ಬೀದಿ ನಾಯಿಗಳ ನಿಯಂತ್ರಣ ಕುರಿತು – ಅಗತ್ಯ ಕ್ರಮ.
ಕೊಟ್ಟೂರು ಡಿ.22

ಕೊಟ್ಟೂರು ಪಟ್ಟಣ ಪಂಚಾಯತಿ ವತಿಯಿಂದ ಮಾನ್ಯ ಸರ್ವೋಚ್ಚ ನ್ಯಾಯಾಲಯ ಮತ್ತು ಎ.ಬಿ.ಸಿ ನಿಯಮಾವಳಿ 2023 ರ ಮಾರ್ಗ ಸೂಚಿಗಳಂತೆ ಕೊಟ್ಟೂರು ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ನಿಯಂತ್ರಣ ಕುರಿತು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿರತ್ತದೆ. ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಅಂದಾಜು 625 ಬೀದಿ ನಾಯಿಗಳು ಇರಬಹುದೆಂದು ಅಂದಾಜಿಸಲಾಗಿದ್ದು, ಉಜ್ಜಿನಿ ಸರ್ಕಲ್ ಬಳಿ ಬಾಲಕರ ಶಾಲೆಯ ಹತ್ತಿರ ನಾಯಿಗಳನ್ನು ಹಿಡಿದು ವಾಹನದಲ್ಲಿ ಹಾಕಲಾಗುತ್ತದೆ. ಈಗಾಗಲೇ ಶಾಲೆ, ಕಾಲೇಜು ಆವರಣ, ಸರ್ಕಾರಿ ಕಛೇರಿಗಳು, ಬಸ್ ನಿಲ್ದಾಣಗಳಲ್ಲಿ ಆಶ್ರಿತವಾಗಿರುವ ನಾಯಿಗಳ ಮಾಹಿತಿಗಳನ್ನು ಪಡೆದು ಆಯಾ ಶಾಲೆ/ಕಾಲೇಜು/ ಕಚೇರಿಗಳಲ್ಲಿ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿರುತ್ತದೆ.
ಹಾಗೂ ಘನ ತ್ಯಾಜ್ಯ ನಿರ್ವಹಣಾ ಘಟಕದಲ್ಲಿ ನಾಯಿಗಳಿಗೆ ಆಶ್ರಯ ಕೇಂದ್ರವನ್ನು ಸ್ಥಾಪಿಸಲಾಗಿದ್ದು, ಒಂದೊಂದು ನಾಯಿಯನ್ನು ಪ್ರತ್ಯೇಕವಾಗಿ ಇಡಲು ಕೆನಾಲ್ ಗಳ ವ್ಯವಸ್ಥೆ ಕಲ್ಲಿಸಲಾಗಿರುತ್ತದೆ. ಹಾಗೂ ಅವುಗಳಿಗೆ ಸಂತಾನಹರಣ ಶಸ್ತ್ರ ಚಿಕಿತ್ಸೆ, ರೇಬೀಸ್ ಚಿಕಿತ್ಸೆ ನೀಡುವುದರ ಜೊತೆಗೆ ಆರೋಗ್ಯದಲ್ಲಿ ಏರುಪೇರು ಉಂಟಾಗದಂತೆ ಪಶು ಇಲಾಖೆಯವರಿಗೆ ನಿಗಾ ವಹಿಸಲಾಗಿದೆ. ನಿತ್ಯ ನಾಯಿಗಳಿಗೆ ಅವುಗಳ ಗಾತ್ರಕ್ಕೆ ಅನುಗುಣವಾಗಿ ಆಹಾರ, ನೀರು ನೀಡುವ ಮೂಲಕ ಪೋಷಣೆ ಮಾಡ ಬೇಕಾಗಿರುತ್ತದೆ. ಸಾರ್ವಜನಿಕರು ಬೀದಿ ನಾಯಿಗಳಿಗೆ ಕಂಡಲ್ಲಿ ಆಹಾರ ಹಾಕುವಂತಿಲ್ಲ ಅವುಗಳಿಗೆ ಪಟ್ಟಣದ 4 ಕಡೆಗಳಲ್ಲಿ ಆಹಾರ ಹಾಕಲು ಸ್ಥಳಗಳನ್ನು ಗುರುತಿಸಲಾಗಿದ್ದು, ಗುರುತಿಸಲಾಗದ ಸ್ಥಳಗಳಲ್ಲಿಯೇ ಆಹಾರ ನೀಡ ಬೇಕಾಗಿರುತ್ತದೆ. ಬೀದಿ ನಾಯಿಗಳ ಕುರಿತಂತೆ ಸಾರ್ವಜನಿಕರು ದೂರುಗಳು ಹಾಗೂ ಸಲಹೆಗಳನ್ನು 8105486694 ಈ ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದು ಎಂದು ಸಾರ್ವಜನಿಕರಿಗೆ ತಿಳಿಸಲಾಗಿದೆ.
– ಶ್ರೀ ಎ.ನಸರುಲ್ಲಾ, ಮುಖ್ಯಾಧಿಕಾರಿಗಳು, ಪಟ್ಟಣ ಪಂಚಾಯತಿ, ಕೊಟ್ಟೂರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಪ್ರದೀಪ್ ಕುಮಾರ್ ಸಿ ಕೊಟ್ಟೂರು

