ಸಿದ್ಧಶ್ರೀ ಚಲನ ಚಿತ್ರೋತ್ಸವಕ್ಕೆ ಚಲನ ಚಿತ್ರಗಳ – ಟ್ರೈಲರ್, ಟೀಸರ್ ಆಹ್ವಾನ.
ಸಿದ್ಧನಕೊಳ್ಳ ಡಿ.24

ಬಾಗಲಕೋಟ ಜಿಲ್ಲೆಯ ಇಲಕಲ್ಲ ತಾಲೂಕಿನ ಐತಿಹಾಸಿಕ ಸ್ಥಳ ಐಹೊಳೆ ಗ್ರಾಮದ ಹತ್ತಿರದ ಸುಕ್ಷೇತ್ರ ಕಲಾ ಪೋಷಕರ ಮಠ ಸಿದ್ಧನಕೊಳ್ಳದ ಸಿದ್ಧಶ್ರೀ ರಾಷ್ಟ್ರೀಯ ಉತ್ಸವ-೨೦೨೬ ಜ.೧೪, ೧೫, ೧೬ ರಂದು ಮೂರು ದಿನಗಳ ಕಾಲ ಜರುಗಲಿದ್ದು ಜ. ೧೫ ರಂದು ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವ ನಡೆಯಲಿದೆ. ಹುನಗುಂದ ಕ್ಷೇತ್ರದ ಶಾಸಕರಾದ ಡಾ, ವಿಜಯಾನಂದ ಕಾಶಪ್ಪನವರ ಜಾತ್ರಾ ಸಮಿತಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಲಿದ್ದಾರೆ ಎಂದು ಧರ್ಮಾಧಿಕಾರಿಗಳಾದ ಡಾ, ಶಿವಕುಮಾರ ಸ್ವಾಮೀಜಿ ತಿಳಿಸಿದ್ದಾರೆ.
ಸಿದ್ಧಶ್ರೀ ಉತ್ಸವದಲ್ಲಿ ಸಹಸ್ರಾರು ಭಕ್ತರು ಸೇರುತ್ತಿದ್ದು ಸಂಗೀತ, ನೃತ್ಯ ಸಾಂಸ್ಕೃತಿಕ ಮನರಂಜನಾ ಕಾರ್ಯಕ್ರಮಗಳು ನೆರವೇರುತ್ತವೆ. ರಾಜ್ಯ, ಹೊರ ರಾಜ್ಯಗಳ ವಿವಿಧ ಸಾಧಕರು, ಪ್ರತಿಭಾನ್ವಿತ ಉದಯೋನ್ಮುಖ ಕಲಾ ಪ್ರತಿಭೆಗಳಿಗೂ ವೇದಿಕೆ ನೀಡಿ ಪ್ರೋತ್ಸಾಹಿಸಲಾಗುತ್ತಿದೆ. ಪ್ರತಿ ವರ್ಷದಂತೆ ಈ ವರ್ಷವೂ ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವ ಜ.೧೫ ರಂದು ಹಮ್ಮಿಕೊಳ್ಳಲಾಗಿದೆ. ಚಲನಚಿತ್ರ ನಿರ್ಮಾಪಕರು, ನಿರ್ದೇಶಕರು, ಕಲಾವಿದರು ಇನ್ನೂ ಬಿಡುಗಡೆ ಯಾಗದ ತಮ್ಮ ೨೦೨೫ ರಲ್ಲಿ ನಿರ್ಮಾಣವಾದ, ಆಗುತ್ತಿರುವ ಹೊಸ ಚಲನ ಚಿತ್ರಗಳ, ಟೆಲಿಫಿಲ್ಮ್, ಕಿರುಚಿತ್ರಗಳ, ಟ್ರೈಲರ್, ಟೀಸರ್ ಮತ್ತು ಪೋಸ್ಟರಗಳನ್ನು ಚಿತ್ರೋತ್ಸವದಲ್ಲಿ ಬಿಡುಗಡೆ ಮಾಡಬಹುದು. ಯಾವುದೇ ಪ್ರವೇಶ ಶುಲ್ಕಗಳಿಲ್ಲದೆ ಉಚಿತ ಅವಕಾಶ ಕಲ್ಪಿಸಲಾಗಿದೆ. ಭಾಗವಹಿಸಿದ ಚಲನ ಚಿತ್ರದ ತಂಡಗಳಿಗೆ ಅಭಿನಂದನಾ ಪತ್ರ, ನೆನಪಿನ ಸ್ಮರಣಿಕೆ, ಕಿರುಚಿತ್ರ ತಂಡಗಳಿಗೆ ಅಭಿನಂದನಾ ಪತ್ರಗಳನ್ನು ನೀಡಲಾಗುತ್ತದೆ. ಆಸಕ್ತಿತರು ಡಿಸೆಂಬರ್ ೩೧ ರೊಳಗಾಗಿ ತಮ್ಮ ಹೆಸರನ್ನು ನೊಂದಾಯಿಸಿ ಕೊಳ್ಳಬೇಕು. ನಂತರ ಬಂದವರಿಗೆ ಅವಕಾಶವಿಲ್ಲ. ಶ್ರೀಗಳ ಮತ್ತು ಆಯ್ಕೆ ಸಮಿತಿ ತೀರ್ಮಾನವೇ ಅಂತಿಮ. ಆಯ್ಕೆ ಯಾದವರಿಗೆ ನಂತರ ತಿಳಿಸಲಾಗುತ್ತದೆ. ತಮ್ಮ ಟೀಸರ್, ಟ್ರೈಲರ್, ಪೋಸ್ಟರಗಳನ್ನು ಡಾ, ಪ್ರಭು ಗಂಜಿಹಾಳ, ವಾಟ್ಸಪ್ ನಂ-೯೪೪೮೭೭೫೩೪೬ ಇಲ್ಲಿಗೆ ಕಳಿಸಬೇಕು. ಹೆಚ್ಚಿನ ಮಾಹಿತಿಗಾಗಿ ಚಲನ ಚಿತ್ರೋತ್ಸವ ವಿಭಾಗದ ಡಾ, ಪ್ರಭು ಗಂಜಿಹಾಳ.ಮೊ.೯೪೪೮೭೭೫೩೪೬, ಡಾ, ವೀರೇಶ ಹಂಡಿಗಿ. ಮೊ.೯೦೬೦೯೩೩೫೯೬, ವೀರೇಶ ಐಹೊಳೆ. ಮೊ.೭೦೨೬೦೬೨೩೬೪, ಸಂಗನಗೌಡ್ರು ಕುರುಡಗಿ. ಮೊ.೮೮೬೧೮೧೧೧೨೮, ಲೋಕೇಶ ವಿದ್ಯಾಧರ ಮೊ.೮೭೬೨೩೧೦೩೯೯ ಇವರನ್ನು ಸಂಪರ್ಕಿಸಬಹುದು ಎಂದು ಶ್ರೀಗಳು ತಿಳಿಸಿದ್ದಾರೆ.
ರಾಜ್ಯ ಮಟ್ಟದ ವಿಶೇಷ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಡಾ, ಪ್ರಭು ಗಂಜಿಹಾಳ ಗದಗ

