ಪಿ.ಕೆ.ಪಿ.ಎಸ್ ನೂತನ ಅಧ್ಯಕ್ಷರಿಗೆ ಶಾಸಕ – ಅಶೋಕ ಮನಗೂಳಿ ಯವರಿಂದ ಸನ್ಮಾನ.
ಹಿಕ್ಕನಗುತ್ತಿ ಡಿ.21

ಆಲಮೇಲ ತಾಲೂಕಿನ ಹಿಕ್ಕನಗುತ್ತಿ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘ ನಿಯಮಿತ ಹಿಕ್ಕನಗುತ್ತಿ ನೂತನ ಅಧ್ಯಕ್ಷರಾಗಿ ನಾಗಪ್ಪ ಭೀಮಶ್ಯಾ ಬಿರಾದಾರ ಆಯ್ಕೆ ಯಾಗಿರುವದರಿಂದ ಸಿಂದಗಿಯ ಶಾಸಕ ರಾದ ಅಶೋಕ್ ಮನಗೂಳಿ ಅವರು ನಾಗಪ್ಪ ಭೀಮಶ್ಯಾ ಬಿರಾದಾರ ಹಾಗೂ ಹಾಗೂ ಮಲ್ಲಕ್ಕಮ್ಮ ರೋಡಗಿ ಮಾಜಿ ಪಿಕೆಪಿಎಸ್ ಅಧ್ಯಕ್ಷರು, ಮತ್ತು ಸದಸ್ಯರುಗಳಾದ ಪಿರಪ್ಪ ಖಜೂರಗಿ, ಗುರಣ್ಣ ಸಣ್ಣಮನಿ, ಕಾಶಿನಾಥ್ ಕಡಣಿ, ಹಣಮಂತ. ತಳವಾರ. ಇವರನ್ನು ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಿ ಮಾತನಾಡಿ ಗ್ರಾಮೀಣ ಕೃಷಿ ಸಹಕಾರ ಸಂಘದಲ್ಲಿ ರೈತರಿಗೆ ಬರತಕ್ಕಂತ ಸೌಲತ್ತುಗಳನ್ನು ಪ್ರಾಮಾಣಿಕತೆ ಯಿಂದ ರೈತರಿಗೆ ಮುಟ್ಟಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಬಸವರಾಜ ಬಾಗೇವಾಡಿ. ಎಪಿಎಂಸಿ ಅಧ್ಯಕ್ಷರು ಆಲಮೇಲ, ಎಚ್.ಎಮ್ ಯಡಗಿ ಅಹಿಂದ ನಾಯಕರು, ಮಡಿವಾಳಪ್ಪ ಗೊಟಗುಣಕಿ, ನಿಂಗಣ್ಣ ಬಿರಾದಾರ, ಮಾಂತಪ್ಪ ಬಾದನ್, ಶಂಕ್ರಪ್ಪ ಬಾದನ್,. ಹನುಮಂತ್ ಬಾದನ್, ಸಿದ್ದರಾಮ್ ಬಾದಾನ್, ಶಿವಯೋಗಪ್ಪ ಸಾತಲಗಾಂವ, ಪುಂಡಲೀಕ. ಬಿರಾದಾರ ಶರಣಪ್ಪ ಜಾಲವಾದಿ. ದೇವಪ್ಪ ಖಜೂರಗಿ, ಮಲ್ಕಪ್ಪ ಖಜುರಗಿ, ಚೆನ್ನಪ್ಪ ಕೆಮಶೆಟ್ಟಿ , ಶ್ರೀಶೈಲ್ ಚರಪ್ಪಗೋಳ, ನಾಗರಹಳ್ಳಿ ಗ್ರಾಮದ ಶ್ರೀಶೈಲ್ ಪೂಜಾರಿ, ಚಿದಾನಂದ್ ಬಿರಾದಾರ, ಗುರಣ್ಣ ಪಾಟೀಲ್, ಚಾಂದಕೋಟೆ ಗ್ರಾಮದ ಸಂಗನಗೌಡ ಬಿರಾದಾರ್, ಧನೇಶ್ ಸಿಂದಗಿ, ಬಳಗಾನೂರು ಗ್ರಾಮದ ನಿಂಗಣ್ಣ ಜೇರಟಗಿ, ಗಣಿಯಾರ್ ಗ್ರಾಮದ ಮಲ್ಲು ನಂದಶೆಟ್ಟಿ ಸಂತೋಷ್ ನಂದಶೆಟ್ಟಿ, ಬಬಲೇಶ್ವರ ಗ್ರಾಮದ ಕುಮಾರ ದೇಸಾಯಿ ಹಾಗೂ ಹಿಕ್ಕನಗುತ್ತಿ ಗಣಿಯಾರ, ಕಲಹಳ್ಳಿ, ಬೆನಕೋಟಿಗಿ ರಾoಪುರ ಪಿಎ, ಗಣಿಯರ ತಾಂಡ, ರಾಂಪುರ ತಾಂಡ ರೈತರು ಭಾಗಿಯಾಗಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ರೇವಣಸಿದ್ದಯ್ಯ.ಜಿ ಹೀರೆಮಠ ಆಲಮೇಲ

