ಶ್ರೀಶಾರದಾಶ್ರಮದಲ್ಲಿ ಕೇನ ಉಪನಿಷತ್ – ಪ್ರವಚನ ಮಾಲಿಕೆ.
ಚಳ್ಳಕೆರೆ ಡಿ.22

ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದ ದೇವಸ್ಥಾನದಲ್ಲಿ ಡಿಸೆಂಬರ್ 23 ರಿಂದ 27 ರ ವರೆಗೆ ಪ್ರತಿ ದಿನ ಸಂಜೆ 5.30 ರಿಂದ 7.30 ರ ವರೆಗೆ ನರಹರಿ ನಗರದ ಶ್ರೀನರಹರಿ ಸದ್ಗುರು ಆಶ್ರಮದ ಪೀಠಾಧ್ಯಕ್ಷರಾದ ಪರಮ ಪೂಜ್ಯ ವೈ.ರಾಜಾರಾಮ್ ಗುರುಗಳಿಂದ “ಕೇನ ಉಪನಿಷತ್” ನ ಬಗ್ಗೆ ವಿಶೇಷ ಪ್ರವಚನ ಮಾಲಿಕೆ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಅಧ್ಯಕ್ಷರಾದ ಪೂಜ್ಯ ಮಾತಾಜೀ ತ್ಯಾಗಮಯೀ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.

