🛑 ಬ್ರೇಕಿಂಗ್ ಅಪ್ಡೇಟ್ಸ್: ಮಹಿಳೆಯರ ಮೊಗದಲ್ಲಿ ಮಂದಹಾಸ, ಗೊಳಿಯಂಗಡಿ ಮಂದಾರ್ತಿ, ಕೋಟ, ಕುಂದಾಪುರ ಮಾರ್ಗವಾಗಿ ನೂತನ – KSRTC ಬಸ್ ಸಂಚಾರ ಆರಂಭ..!
ಉಡುಪಿ ಡಿ.22

ಕಾಂಗ್ರೆಸ್ ಗ್ಯಾರಂಟಿ ಸಕ್ಸಸ್:-

ಶಕ್ತಿ ಯೋಜನೆಯಡಿ ಗ್ರಾಮೀಣ ಮಹಿಳೆಯರಿಗೆ ಉಚಿತ ಪ್ರಯಾಣದ ಬಂಪರ್ ಕೊಡುಗೆ. ಯುವ ನಾಯಕನ ಹೋರಾಟಕ್ಕೆ ಜಯ:-ಅಜಿತ್ ಕುಮಾರ್ ಶೆಟ್ಟಿ ವಡ್ಡರ್ಸೆ ಅವರ ನಿರಂತರ ಪರಿಶ್ರಮದಿಂದ ಮಂಜೂರಾದ ಬಸ್ ಸೇವೆ. ಗಣ್ಯರ ದಂಡು: ರಾಜ್ಯ ಗ್ಯಾರಂಟಿ ಸಮಿತಿ ಉಪಾಧ್ಯಕ್ಷೆ ಪುಷ್ಪ ಅಮರನಾಥ್ ಸೇರಿ ಘಟಾನುಘಟಿ ನಾಯಕರ ಉಪಸ್ಥಿತಿಯಲ್ಲಿ ಉದ್ಘಾಟನೆ.

ನುಡಿದಂತೆ ನಡೆದ ಕಾಂಗ್ರೆಸ್ ಸರ್ಕಾರ, ವಡ್ಡರ್ಸೆಯಲ್ಲಿ ಸಾರಿಗೆ ಸಂಕಷ್ಟಕ್ಕೆ ಮುಕ್ತಿ!

ಉಡುಪಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿ ‘ಶಕ್ತಿ’ ಯೋಜನೆ ಇದೀಗ ಉಡುಪಿ ಜಿಲ್ಲೆಯ ಗ್ರಾಮೀಣ ಭಾಗದ ಮೂಲೆ ಮೂಲೆಯನ್ನೂ ತಲುಪುತ್ತಿದೆ. ಬ್ರಹ್ಮಾವರ ತಾಲ್ಲೂಕಿನ ವಡ್ಡರ್ಸೆ ಭಾಗದ ಜನರ ದಶಕಗಳ ಕಾಲದ ಸರ್ಕಾರಿ ಬಸ್ ಸೇವೆಯ ಬೇಡಿಕೆಯನ್ನು ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಜಿತ್ ಕುಮಾರ್ ಶೆಟ್ಟಿ ವಡ್ಡರ್ಸೆ ಅವರು ಈಡೇರಿಸುವ ಮೂಲಕ ಈ ಭಾಗದ ಜನಪ್ರಿಯ ನಾಯಕನಾಗಿ ಹೊರಹೊಮ್ಮಿದ್ದಾರೆ.

ಅದ್ದೂರಿ ಉದ್ಘಾಟನೆ:-
ಇಂದು ವಡ್ಡರ್ಸೆ ಬಸ್ ನಿಲ್ದಾಣದಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ, ಗ್ಯಾರಂಟಿ ಸಮಿತಿಯ ರಾಜ್ಯ ಉಪಾಧ್ಯಕ್ಷೆ ಪುಷ್ಪ ಅಮರನಾಥ್ ಅವರು ಬಸ್‌ಗೆ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಅವರು, “ಕಾಂಗ್ರೆಸ್ ಸರ್ಕಾರ ಮಹಿಳೆಯರ ಸಬಲೀಕರಣಕ್ಕೆ ಬದ್ಧವಾಗಿದೆ. ಈ ಶಕ್ತಿ ಬಸ್ ಸೇವೆ ಕೇವಲ ಪ್ರಯಾಣವಲ್ಲ, ಇದು ಮಹಿಳೆಯರ ಆರ್ಥಿಕ ಸ್ವತಂತ್ರದ ಸಂಕೇತ,” ಎಂದು ಬಣ್ಣಿಸಿದರು.

ಕಾಂಗ್ರೆಸ್ ನಾಯಕರ ಬದ್ಧತೆ:-
ಕಾರ್ಯಕ್ರಮದಲ್ಲಿ ಜಿಲ್ಲಾ ಗ್ಯಾರಂಟಿ ಸಮಿತಿ ಅಧ್ಯಕ್ಷೆ ಡಾ, ಸುನೀತಾ ಶೆಟ್ಟಿ, ಜಿಲ್ಲಾ ಕಾಂಗ್ರೆಸ್ ಕಾರ್ಯಧ್ಯಕ್ಷ ಕಿಶನ್ ಹೆಗ್ಡೆ, ಹಿರಿಯ ಮುಖಂಡರಾದ ದಿನೇಶ್ ಹೆಗ್ಡೆ ಮೊಳಹಳ್ಳಿ, ಮತ್ತು ಶಂಕರ್ ಕುಂದರ್ ಅವರು ಭಾಗವಹಿಸಿ, ಕಾಂಗ್ರೆಸ್ ಸರ್ಕಾರದ ಜನಪರ ಯೋಜನೆಗಳು ಪ್ರತಿ ಮನೆಗೆ ತಲುಪುತ್ತಿರುವುದಕ್ಕೆ ಸಾಕ್ಷಿಯಾದರು.

ಗ್ರಾಮೀಣ ಭಾಗಕ್ಕೆ ವರದಾನ:-
ಗೊಳಿಯಂಗಡಿ, ಮಂದಾರ್ತಿ, ಸೈಬರಕಟ್ಟೆ, ಬನ್ನಾಡಿ, ಕೋಟ ಮಾರ್ಗವಾಗಿ ಕುಂದಾಪುರಕ್ಕೆ ಸಂಚರಿಸುವ ಈ ಬಸ್, ಈ ಭಾಗದ ಸಾವಿರಾರು ವಿದ್ಯಾರ್ಥಿನಿಯರಿಗೆ ಹಾಗೂ ದುಡಿಯುವ ಮಹಿಳೆಯರಿಗೆ ಆಸರೆಯಾಗಲಿದೆ. ಅಜಿತ್ ಕುಮಾರ್ ಶೆಟ್ಟಿ ಅವರ ಈ ಜನಪರ ಕಾಳಜಿಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

ಭಾಗವಹಿಸಿದ ಪ್ರಮುಖರು:-
ಬ್ರಹ್ಮಾವರ ಗ್ಯಾರಂಟಿ ಸಮಿತಿ ಸದಸ್ಯರಾದ ಶ್ರೀನಿವಾಸ್ ವಡ್ಡರ್ಸೆ, ಸುಕುಮಾರ್ ಶೆಟ್ಟಿ ಕಾವಡಿ, ಚಂದ್ರ ಶೆಟ್ಟಿ, ಕಿರಣ್ ಶೆಟ್ಟಿ ಪಡುಮುಂಡ್, ರೇಖಾ ಪಿ. ಸುವರ್ಣ ಸೇರಿದಂತೆ ಕಾಂಗ್ರೆಸ್‌ನ ನೂರಾರು ಕಾರ್ಯಕರ್ತರು ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದರು.”ನುಡಿದಂತೆ ನಡೆದಿದ್ದೇವೆ, ಇನ್ನು ಮುಂದೆಯೂ ಜನಸಾಮಾನ್ಯರ ಪರವಾಗಿ ಹೋರಾಡುತ್ತೇವೆ” – ಇದು ವಡ್ಡರ್ಸೆಯಲ್ಲಿ ಮೊಳಗಿದ ಕಾಂಗ್ರೆಸ್ ವಿಜಯಘೋಷ!
ವರದಿ:ಆರತಿ.ಗಿಳಿಯಾರು.ಉಡುಪಿ

