ಅಭಯ ಆಂಜನೇಯ ಸ್ವಾಮಿಯ – ಕಾರ್ತಿಕೋತ್ಸವ.
ಕೆ.ಅಯ್ಯನಹಳ್ಳಿ ಡಿ.21

ವಿಜಯನಗರ ಜಿಲ್ಲೆಯ ಕೊಟ್ಟೂರು ತಾಲೂಕಿನ ಕೆ.ಅಯ್ಯನಹಳ್ಳಿ ಅಭಯ ಆಂಜನೇಯ ಸ್ವಾಮಿಯ ಕಾರ್ತಿಕೋತ್ಸವ 20 ಡಿ 2025 ಶನಿವಾರ ದಂದು ನೆರವೇರಿತು. ಶ್ರೀ ಅಭಯ ಆಂಜನೇಯ ಸ್ವಾಮಿಯ ದೇವಸ್ಥಾನಕ್ಕೆ ಹೂವಿನ ಹಾರದ ಅಲಂಕಾರ ಮತ್ತು ದೀಪದ ಆರಾಧನೆ ಊರಿನ ಸಮಸ್ತ ದೈವಸ್ಥರು ಮತ್ತು ಗ್ರಾಮಸ್ಥರಿಂದ ಅಚ್ಚಲಾಯಿತು.
ಈ ಸ್ವಾಮಿಯ ದೇವಸ್ಥಾನಕ್ಕೆ ಕಾರ್ತಿಕ ಮಹೋತ್ಸವಕ್ಕೆ ಬಂದಂತ ಭಕ್ತಾದಿಗಳಿಗೆ ಲಾಡು ಉಂಡೆ ಪ್ರಸಾದ ನಡೆಸಲಾಯಿತು. ಈ ಸಂದರ್ಭದಲ್ಲಿ ಊರಿನ ಸಮಸ್ತ ಭಕ್ತಾದಿಗಳು ಮುಖಂಡರು ಯುವಕರು ಉಪಸ್ಥಿತರಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಪ್ರದೀಪ್ ಕುಮಾರ್ ಸಿ ಕೊಟ್ಟೂರು

