🚨 ರಾಜ್ಯಮಟ್ಟದ ವಿಶೇಷ ತನಿಖಾ ವರದಿ 🚨ಹಿರಿಯಡ್ಕ ಪೊಲೀಸ್ ಠಾಣೆಯ ನಿರ್ಲಕ್ಷ್ಯ, ಕುಕ್ಕೆಹಳ್ಳಿ ಶಾಲೆಯಲ್ಲಿ ಮಕ್ಕಳ ಜೀವದ ಜೊತೆ ಚೆಲ್ಲಾಟ – ನ್ಯಾಯ ಕೇಳಿದ ಪೋಷಕರಿಗೆ ಬೆದರಿಕೆ..!
ಉಡುಪಿ ಡಿ.23

ಜಿಲ್ಲೆಯ ಹಿರಿಯಡ್ಕ ಸಮೀಪದ ಕುಕ್ಕೆಹಳ್ಳಿ ಪಿ.ಎಂ ಶ್ರೀ ಸರ್ಕಾರಿ ಶಾಲೆಯಲ್ಲಿ ನಡೆಯುತ್ತಿರುವ ಬಿಸಿಯೂಟದ ಹಗರಣ ಈಗ ಸ್ಫೋಟಕ ತಿರುವು ಪಡೆದಿದೆ. ಶಾಲೆಯ ಭ್ರಷ್ಟಾಚಾರವನ್ನು ಪ್ರಶ್ನಿಸಿದ ಪೋಷಕರಿಗೆ ಹೊರಗಿನ ಕಿಡಿಗೇಡಿಗಳಿಂದ ಬೆದರಿಕೆ ಕರೆಗಳು ಬರುತ್ತಿದ್ದರೂ, ಹಿರಿಯಡ್ಕ ಪೊಲೀಸ್ ಠಾಣಾಧಿಕಾರಿಗಳು ಮೌನಕ್ಕೆ ಶರಣಾಗಿರುವುದು ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
📞 ಪೋಷಕರಿಗೆ ಮಧ್ಯರಾತ್ರಿ ಬೆದರಿಕೆ ಕರೆ..!
ಶಾಲೆಯ ಎಸ್‌ಡಿಎಂಸಿ ಸದಸ್ಯರಾದ ಗಣಪತಿ ಸೇರಿಗಾರ್ ಅವರು ಶಾಲೆಯಲ್ಲಿ ನಡೆಯುತ್ತಿರುವ ಅಕ್ರಮಗಳನ್ನು ಬಯಲಿಗೆಳೆದಿದ್ದೇ ಅವರು ಮಾಡಿದ ದೊಡ್ಡ ತಪ್ಪಾಯಿತೇ? ಮುಖ್ಯೋಪಾಧ್ಯಾಯರ ಕುಮ್ಮಕ್ಕಿನಿಂದ ದಲಿತ ಸಂಘರ್ಷ ಸಮಿತಿಯ ಮುಖಂಡ ಶಾಮರಾಜ ಬೆರ್ತಿ ಎಂಬುವವರು ಗಣಪತಿ ಅವರಿಗೆ ಕರೆ ಮಾಡಿ, “ಮುಖ್ಯೋಪಾಧ್ಯಾಯರನ್ನು ಪ್ರಶ್ನಿಸಿದರೆ ನಿನ್ನನ್ನು ಸುಮ್ಮನೆ ಬಿಡುವುದಿಲ್ಲ, ನಿನ್ನ ಮೇಲೆ ಕೇಸ್ ಹಾಕಿ ಜೈಲಿಗೆ ಅಟ್ಟುತ್ತೇವೆ” ಎಂದು ಅಸಭ್ಯವಾಗಿ ವರ್ತಿಸಿ ಬೆದರಿಕೆ ಹಾಕಿದ್ದಾರೆ.
🛑 ಹಿರಿಯಡ್ಕ ಪೊಲೀಸರ ದಿವ್ಯ ನಿರ್ಲಕ್ಷ್ಯ:-
ಯಾರ ರಕ್ಷಣೆಗೆ ನಿಂತಿದೆ ಕಾನೂನು? ಈ ಜೀವ ಬೆದರಿಕೆ ಕುರಿತು ಗಣಪತಿ ಸೇರಿಗಾರ್ ಅವರು ಎಲ್ಲಾ ಸಾಕ್ಷ್ಯ ಗಳೊಂದಿಗೆ ಹಿರಿಯಡ್ಕ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಆದರೆ, ದಿನಗಳು ಕಳೆದರೂ ಹಿರಿಯಡ್ಕ ಠಾಣಾಧಿಕಾರಿಗಳು ಆರೋಪಿಗಳ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ.
ನಿರ್ಲಕ್ಷ್ಯದ ಆರೋಪ:-
ಬೆದರಿಕೆ ಕರೆ ಬಂದಿರುವ ಆಧಾರವಿದ್ದರೂ ಎಫ್‌ಐಆರ್ ದಾಖಲಿಸಲು ವಿಳಂಬ ಮಾಡುತ್ತಿರುವುದು ಪೊಲೀಸರು ಮತ್ತು ಪ್ರಭಾವಿಗಳ ನಡುವಿನ ‘ಒಳ ಒಪ್ಪಂದ’ವೇ ಎಂಬ ಶಂಕೆ ಮೂಡಿಸಿದೆ.
ಸಾರ್ವಜನಿಕರ ಪ್ರಶ್ನೆ:-
ಮಕ್ಕಳ ಜೀವಕ್ಕೆ ವಿಷ ನೀಡುತ್ತಿರುವವರನ್ನು ಮತ್ತು ಪೋಷಕರನ್ನು ಹೆದರಿಸುವವರನ್ನು ರಕ್ಷಿಸುತ್ತಿರುವ ಹಿರಿಯಡ್ಕ ಪೊಲೀಸರ ನಡೆ ಸಾರ್ವಜನಿಕ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.
🐛 ವಿಷಪೂರಿತ ಆಹಾರ – ಚರಂಡಿ ಪಾಲಾಗುತ್ತಿರುವ ಹಾಲು..!
ಶಾಲೆಯ ಅಡುಗೆ ಮನೆಯಲ್ಲಿ ಹುಳು ಬಿದ್ದ ಅಕ್ಕಿ ಮತ್ತು ಹಾಳಾದ ಬೇಳೆಯನ್ನು ಬಳಸಲಾಗುತ್ತಿದೆ. ಇದನ್ನು ವಿರೋಧಿಸಿದ ಪೋಷಕರ ವಿರುದ್ಧವೇ ಮುಖ್ಯೋಪಾಧ್ಯಾಯರು ಸೋಷಿಯಲ್ ಮೀಡಿಯಾದಲ್ಲಿ ಕಿಡಿಗೇಡಿಗಳ ಮೂಲಕ ಅಪಪ್ರಚಾರ ನಡೆಸುತ್ತಿದ್ದಾರೆ. ಸರ್ಕಾರ ಕೋಟ್ಯಂತರ ರೂಪಾಯಿ ಖರ್ಚು ಮಾಡುತ್ತಿದ್ದರೂ, ಮಕ್ಕಳಿಗೆ ಸಿಗಬೇಕಾದ ಹಾಲು ಇಲ್ಲಿ ಮಕ್ಕಳ ಹೊಟ್ಟೆ ಸೇರುವ ಬದಲು ಚರಂಡಿ ಪಾಲಾಗುತ್ತಿದೆ!
⚖️ ವರದಿಯ ಮುಖ್ಯಾಂಶಗಳು ಮತ್ತು ಆಗ್ರಹ:-
ಠಾಣಾಧಿಕಾರಿಗಳ ವಿರುದ್ಧ ಕ್ರಮ: ದೂರು ನೀಡಿದರೂ ಸ್ಪಂದಿಸದ ಹಿರಿಯಡ್ಕ ಠಾಣಾಧಿಕಾರಿಯ ನಿರ್ಲಕ್ಷ್ಯದ ಬಗ್ಗೆ ಉನ್ನತ ಪೊಲೀಸ್ ಅಧಿಕಾರಿಗಳು ತನಿಖೆ ನಡೆಸಬೇಕು.
ತಕ್ಷಣದ ಬಂಧನ:-
ಪೋಷಕರಿಗೆ ಬೆದರಿಕೆ ಹಾಕಿದ ಶಾಮರಾಜ ಬೆರ್ತಿ ಹಾಗೂ ಇದಕ್ಕೆ ಪ್ರಚೋದನೆ ನೀಡಿದ ಮುಖ್ಯೋಪಾಧ್ಯಾಯರನ್ನು ತಕ್ಷಣ ಬಂಧಿಸಬೇಕು.
ಸೈಬರ್ ತನಿಖೆ:-
ಪೋಷಕರ ವಿರುದ್ಧ ಜಾಲತಾಣಗಳಲ್ಲಿ ಅವಹೇಳನಕಾರಿ ಪೋಸ್ಟ್ ಹಾಕುತ್ತಿರುವ ಕಿಡಿಗೇಡಿಗಳ ವಿರುದ್ಧ ಕೇಸ್ ದಾಖಲಾಗಬೇಕು.”ಕಾನೂನು ರಕ್ಷಕರು ಸುಮ್ಮನಿದ್ದರೆ ಭ್ರಷ್ಟರಿಗೆ ಆನೆಬಲ ಬಂದಂತಾಗುತ್ತದೆ. ಹಿರಿಯಡ್ಕ ಪೊಲೀಸರು ತಕ್ಷಣ ಎಚ್ಚೆತ್ತುಕೊಳ್ಳದಿದ್ದರೆ ಶಾಲೆಯ ನೂರಾರು ಪೋಷಕರು ಬೀದಿಗಿಳಿದು ಹೋರಾಟ ಮಾಡುವುದು ನಿಶ್ಚಿತ.”
ವರದಿ:ಆರತಿ.ಗಿಳಿಯಾರು.ಉಡುಪಿ

