ಇತ್ತಿಚಿಗೆ ನಡೆದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಚುನಾವಣೆಯಲ್ಲಿ ಸ್ಪರ್ಧಿಸಿ ನೂತನ ಪದಾಧಿಕಾರಿಗಳಿಗೆ – ಕುಂಟೋಜಿ ದೇವಸ್ಥಾನದ ವತಿಯಿಂದ ಸನ್ಮಾನಿಸಿ ಗೌರವಿಸಲು.
ಕುಂಟೋಜಿ ಡಿ.23

ಮುದ್ದೇಬಿಹಾಳ ತಾಲೂಕಿನ ಕುಂಟೋಜಿ ಗ್ರಾಮದ ಶ್ರೀ ಬಸವೇಶ್ವರ ದೇವಸ್ಥಾನದ ಕಮಿಟಿಯು ಇತ್ತೀಚಿಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದ ಅಧ್ಯಕ್ಷರಾದ ಡಿ.ಜಿ ವಡವಡಗಿ, ಉಪಾಧ್ಯಕ್ಷರಾದ ಬಸವರಾಜ ಹುಲಗಣ್ಣಿ, ಜಿ.ಎನ್ ಬೀರಗೊಂಡ (ಮುತ್ತು), ಪ್ರಧಾನ ಕಾರ್ಯದರ್ಶಿ ಎಚ್.ಆರ್ ಬಾಗವಾನ, ಕಾರ್ಯದರ್ಶಿ ಲಾಡ್ಲೆಮಶ್ಯಾಕ ನಧಾಪ್ ಹಾಗೂ ವರದಿಗಾರರಾದ ಸಾಗರ ಉಕ್ಕಲಿ, ಮುತ್ತಣ್ಣ ಒಡ್ಡೋಡ್ಡಗಿ ಇವರಿಗೆ ದೇವಸ್ಥಾನದ ವತಿಯಿಂದ ಸೋಮವಾರ ದಂದು ಸನ್ಮಾನಿಸಿ ಗೌರವಿಸಲಾಯಿತು. ಗ್ರಾಮಸ್ಥರಾದ ಬಿ.ಎಸ್ ಹೂಗಾರ (ಹೂಗಾರ ಸಮಾಜದ ಜಿಲ್ಲಾಧ್ಯಕ್ಷ) ಅವರು ಮಾತನಾಡಿ ಸಮಾಜದಲ್ಲಿ ಒಳ್ಳೆಯ ಪತ್ರಿಕಾ ಮಾಧ್ಯಮ ಅವಶ್ಯಕತೆ ಬಹಳ ಇದೆ. ಸರಕಾರದ ಆಗು ಹೋಗುಗಳು ಮತ್ತು ಸಾರ್ವಜನಿಕರ ಕುಂದು ಕೊರತೆಗಳನ್ನು ಬಿತ್ತರಿಸುವ ಕೆಲಸ ಪತ್ರಿಕಾ ಮಾಧ್ಯಮದವರದ್ದು ಇದೆ ಎಂದು ಹೇಳಿದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಕಾ.ನಿ.ಪ ಸಂಘದ ತಾಲ್ಲೂಕು ಅಧ್ಯಕ್ಷರಾದ ಡಿ.ಜಿ ವಡವಡಗಿ ಅವರು ಪತ್ರಿಕಾ ಮಾಧ್ಯಮ ಒಂದು ಸಾರ್ವಜನಿಕರ ಮತ್ತು ಸರಕಾರದ ನಡುವಿನ ಸೇತುವೆ ಸಂಪರ್ಕ ಇದ್ದ ಹಾಗೆ. ಸರಕಾರದ ಯೋಜನೆಗಳನ್ನು ಸಾರ್ವಜನಿಕರಿಗೆ ಮುಟ್ಟಿಸಲು ಪತ್ರಿಕೆ ಬೇಕು. ಮತ್ತು ಸಾರ್ವಜನಿಕರ ಸಮಸ್ಯೆ, ಕುಂದು ಕೊರತೆಗಳನ್ನು ಸರಕಾರದ ಗಮನಕ್ಕೆ ತರಲು ಪತ್ರಿಕೆ ಬೇಕೆ ಬೇಕು ಎಂದು ಹೇಳಿದರು. ಹಾಗೂ ಸಂಘದ ಪ್ರಧಾನ ಕಾರ್ಯದರ್ಶಿ ಎಚ್.ಆರ್ ಬಾಗವಾನ ಅವರು ಪತ್ರಕರ್ತರು ಸ್ವತಂತ್ರ ಪೂರ್ವದಲ್ಲೂ ಹೇಗೆ ಕೆಲಸ ಮಾಡಿದರು ಎಂದು ಸವಿಸ್ತಾರವಾಗಿ ಮಾತನಾಡಿದರು. ಮಾಜಿ ಸೈನಿಕರಾದ ನಾಗಲಿಂಗಯ್ಯ ಮಠ ಅವರು ಮಾತನಾಡಿ ನೂತನ ಪದಾಧಿಕಾರಿಗಳಿಗೆ ಶುಭಾಶಯಗಳನ್ನು ಕೋರಿದರು. ಇದೇ ವೇಳೆಯಲ್ಲಿ ಬಸವೇಶ್ವರ ದೇವಸ್ಥಾನದ ಜಾತ್ರಾ ಕಮೀಟಿಯ ಅಧ್ಯಕ್ಷರಾದ ಗುರುಲಿಂಗಪ್ಪ ಸುಲ್ಲಳ್ಳಿ, ಸಂಗಮೇಶ ಮಠ, ಸಂಗಮೇಶ ಕುಂಬಾರ ಅಡತ್ ವ್ಯಾಪಾರಿಗಳು, ರಾಮಣ್ಣ ಹುಲಗಣ್ಣಿ, ಗುರುಪಾದಪ್ಪ ಹೆಬ್ಬಾಳ, ಈರಪ್ಪ ಬಿರಾದಾರ, ಜಗದೀಶ ಪಲ್ಲೆದ, ಸಂಗಮೇಶ ಯರಝರಿ, ಶಣ್ಮುಖಯ್ಯ ಹಿರೇಮಠ, ಆನಂದ ಕಾಟಿ ಸೇರಿದಂತೆ ಇನ್ನಿತರರು ಇದ್ದರು.

