ಪೋಲಿಯೋ ಲಸಿಕೆ ಮಕ್ಕಳಿಗೆ ತಪ್ಪದೇ ಹಾಕಿಸಿ – ವಿ.ಕೆ ಗುರುಮಠ.
ಗದಗ ಡಿ.23

ಪೋಲಿಯೋ ಹನಿ ಐದು ವರ್ಷದ ಮಕ್ಕಳಿಗೆ ತಪ್ಪದೆ ಹಾಕಿಸುವ ಮೂಲಕ ಶಾಶ್ವತ ಅಂಗವಿಕಲತೆಯನ್ನು ತಡೆಯಬಹುದು. ಪೋಲಿಯೋ ಲಸಿಕೆಯ ಕೊಡುಗೆಯಲ್ಲಿ ರೋಟರಿ ಸಂಸ್ಥೆಯ ಸೇವೆ ಎಂದಿಗೂ ಮರೆಯಲಾಗದ್ದು ಎಂದು ಗದಗ ರೆವಿನ್ಯೂ ಡಿಸ್ಟಿಕ್ ಅಸಿಸ್ಟಂಟ್ ಗವರ್ನರ್ ವಿ.ಕೆ ಗುರುಮಠ ಹೇಳಿದರು.
ಅವರು ನಗರದ ಹಳೆಯ ಬಸ್ ನಿಲ್ದಾಣದಲ್ಲಿ ನಡೆದ ಪಲ್ಸ್ ಪೋಲಿಯೋ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಎರಡು ಹನಿ ಪೋಲಿಯೋ ಲಸಿಕೆ ಹಾಕುವ ಮೂಲಕ ಚಾಲನೆ ನೀಡಿದರು.
ಪೋಲಿಯೋ ಹನಿ ಮಕ್ಕಳ ಆರೋಗ್ಯ ದೃಷ್ಟಿಯಿಂದ ಅಗತ್ಯವಾಗಿದ್ದು ಪೋಲಿಯೋ ಮುಕ್ತ ಸಮಾಜ ನಿರ್ಮಾಣ ನಮ್ಮೆಲ್ಲರ ಆದ್ಯತೆಯಾಗಿದೆ ಎಂದರು. ರೋಟರಿ ಗದಗ ಸೆಂಟ್ರಲ್ ಅಧ್ಯಕ್ಷ ಚೇತನ ಅಂಗಡಿಯವರು ಲಸಿಕೆ ಹಾಕುವುದರಿಂದಾಗುವ ಮಹತ್ವ ಕುರಿತು ತಿಳಿಸಿದರು.
ಈ ಸಂದರ್ಭದಲ್ಲಿ ಕಾರ್ಯದರ್ಶಿ ರಾಜು ಉಮನಾಬಾದಿ, ಖಜಾಂಚಿ ಡಾ.ಪ್ರಭು ಗಂಜಿಹಾಳ, ಹಿರಿಯ ಸದಸ್ಯರಾದ ಮಂಜಣ್ಣ ಬೇಲೇರಿ, ಎಸ್.ಆಯ್ ಅಣ್ಣಿಗೇರಿ, ರಾಜು ಕುರುಡಗಿ, ರಾಜು ಮುಧೋಳ, ಮಧುಸೂದನ ಪುಣೇಕರ, ಬಿ.ಬಿ ಸಂಕನಗೌಡರ, ರಾಜು ಕಂಟಿಗೊಣ್ಣನ್ನವರ, ಮುರುಗೇಶ ಬಡ್ನಿ, ಮಲ್ಲಿಕಾರ್ಜುನ ಚಂದಪ್ಪನವರ, ಕೆ.ವಿ.ಪಾಟೀಲ, ಪ್ರಕಾಶ ಉಗಲಾಟ, ಹಾಗೂ ಆರೋಗ್ಯ ಇಲಾಖೆಯ ಸಜಿದಾನಂದ ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.
ರಾಜ್ಯ ಮಟ್ಟದ ವಿಶೇಷ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಡಾ, ಪ್ರಭು ಗಂಜಿಹಾಳ ಗದಗ

