ರಾಯಲ್ ಚಿನ್ನದ ಪದಕಕ್ಕೆ ಚಿತ್ರದುರ್ಗದ ಚಿತ್ರ ಕಲಾವಿದ – ಜಬಿವುಲ್ಲಾ.ಎಂ ಅಸದ್ ಆಯ್ಕೆ.
ಚಳ್ಳಕೆರೆ ಡಿ.25


ಇಂಡಿಯನ್ ರಾಯಲ್ ಅಕಾಡೆಮಿ ಆಫ್ ಆರ್ಟ್ ಆಂಡ್ ಕಲ್ಚರ್ ಸಂಸ್ಥೆಯು 21 ನೇ. ವಾರ್ಷಿಕೋತ್ಸವದ ಅಂಗವಾಗಿ ಏರ್ಪಡಿಸಿದ್ದ ಚಿತ್ರಕಲೆ/ರೇಖಾ ಚಿತ್ರ ಸ್ಪರ್ಧೆಯಲ್ಲಿ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲ್ಲೂಕಿನ ಜಬೀವುಲ್ಲಾ.ಎಂ ಅಸದ್ ಅವರ ಕಲಾ ಕೃತಿಗಳು “ರಾಯಲ್ ಚಿನ್ನದ ಪದಕ” ಕ್ಕೆ ಪಾತ್ರವಾಗಿದ್ದು.

ಇದೇ ತಿಂಗಳ 28 ರ ಭಾನುವಾರ ದಂದು ಕಲ್ಬುರ್ಗಿಯ ಕನ್ನಡ ಭವನದಲ್ಲಿರುವ ಕಲಾ ಸೌಧ ಆರ್ಟ್ ಗ್ಯಾಲರಿಯಲ್ಲಿ ಕಲಾ ಕೃತಿಗಳ ಪ್ರದರ್ಶನದೊಂದಿಗೆ ಪದಕ ಪ್ರಧಾನ ಮಾಡಲಾಗುವುದು ಎಂದು ವರದಿಯಾಗಿದೆ.

