ಕೆ.ಹೊಸಹಳ್ಳಿಯಲ್ಲಿ ಸಡಗರದ ಪಾಂಡುರಂಗ – ದಿಂಡಿ ಉತ್ಸವ.
ಕೆ ಹೊಸಹಳ್ಳಿ ಡಿ.21

ಕೂಡ್ಲಿಗಿ ತಾಲ್ಲೂಕಿನ ಕೆ ಹೊಸಹಳ್ಳಿ ಪಟ್ಟಣದ ಡಾ, ಬಿ.ಆರ್ ಅಂಬೇಡ್ಕರ್ ನಗರದಲ್ಲಿ ದಲಿತ ಸಮುದಾಯದಿಂದ 12 ನೇ. ವರ್ಷದ ಪಾಂಡುರಂಗ ದಿಂಡಿ ಉತ್ಸವ ಗುರುವಾರ ಸಡಗರದಿಂದ ಜರುಗಿತು. ಬೆಳಿಗ್ಗೆ ಕಾಕಡಾರತಿ, ಪಾರಾಯಣ, ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಬಳಿಕ ಅಲಂಕೃತ ಪಾಂಡುರಂಗ ವಿಠಲ ದೇವರ ಭಾವಚಿತ್ರ ಹಾಗೂ ಕುಂಭ ಕಳಸ ಹೊತ್ತು ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಲಾಯಿತು. ಎಲ್ಲ ದೇವಸ್ಥಾನಗಳಲ್ಲಿ ಪೂಜೆ ಸಲ್ಲಿಸಿ ಮೆರವಣಿಗೆ ಮೂಲ ಪಾಂಡುರಂಗ ದೇವಸ್ಥಾನಕ್ಕೆ ಆಗಮಿಸಿತು. ಸಾಮೂಹಿಕ ಭಜನೆ, ವಾದ್ಯ ವೃಂದದ ಕೈಚಳಕ ಮೆರುಗು ನೀಡಿದವು. ದೇವಸ್ಥಾನದಲ್ಲಿ ಕೀರ್ತನೆ ಮತ್ತು ಯಲ್ಲಮ್ಮನ ಕಥೆ ನಡೆದವು. ಮಂಗಳಾರತಿ ಬಳಿಕ ದಿಂಡಿ ಉತ್ಸವ ಸಂಪನ್ನ ಗೊಂಡಿತು. ಮರಿಬಿಹಾಳ್ ಹನುಮಂತಜ್ಜ ಗುರುಗಳು, ಶಿವಪುರ ರಾಜಣ್ಣ, ಶಿವಪುರ ನಾಗಪ್ಪ ಧಾರ್ಮಿಕ ಕಾರ್ಯಕ್ರಮಗಳ ನೇತೃತ್ವ ವಹಿಸಿದ್ದರು. ಮುಖಂಡರಾದ ಸಣ್ಣ ನಾಗಪ್ಪ, ಗುಂಡಜ್ಜರ ತಿಪ್ಪೆರುದ್ರಪ್ಪ, ಬೇಲಿಗೌಡ್ರು ಮಾರಪ್ಪ, ಕೆ ನಾಗಪ್ಪ, ಲೋಕಿಕೆರೆ ದುರ್ಗಪ್ಪ, ಈ ಮೂರ್ತಿ, ದಾಸಪ್ಪರು ಪರಸಪ್ಪ, ನೀರುಗಂಟೆ ಸುರೇಶ್, ಸಿ.ಬಿ ನಾಗೇಶ್ ಕುರುಬ ಸಮಾಜದ ಮುಖಂಡ, ಯಜಮಾನ ಮಾಂತಪ್ಪ, ಶೇಖರಪ್ಪ ಎಸ್, ಎರಿಸ್ವಾಮಿ, ಮಲಿಯಪ್ಪ, ಹನುಮಂತಪ್ಪ, ತೆಲುಗು ಮಾಂತೇಶ್, ಕೃಷಿ ಇಲಾಖೆ ಸಿಬ್ಬಂದಿ ರಾಜಪ್ಪ ಸೇರಿದಂತೆ ಗ್ರಾಮದ ಮಾದಿಗ ಸಮಾಜದ ಅನೇಕ ಮುಖಂಡರು, ಭಕ್ತಾದಿಗಳು, ಮಹಿಳೆಯರು ಭಾಗವಹಿಸಿದ್ದರು.
ಹೋಬಳಿ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಕೆ.ಎಸ್ ವೀರೇಶ್ ಕೆ ಹೊಸಹಳ್ಳಿ

