ವೀಣಾ ಹುಚಕರಿ ಪ್ರತಿಭಾ ಕಾರಂಜಿಯಲ್ಲಿ – ಜಿಲ್ಲಾ ಮಟ್ಟಕ್ಕೆ ಆಯ್ಕೆ.
ಹಿರೇಮಳಗಾವಿ ಡಿ.26

2025-26 ನೇ. ಸಾಲಿನ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವಕ್ಕೆ ಕಂಠಪಾಠ ಕನ್ನಡ ವಿಭಾಗದಲ್ಲಿ ತಾಲೂಕು ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆ ಯಾಗಿರುವ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಿರೇಮಳಗಾವಿಯ ಕು.ವೀಣಾ ಸಂಗನಬಸಪ್ಪ ಹುಚಕರಿ ವಿದ್ಯಾರ್ಥಿನಿಗೆ ಶಾಲೆಯ ಸರ್ವ ಶಿಕ್ಷಕರ ಬಳಗವು ಸನ್ಮಾನವನ್ನು ಮಾಡಿ ಪ್ರೋತ್ಸಾಹಿಸಿದರು.

ಮುಖ್ಯ ಗುರುಗಳು ಆಗಿರುವ ಶ್ರೀಮತಿ ಬಿ.ಬಿ ದೇವದುರ್ಗ, ಹಿರಿಯ ಶಿಕ್ಷಕರಾದ ಶ್ರೀ ಬಿ.ಎಂ ಅಂಗಡಿ, ವಿಜ್ಞಾನ ಶಿಕ್ಷಕರಾಗಿರುವ ಶ್ರೀ ಎಂ.ಎಚ್ ಪೂಜಾರಿ, ಗಣಿತ ಶಿಕ್ಷಕರಾಗಿರುವ ಶ್ರೀ ಮುತ್ತು ವಡ್ಡರ, ಸಮಾಜ ವಿಜ್ಞಾನ ಶಿಕ್ಷಕರಾಗಿರುವ ಶ್ರೀ ಹನಮಂತ ಮಾದರ, ಗೌರವ ಶಿಕ್ಷಕಿಯರಾದ ಶ್ರೀಮತಿ ವಿದ್ಯಾ ಕನಕನ್ನವರ ಮತ್ತು ಅಡುಗೆ ಸಿಬ್ಬಂದಿಯವರು, ಹಿರೇಮಳಗಾವಿ ಗ್ರಾಮದ ಶಿಕ್ಷಣ ಪ್ರೇಮಿಗಳು, ಊರಿನ ಗುರು ಹಿರಿಯರು ಹಾಗೂ ಸರ್ವ ವಿದ್ಯಾರ್ಥಿಗಳ ಬಳಗ ಜಿಲ್ಲಾ ಮಟ್ಟಕ್ಕೆ ಆಯ್ಕೆ ಯಾಗಿರುವ ವೀಣಾ ಹುಚಕರಿ ವಿದ್ಯಾರ್ಥಿನಿಗೆ ಶುಭಾಶಯ ಕೋರಿ ಸಂತಸ ವ್ಯಕ್ತಪಡಿಸಿದರು ಎಂದು ವರದಿಯಾಗಿದೆ.

