🚨 BREAKING NEWS, ಉಡುಪಿಯಲ್ಲಿ ಭೀಕರ ಆಹಾರ ಜಾಲ ಪತ್ತೆ! ‘ಹೋಂ ಪ್ರಾಡಕ್ಟ್’ ಹೆಸರಲ್ಲಿ ವಿಷ ಪೂರಿತ ಆಹಾರ ಮಾರಾಟ!💥 ಟ್ರಿನಿಟಿ ಕ್ಯಾಟರಿಂಗ್ ಮತ್ತು ಹೋಟೆಲ್ ಆಶೀರ್ವಾದ್ ಕರಾಳ ಮುಖ ಅನಾವರಣ: ಕ್ರಿಸ್‌ಮಸ್ ಹಬ್ಬದ ಹೊತ್ತಲ್ಲೇ – ಸಾರ್ವಜನಿಕರ ಜೀವದ ಜೊತೆ ಅಧಿಕಾರಿಗಳ ಚೆಲ್ಲಾಟ..!
ಉಡುಪಿ ಡಿ.24

ರಾಜ್ಯದಲ್ಲಿ ಆಹಾರ ಸುರಕ್ಷತೆಯ ಬಗ್ಗೆ ದೊಡ್ಡ ಮಟ್ಟದ ಆತಂಕ ಸೃಷ್ಟಿಯಾಗಿದೆ. ಉಡುಪಿ ಜಿಲ್ಲೆಯ ಮೂಡುಬೆಳ್ಳೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ‘ಹೋಂ ಪ್ರಾಡಕ್ಟ್’ (Home Product) ಎಂಬ ಮುಸುಕಿನ ಅಡಿಯಲ್ಲಿ ಸಾರ್ವಜನಿಕರ ಜೀವಕ್ಕೆ ಕುತ್ತು ತರುವ ಭೀಕರ ಜಾಲವೊಂದು ಕಾರ್ಯಾಚರಿಸುತ್ತಿರುವುದು ಬೆಳಕಿಗೆ ಬಂದಿದೆ. ಯಾವುದೇ ಮಾಹಿತಿ ಇಲ್ಲದ ಪ್ಯಾಕೆಟ್‌ಗಳಲ್ಲಿ ಕಲಬೆರಕೆ ಆಹಾರ ಮಾರಾಟವಾಗುತ್ತಿದ್ದು, ಅಧಿಕಾರಿಗಳ ಮೌನ ಹಲವು ಸಂಶಯಗಳಿಗೆ ಕಾರಣವಾಗಿದೆ.
🛑 ಹೆಸರಿಲ್ಲದ ‘ಆರೋಮ’ (Aroma) ಹೋಂ ಪ್ರಾಡಕ್ಟ್ ದಂಧೆ:-

ಎಚ್ಚರ! ಕುಂತಲ ನಗರದ ಚರ್ಚ್ ಮುಂಭಾಗ ಹಾಗೂ ಸ್ಥಳೀಯ ಅಂಗಡಿಗಳಲ್ಲಿ ‘ಆರೋಮ’ (Aroma) ಎಂಬ ಹೆಸರಿನ ಹೋಂ ಪ್ರಾಡಕ್ಟ್ ಅಡಿಯಲ್ಲಿ ತಿಂಡಿ-ತಿನಿಸುಗಳು ಮಾರಾಟವಾಗುತ್ತಿವೆ. ಆದರೆ ಇದರ ಅಸಲಿಯತ್ತು ಕೇಳಿದರೆ ನೀವು ದೆಬ್ರೆಬೀಳುತ್ತೀರಿ.
ಮಾಹಿತಿ ಶೂನ್ಯ:-

ಪ್ಯಾಕೆಟ್‌ಗಳ ಮೇಲೆ ತಯಾರಿಕಾ ದಿನಾಂಕ (Production Date), ಎಕ್ಸ್‌ಪೈರಿ ಡೇಟ್ (Expiry Date) ಅಥವಾ ಕಾಂಟ್ಯಾಕ್ಟ್ ಡೀಟೇಲ್ಸ್ ಯಾವುದೂ ಇಲ್ಲ.ಅನಧಿಕೃತ ತಯಾರಿಕೆ:-ಇದು ಎಲ್ಲಿ ತಯಾರಾಗುತ್ತದೆ ಎನ್ನುವ ಮಾಹಿತಿ ಗೌಪ್ಯವಾಗಿದೆ. ಹೋಟೆಲ್ ಆಶೀರ್ವಾದ್ ಹಾಗೂ ಟ್ರಿನಿಟಿ ಕ್ಯಾಟರಿಂಗ್‌ನಲ್ಲಿ ಹೊರ ರಾಜ್ಯದ ಕಾರ್ಮಿಕರನ್ನು ತಂದು ಅಕ್ರಮವಾಗಿ ಇವುಗಳನ್ನು ಸಿದ್ಧಪಡಿಸಿ ಮಾರುಕಟ್ಟೆಗೆ ರವಾನಿಸಲಾಗುತ್ತಿದೆ ಎನ್ನಲಾಗಿದೆ.ಮಾರಣಾಂತಿಕ ಅಪಾಯ:-ಕ್ರಿಸ್‌ಮಸ್ ಹಬ್ಬದ ಸಡಗರದಲ್ಲಿರುವ ಜನರ ಜೀವಕ್ಕೆ ಈ ಅನಧಿಕೃತ ಉತ್ಪನ್ನಗಳು ಕಂಟಕವಾಗುವ ಸಾಧ್ಯತೆ ದಟ್ಟವಾಗಿದೆ. ಒಂದು ವೇಳೆ ಸಾರ್ವಜನಿಕರ ಜೀವಕ್ಕೆ ಅಪಾಯವಾದರೆ ಹೊಣೆ ಯಾರು?
💀 ಟ್ರಿನಿಟಿ ಕ್ಯಾಟರಿಂಗ್:-

ಕ್ಯಾನ್ಸರ್ ಕಾರಕ ಕಲಬೆರಕೆಯ ತಾಣ?ಹಿಂದೆ ಮೂರು ಬಾರಿ (ಪತ್ರ ಸಂಖ್ಯೆ: 177, 241, 434, ದಿನಾಂಕ: 14/2/2024, 21/8/2024, 30/10/2024 ರಂತೆ ಡಾ, ಪ್ರವೀಣ್ ಕುಮಾರ್ ಅವರು ಪರಿಶೀಲಿಸಿದ್ದರು) FSSAI ಅಧಿಕಾರಿಗಳಿಂದ ಮುಟ್ಟುಗೋಲು ಹಾಕಿಸಿ ಕೊಂಡಿದ್ದರೂ ‘ಟ್ರಿನಿಟಿ ಕ್ಯಾಟರಿಂಗ್’ ಇಂದಿಗೂ ರಾಜಾರೋಷವಾಗಿ ಕಾರ್ಯಾಚರಿಸುತ್ತಿರುವುದು ಹೇಗೆ?
ಅಪಾಯಕಾರಿ ಕೆಮಿಕಲ್:-

ಆಹಾರದಲ್ಲಿ ಬಣ್ಣ (Color) ಮತ್ತು ಅಜಿನೊಮೊಟೊ (MSG) ಅತಿಯಾಗಿ ಬಳಸಲಾಗುತ್ತಿದೆ. ಇದು ಕ್ಯಾನ್ಸರ್‌ನಂತಹ ಮಾರಕ ಕಾಯಿಲೆಗಳಿಗೆ ದಾರಿಯಾಗುತ್ತದೆ.
ವಿಷ ಪೂರಿತ ಎಣ್ಣೆ:-
ತುಂಬಾ ದಿನಗಳಿಂದ ಕರೆದ ಎಣ್ಣೆಯನ್ನೇ ಪದೇ ಪದೇ ಬಳಸಲಾಗುತ್ತಿದೆ ಎನ್ನುವ ಗಂಭೀರ ಆರೋಪ ಕೇಳಿಬಂದಿದೆ. ಅಸಹ್ಯದ ವಾತಾವರಣ:-ಇಡ್ಲಿಗಳಲ್ಲಿ ಕೂದಲು ಮತ್ತು ಇರುವೆಗಳು ಪತ್ತೆಯಾಗಿರುವ ಘಟನೆಗಳು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
🏨 ಹೋಟೆಲ್ ಆಶೀರ್ವಾದ್:-

ಪರವಾನಿಗೆ ಇಲ್ಲದ ‘ಕಪ್ಪು ದಂಧೆ’ ಕುಂತಲ ನಗರದ ‘ಹೋಟೆಲ್ ಆಶೀರ್ವಾದ್’ ಯಾವುದೇ ವಾಣಿಜ್ಯ ಪರವಾನಿಗೆ, ಕಟ್ಟಡ ಅನುಮತಿ ಅಥವಾ FSSAI ಪರವಾನಿಗೆ ಇಲ್ಲದಿದ್ದರೂ ಅಬಾಧಿತವಾಗಿ ನಡೆಯುತ್ತಿದೆ. ಪಂಚಾಯತ್‌ಗೆ ಯಾವುದೇ ವಾಣಿಜ್ಯ ತೆರಿಗೆ ಪಾವತಿಸದೆ ಸ್ಥಳೀಯ ಸಂಸ್ಥೆಗೆ ಆದಾಯ ನಷ್ಟ ಉಂಟು ಮಾಡುತ್ತಿದೆ.
❓ ಶಾಸಕರ ಮೌನವೇಕೆ? ಅಧಿಕಾರಿಗಳ ‘ಹೊಂದಾಣಿಕೆ’ ರಾಜಕೀಯ..?

ಬೀದಿಬದಿ ವ್ಯಾಪಾರಿಗಳ ಮೇಲೆ ಪ್ರತಾಪ ತೋರಿಸುವ ಅಧಿಕಾರಿಗಳು, ಇಷ್ಟೆಲ್ಲಾ ಕಾನೂನು ಉಲ್ಲಂಘನೆ ಮಾಡುತ್ತಿರುವ ಈ ದೊಡ್ಡ ಸಂಸ್ಥೆಗಳ ವಿರುದ್ಧ ಕ್ರಮ ಕೈಗೊಳ್ಳಲು ಏಕೆ ನಡುಗುತ್ತಿದ್ದಾರೆ? ಕ್ಷೇತ್ರದ ಶಾಸಕರು ಈವರೆಗೆ ಈ ಬಗ್ಗೆ ಸೊಲ್ಲೆತ್ತದಿರುವುದು ಸಾರ್ವಜನಿಕರಲ್ಲಿ ‘ಅನುಮಾನಾಸ್ಪದ ಹೊಂದಾಣಿಕೆ’ ನಡೆದಿದೆ ಎಂಬ ಗಂಭೀರ ಪ್ರಶ್ನೆಯನ್ನು ಹುಟ್ಟುಹಾಕಿದೆ.
⚖️ ಕಾನೂನಾತ್ಮಕ ಟಿಪ್ಪಣಿ ಮತ್ತು ಜಿಲ್ಲಾಧಿಕಾರಿಗಳಿಗೆ ಮನವಿ:-

ನಾಗರಿಕರು ಇಂದು (ನವೆಂಬರ್ 28, 2025) ಜಿಲ್ಲಾಧಿಕಾರಿಗಳಿಗೆ ಮತ್ತು ಮೂಡುಬೆಳ್ಳೆ ಪಿಡಿಓ ಅವರಿಗೆ ಮನವಿ ಸಲ್ಲಿಸಿದ್ದು, ಈ ಕೆಳಗಿನ ಕಾನೂನು ಕ್ರಮಕ್ಕೆ ಆಗ್ರಹಿಸಿದ್ದಾರೆ.IPC ಸೆಕ್ಷನ್ 166:-ಸಾರ್ವಜನಿಕ ಸೇವಕರು ಕಾನೂನಿನ ಅಡಿಯಲ್ಲಿ ನಿರ್ವಹಿಸಬೇಕಾದ ಕೆಲಸವನ್ನು ಮಾಡದೆ ನಿರ್ಲಕ್ಷ್ಯ ವಹಿಸಿದರೆ ಅವರ ವಿರುದ್ಧ ಕ್ರಮ.
ಕರ್ನಾಟಕ ಗ್ರಾಮ ಸ್ವರಾಜ್ ಕಾಯ್ದೆ:-

ಅಕ್ರಮಕ್ಕೆ ಅವಕಾಶ ನೀಡಿದ ಪಿಡಿಓ ಅಥವಾ ಕಾರ್ಯದರ್ಶಿಗಳ ವಿರುದ್ಧ ಅಮಾನತು (Suspension) ಕ್ರಮಕ್ಕೆ ಜಿಲ್ಲಾ ಪಂಚಾಯತ್ CEO ಅವರಿಗೆ ಒತ್ತಾಯ. ಭ್ರಷ್ಟಾಚಾರ ನಿಗ್ರಹ ಕಾಯ್ದೆ:-ಅಧಿಕಾರಿಗಳ ಈ ನಿಗೂಢ ಮೌನದ ಹಿಂದೆ ಲಂಚದ ಪಾತ್ರವಿದ್ದರೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಅವಕಾಶವಿದೆ.
📢 ಸಾರ್ವಜನಿಕರಿಗೊಂದು ಕಿವಿಮಾತು:-

ನಮ್ಮ ಜೀವಕ್ಕೆ ನಾವೇ ಹೊಣೆ!ಅಧಿಕಾರಿಗಳು ಯಾರದ್ದೋ ಆಮಿಷಕ್ಕೆ ಒಳಗಾಗಿ ಇಂತಹ ಅನಧಿಕೃತ ಹೋಟೆಲ್ ಮತ್ತು ಮುಂಗಟ್ಟುಗಳಿಗೆ ಕಡಿವಾಣ ಹಾಕದೆ ಚೆಲ್ಲಾಟವಾಡುತ್ತಿದ್ದಾರೆ. ಇಂತಹ ತಯಾರಿಕಾ ವಿವರಗಳಿಲ್ಲದ ‘ಹೋಂ ಪ್ರಾಡಕ್ಟ್’ ಅಥವಾ ಕಲಬೆರಕೆ ಆಹಾರಗಳನ್ನು ಸೇವಿಸುವ ಮೊದಲು ಎಚ್ಚರಿಕೆ ವಹಿಸಿ. “ನಮ್ಮ ಜೀವಕ್ಕೆ ನಾವೇ ಹೊಣೆ, ನಾವೇ ರಕ್ಷಣೆ” ಎನ್ನುವುದನ್ನು ಮರೆಯಬೇಡಿ.
ಸಾರ್ವಜನಿಕರ ಆಗ್ರಹ:-
“ಜಿಲ್ಲಾಧಿಕಾರಿಗಳೇ ಮತ್ತು ಜಿಲ್ಲಾ ಪಂಚಾಯತ್ CEO ಅವರೇ, ತಕ್ಷಣ ಆಹಾರ ಇಲಾಖೆಯ ದಾಳಿ ನಡೆಸಿ! ಸಾರ್ವಜನಿಕರ ಜೀವದ ಜೊತೆ ಚೆಲ್ಲಾಟವಾಡುವ ಇಂತಹ ಸಂಸ್ಥೆಗಳಿಗೆ ಮತ್ತು ಕರ್ತವ್ಯ ನಿರ್ಲಕ್ಷ್ಯ ತೋರಿದ ಅಧಿಕಾರಿಗಳಿಗೆ ಯಾವಾಗ ಮುಕ್ತಿ ಕೊಡುತ್ತೀರಿ?”
ವರದಿ:ಆರತಿ.ಗಿಳಿಯಾರು.ಉಡುಪಿ

