ಪಲ್ಸ್ ಪೋಲಿಯೋ ಎರಡು ಹನಿ ನಿರಂತರ ರಕ್ಷಣೆಗೆ – ನಾವು ಮಾನಸಿಕವಾಗಿ ಬದ್ಧರಾಗೋಣ.
ಅಮೀನಗಡ ಡಿ.21

ಪ್ರಾಥಮಿಕ ಆರೋಗ್ಯ ಕೇಂದ್ರ ಅಮೀನಗಡ ವತಿಯಿಂದ ಬಸ್ ಸ್ಟ್ಯಾಂಡ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮ ಆಯೋಜಿಸಲಾಗಿತ್ತು. ಆರೋಗ್ಯ ನಿರೀಕ್ಷಣಾಧಿಕಾರಿ ಎಸ್.ಎಸ್ ಅಂಗಡಿ, ಪ್ರಯೋಗಾಲಯ ತಾಂತ್ರಿಕ ಅಧಿಕಾರಿ ಕೆ.ಸಿ ಹೊನಕೇರಿ ಎರಡು ಹನಿಗಳು ಪೋಲಿಯೋ ವಿರುದ್ಧ ನಿರಂತರ ಗೆಲವು ಘೋಷಣೆ ಯೊಂದಿಗೆ ಮಗುವಿಗೆ ಪೋಲಿಯೋ ಹನಿ ಹಾಕುವ ಮುಖಾಂತರ ಕಾರ್ಯಕ್ಮಕ್ಕೆ ಚಾಲನೆ ನೀಡಿದರು. ಆಶಾ ಸರಸ್ವತಿ ಹಿರೇಮಠ ಪ್ರಯಾಣದಲ್ಲಿರುವ 0,5 ವಯೋಮಾನದ ಮಕ್ಕಳಿಗೆ ಪಲ್ಸ್ ಪೋಲಿಯೋ ಹನಿ ಹಾಕಲಾಯಿತು. ಭಾರತ ಪೋಲಿಯೋ ಮುಕ್ತವಾಗಿದ್ದರೂ ನೆರೆ ರಾಷ್ಟ್ರಗಳಲ್ಲಿ ಇನ್ನೂ ಪೋಲಿಯೋ ಪ್ರಕರಣಗಳು ಕಂಡು ಬಂದ ಕಾರಣ ಪೋಲಿಯೋ ಮುಕ್ತ ಭಾರತ ಮುಂದುವರಿಸಲು ಪಲ್ಸ್ ಪೋಲಿಯೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಯಾವುದೇ ಮಗು ವಂಚಿತರಾಗದಂತೆ ಆರೋಗ್ಯ ಇಲಾಖೆ ಪಲ್ಸ್ ಪೋಲಿಯೋ ಹನಿ ಕಡ್ಡಾಯವಾಗಿ ಪೋಲಿಯೋ ಹಾಕಿಸಬೇಕು. 21/12/2025 ರಂದು ಪಲ್ಸ್ ಪೋಲಿಯೋ ಕೇಂದ್ರಗಳಲ್ಲಿ ವಿವಿಧ ಕಾರಣಗಳಿದಿಂದ ಲಸಿಕೆ ಪಡೆಯದೇ ಇರುವ ಮಕ್ಕಳಿಗೆ ಮನೆ ಮನೆಗೆ ಭೇಟಿ ನೀಡಿ ಪೋಲಿಯೋ ಹಾಕಲಾಗುವುದು. ಕಡ್ಡಾಯವಾಗಿ ಹುಟ್ಟಿನಿಂದ 5 ವರ್ಷ ವಯೋ ಮಾನದವರಿಗೆ ಪಲ್ಸ್ ಪೋಲಿಯೋ ಹಾಕಿಸಲು ವಿವಿಧ ಊರಿಗೆ ತೆರಳುವ ಪ್ರಯಾಣಿಕರಿಗೆ ಮಾಹಿತಿ ನೀಡಲಾಯಿತು. ಪೋಲಿಯೋ ಲಸಿಕಾ ಭೂತಗಳಲ್ಲಿ ಆಶಾ, ಸ್ವಯಂ ಸೇವಕರು ಫಲಾನುಭವಗಳು ಪಾಲಕರು ಮಾನಸಿಕವಾಗಿ ಬದ್ಭರಾಗಿ ಭಾಗವಹಿಸಿದ್ದರು ಎಂದು ವರದಿಯಾಗಿದೆ.

