಸುವರ್ಣ ಕರ್ನಾಟಕ ಪತ್ರಕರ್ತರ ಸಂಘದ ರಾಜ್ಯ ಅಧ್ಯಕ್ಷರಾದ ರೋ. ಡಾ, ಬಿ ಶಿವಣ್ಣನವರು ಮತ್ತು ಮುಖ್ಯ ಅತಿಥಿಯಾಗಿ ಡಾ, ಸರಸ್ವತಿ ಚಿಮ್ಮಲಗಿ, ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷರಾದ ಪಿ.ಬಿ ಅವಜಿರವರು ಇವರ ನೇತೃತ್ವದಲ್ಲಿ ನಡೆಯಿತು.

ಸಮಾರಂಭದಲ್ಲಿ ಕವಿಗೋಷ್ಠಿ, ವಿಚಾರಗೋಷ್ಠಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಸಾಧಕರಿಗೆ ಸನ್ಮಾನ ಸಮಾರಂಭ ಹಮ್ಮಿಕೊಂಡಿದ್ದರು. ಅದರಲ್ಲಿ GHPS ಹೊಸ ತಾರಾಪುರ ಶಾಲೆಯ ಹಿರಿಯ ಶಿಕ್ಷಕರಾದ ಶ್ರೀ. ಅಶೋಕ.ವಿ. ಬಡಿಗೇರ ಇವರಿಗೆ ರಾಜ್ಯಮಟ್ಟದ ‘ಶಿಕ್ಷಣರತ್ನ ಪ್ರಶಸ್ತಿ’ ನೀಡಿ ಗೌರವಿಸಲಾಯಿತು.

ತಾರಾಪುರ ಗ್ರಾಮದ ಶಂಕರಗೌಡ ಎಸ್ ಪಾಟೀಲ ಸಾತನಗೌಡ ಚಂ. ಬಿರಾದಾರ ರೇವಣಸಿದ್ದಪ್ಪ. ಜೋಗುರ ಶರಣಗೌಡ. ಬಿರಾದಾರ .ರಮೇಶ ಕಿಣಗಿ. ಸಮೀರ್ ಮುಲ್ಲಾ. ನಾಗರಾಜ ಮಳ್ಳಿ. ಶಿವು ಕಂಟೇಕೊರ. ದೌವಲಪ್ಪ ವಾಲಿಕಾರ. ನೀಲಕಂಠ ವಡ್ದರ್ ..ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷರಾದ. ಯಮನಪ್ಪ ಹರಜನ ಹಾಗೂ ತಾರಾಪುರ ಗ್ರಾಮದ ಹಿರಿಯರು ಹಾಗೂ ಶಾಲೆಯ ವಿದ್ಯಾರ್ಥಿಗಳು ಹಾಗೂ ಶಾಲೆಯ ಮುಖ್ಯಗುರುಗಳು, ಎಲ್ಲಾ ಶಿಕ್ಷಕರು ಬಳಗ, ಮತ್ತು BRP, CRP, ಶಿಕ್ಷಣ ಸಂಯೋಜಕರು ಅಭಿನಂದಿಸಿದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ರೇವಣಸಿದ್ದಯ್ಯ.ಜಿ ಹೀರೆಮಠ ಆಲಮೇಲ

