ಶರಣ ಸಾಹಿತ್ಯ ಪರಿಷತ್ ತಾಲೂಕು ಕದಳಿ ಮಹಿಳಾ – ವೇದಿಕೆಯ ಘಟಕದಿಂದ ದತ್ತಿ ಉಪನ್ಯಾಸ.

ಕೆ ಹೊಸಹಳ್ಳಿ ಡಿ.21

ವಚನ ಸಾಹಿತ್ಯವು ಸಮಾಜದ ಅಸಮಾನತೆ ಮೂಡ ನಂಬಿಕೆ ಜಾತೀಯತೆಯನ್ನು ಹೋಗಲಾಡಿಸಲು ಶರಣರಿಂದ ರಚಿತವಾಗಿರುವ ಸಾರವನ್ನು ಎಲ್ಲರೂ ಅರ್ಥೈಸಿಕೊಂಡು ಜೀವನ ನಡೆಸಬೇಕು ಎಂದು ಶರಣ ಸಾಹಿತ್ಯ ಪರಿಷತ್ತಿನ ವಿಜಯನಗರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎನ್.ಎಂ ರವಿಕುಮಾರ್ ತಿಳಿಸಿದರು. ಹೊಸಹಳ್ಳಿ ಗ್ರಾಮದ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಶರಣ ಸಾಹಿತ್ಯ ಪರಿಷತ್ ತಾಲೂಕು ಘಟಕದಿಂದ ಆಯೋಜಿಸಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮಹನೀಯರು ವಿದ್ವಾಂಸರಿಂದ ಸಾಹಿತ್ಯ ಶ್ರೀಮಂತ ಗೊಂಡಿದೆ ಕನ್ನಡ ಸಾಹಿತ್ಯದ ಜೊತೆಗೆ ಉದ್ದೇಶವು ಶರಣ ಸಾಹಿತ್ಯ ಪರಿಷತ್ ಹೊಂದಿದ್ದು ಶರಣರ ವಚನಾಮೃತ ಸಾಧ್ಯ ಎಂದರು. ಶರಣ ಸಾಹಿತ್ಯ ಪರಿಷತ್ತು ತಾಲೂಕು ಘಟಕ ಕೂಡ್ಲಿಗಿ ಹಾಗೂ ಕದಳಿ ಮಹಿಳಾ ವೇದಿಕೆ ಕೂಡ್ಲಿಗಿ ತಾಲೂಕು ಘಟಕದ ವತಿಯಿಂದ ವೇದಮೂರ್ತಿ ಸೊನ್ನದ ಮುರುಡಿ ಮಠದ ಶ್ರೀ ಸಿದ್ದಲಿಂಗಯ್ಯ ಶಾಸ್ತ್ರಿ ಅವರ ಹಾಗೂ ವಂಶಸ್ಥರ ದತ್ತಿ ಎಂಬಿ ಅಯ್ಯನಹಳ್ಳಿ ದತ್ತಿ ಉಪನ್ಯಾಸ ಕಾರ್ಯಕ್ರಮ ಜರುಗಿತು.

ಇದೇ ವೇಳೆ ಡಾ, ಎ.ಕರಿಬಸಪ್ಪ ಶರಣ ಸಾಹಿತ್ಯ ಪ್ರಸಾರದ ಪ್ರಸ್ತುತತೆ ಕುರಿತು ಮಾತನಾಡಿ ಸಾಹಿತ್ಯದ ಪ್ರಕಾರಗಳಲ್ಲಿ ವಚನ ಸಾಹಿತ್ಯ ತುಂಬಾ ಗಮನ ಸೆಳೆಯುವಂತ ಪ್ರಾಮುಖ್ಯತೆಯನ್ನು ಹೊಂದಿದೆ. ತಂತ್ರಜ್ಞಾನ ಮತ್ತು ಕೃತಕಮತಿ ಯುಗದಲ್ಲಿ ವಚನಗಳ ಓದುಗರ ಸಂಖ್ಯೆ ಕ್ಷೀಣವಾಗಿದೆ. ವಚನಗಳನ್ನು ಓದುವ ಮೂಲಕ ಪ್ರತಿಯೊಬ್ಬರು ಅವುಗಳ ಮಹತ್ವವನ್ನು ತಿಳಿದು ಕೊಳ್ಳಬೇಕಿದೆ ಎಂದು ಉಪನ್ಯಾಸ ನೀಡಿದರು ಹಾಗೂ ಶ್ರೀಮತಿ ಕೆ.ಎಸ್ ಸ್ನೇಹ ಶರಣೆ ಅಕ್ಕಮಹಾದೇವಿ ಜೀವನ ಕುರಿತು ಸ್ವವಿವರವಾಗಿ ತಿಳಿಸಿದರು ಉಪನ್ಯಾಸ ನೀಡಿದರು.

ನಿವೃತ್ತ ಉಪನ್ಯಾಸಕರಾದ ವಸಂತ ಸಜ್ಜನ್ ಮಾತನಾಡಿ ಬಸವಣ್ಣನವರು ಅಲ್ಲಮಪ್ರಭುಗಳು ಸರ್ವಜ್ಞ ಅಕ್ಕ ಮಹಾದೇವಿ ಸೇರಿದಂತೆ ಅನೇಕ ವಚನಕಾರರು ಬರೆದಿರುವ ಪ್ರತಿಯೊಂದು ವಚನವು ಸಹ ತನ್ನದೇ ಆದ ಮಹತ್ವವನ್ನು ಹೊಂದಿದೆ. ವಚನ ಸಾಹಿತ್ಯ ಭಾರತದಲ್ಲಷ್ಟೇ ಅಲ್ಲದೆ ವಿದೇಶಗಳಲ್ಲಿ ವಚನಗಳ ವಾಚನಕ್ಕೆ ತುಂಬಾ ಪ್ರೋತ್ಸಾಹ ನೀಡುತ್ತಿದ್ದಾರೆ. ವಚನಗಳು ಅಧ್ಯಯನ ದಿಂದ ವಿದ್ಯಾರ್ಥಿಗಳಲ್ಲಿ ತಾಳ್ಮೆ ಜ್ಞಾನ ಪ್ರಸಾರ ವಚನಗಳ ಶ್ರೇಷ್ಠತೆಯನ್ನು ಪಡೆದು ಕೊಳ್ಳಬಹುದಾಗಿದೆ ಎಂದರು.

12 ನೇ. ಶತಮಾನದ ಬಸವಾದಿ ಶರಣರ ವಚನಗಳ ಸಾರವು ಮನುಷ್ಯನ ಸಾರ್ಥಕ ಬದುಕಿಗೆ ದಾರಿ ದೀಪವಾಗಲಿವೆ. ಎಂದು ಪ್ರಸ್ತಾವಿಕವಾಗಿ ಶರಣ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿ ಕೆ.ಎಸ್ ವೀರೇಶ್ ಮಾತನಾಡಿದರು. ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾದ ಹೆಚ್.ಕೆ ವೆಂಕಟೇಶ್ವರ ರಾವ್, ಪ್ರಗತಿಪರ ರೈತ ಪೂಜಾರಹಳ್ಳಿ ತಿಪ್ಪೇಸ್ವಾಮಿ, ಶರಣ ಸಾಹಿತ್ಯ ಪರಿಷತ್ತಿನ ತಾಲೂಕು ಪ್ರಧಾನ ಕಾರ್ಯದರ್ಶಿ ಕೆ.ಎಸ್ ವೀರೇಶ್, ಕದಳಿ ಮಹಿಳಾ ವೇದಿಕೆ ಘಟಕದ ಅಧ್ಯಕ್ಷರಾದ ತಿಪ್ಪೀರಮ್ಮ ಸಕಲಪುರದ ಹಟ್ಟಿ,ಶರಣ ಗೌಡ, ಎನ್.ಎಸ್ ತಿಪ್ಪೇಸ್ವಾಮಿ, ಅಕ್ಕ ಮಹಾದೇವಿ, ಸಿದ್ದನಗೌಡ, ಸೇರಿದಂತೆ ಇತರರ ಸಾರ್ವಜನಿಕರು ಉಪಸ್ಥಿತರಿದ್ದರು.

ಹೋಬಳಿ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಕೆ.ಎಸ್ ವೀರೇಶ್ ಕೆ ಹೊಸಹಳ್ಳಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button