ನಿರಂತರ ನಾಮಜಪ ದಿಂದ ಭಗವಂತನ ದರ್ಶನ – ಸಂತೋಷಕುಮಾರ್ ಅಭಿಮತ.
ಚಳ್ಳಕೆರೆ ಡಿ.23

ಶಾರದಾದೇವಿಯವರು ತಿಳಿಸಿದಂತೆ ನಿರಂತರ ನಾಮಜಪ ಮಾಡುವುದರಿಂದ ಭಗವಂತನ ದರ್ಶನ ಸಾಧ್ಯವಾಗುತ್ತದೆ ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಸ್ವಯಂಸೇವಕರಾದ ಸಂತೋಷ್ ಕುಮಾರ್ ತಿಳಿಸಿದರು.

ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದ ದೇವಸ್ಥಾನದಲ್ಲಿ ಯುವಕ-ಯುವತಿಯರಿಗಾಗಿ ಆಯೋಜಿಸಿದ್ದ ವ್ಯಕ್ತಿತ್ವ ನಿರ್ಮಾಣಕಾರಿ ತರಗತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅವರು ಶ್ರೀಶಾರದಾದೇವಿಯವರ ಸಂದೇಶಗಳನ್ನು ಒಳಗೊಂಡ “ವಾತ್ಸಲ್ಯತೀರ್ಥ” ಪುಸ್ತಕದ ಕುರಿತಾಗಿ ಉಪನ್ಯಾಸ ನೀಡಿದರು.

ಕಾರ್ಯಕ್ರಮದ ಆರಂಭದಲ್ಲಿ ಪ್ರಾರ್ಥನೆ ಮತ್ತು ಭಜನೆಯನ್ನು ಯತೀಶ್ ಎಂ ಸಿದ್ದಾಪುರ ನಡೆಸಿಕೊಟ್ಟರೆ ಪೂಜ್ಯ ಮಾತಾಜೀ ತ್ಯಾಗಮಯೀ ಅವರಿಂದ ದಿವ್ಯತ್ರಯರಿಗೆ ಮಂಗಳಾರತಿ ನಡೆಯಿತು. ತರಗತಿಯಲ್ಲಿ ವೆಂಕಟಲಕ್ಷ್ಮೀ, ಪುಷ್ಪಲತಾ, ಲೋಹಿತ್, ಚಾರ್ಮಿಶ್ರೀ ಲಲಿತಾ, ಸೃಷ್ಟಿ ಕುರುಬರ್, ಚೇತನ್, ಜಿ.ಯಶೋಧಾ ಪ್ರಕಾಶ್ ಸೇರಿದಂತೆ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

