ಪ್ರಾರ್ಥನೆಯೆಂಬ ಸೇತುವೆ ಯಿಂದ ಜೀವನದ ಕಷ್ಟ ಸಮಸ್ಯೆಗಳು ನಿವಾರಣೆ – ಮಾತಾಜೀ ತ್ಯಾಗಮಯೀ ಹೇಳಿಕೆ.
ಚಳ್ಳಕೆರೆ ಡಿ.26

ನಿತ್ಯ ಜೀವನದಲ್ಲಿ ಪ್ರಾರ್ಥನೆಯನ್ನು ರೂಢಿಸಿ ಕೊಳ್ಳುವುದ ರಿಂದ ಬದುಕಿನ ಕಷ್ಟ ಸಮಸ್ಯೆಗಳು ನಿವಾರಣೆ ಯಾಗುತ್ತವೆ ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಅಧ್ಯಕ್ಷರಾದ ಪೂಜ್ಯ ಮಾತಾಜೀ ತ್ಯಾಗಮಯೀ ತಿಳಿಸಿದರು.

ಶಿವನ ಗರದ ಸದ್ಭಕ್ತರಾದ ಶ್ರೀಮತಿ ಲೀಲಾವತಿ ಬಸವರಾಜ ಅವರ ಶ್ರೀನಿಲಯದಲ್ಲಿ “ಶ್ರೀಮಾತೆ ಶಾರದಾದೇವಿಯವರ 173 ನೇ. ಜಯಂತ್ಯುತ್ಸವ” ದ ಪ್ರಯುಕ್ತ ಆಯೋಜಿಸಿದ್ದ “ಮನೆ ಮನೆಗೆ ಶಾರದಾಮಾತೆ” ಪ್ರಚಾರಾಂದೋಲನ ಸತ್ಸಂಗ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಅವರು “ಶ್ರೀಮಾತೆ ಶಾರದಾದೇವಿಯವರ ಸಂದೇಶಗಳ” ಬಗ್ಗೆ ಪ್ರವಚನ ನೀಡಿದರು.

ಮನುಷ್ಯ ಸದಾ ಉದ್ಯೋಗ ಶೀಲತೆಯನ್ನು ಬೆಳೆಸಿ ಕೊಳ್ಳಬೇಕು. ಇದರಿಂದ ಮನಸ್ಸಿನಲ್ಲಿ ಯಾವುದೇ ಕೆಟ್ಟ ಆಲೋಚನೆಗಳು ಸುಳಿಯುವುದಿಲ್ಲ, ಮನಸ್ಸನ್ನು ಸ್ವಚ್ಛವಾಗಿಟ್ಟು ಕೊಳ್ಳಬೇಕು.ಬೆಳಗ್ಗೆ ಸಂಜೆ ಜಪ ಧ್ಯಾನ ಮಾಡಬೇಕು, ಮನಃ ಶಾಂತಿ ಬೇಕಿದ್ದರೆ ಪರದೋಷ ನೋಡ ಬಾರದು ಎಂದು ಹೇಳಿದರು.

ಸತ್ಸಂಗದ ಆರಂಭದಲ್ಲಿ ನವಲಗುಂದದ ಶ್ರೀಶಾರದೇಶ್ವರಿ ಆಶ್ರಮದ ಅಧ್ಯಕ್ಷರಾದ ಪೂಜ್ಯ ಮಾತಾಜೀ ಅನನ್ಯಮಯೀ ಅವರು ವಿಶೇಷ ಗಾನ-ಪ್ರವಚನವನ್ನು ನಡೆಸಿಕೊಟ್ಟರು. ಸತ್ಸಂಗದ ಕೊನೆಯಲ್ಲಿ ದಿವ್ಯತ್ರಯರಿಗೆ ಮಂಗಳಾರತಿ ಮತ್ತು ಅನ್ನ ಪ್ರಸಾದ ವಿನಿಯೋಗ ನಡೆಯಿತು.
ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಶ್ರೀಮತಿ ಲೀಲಾವತಿ ಬಸವರಾಜ, ರೂಪ, ಗೌರಮ್ಮ, ಗಂಗಮ್ಮ, ಸುಮಕ್ಕ, ಮಂಜುನಾಥ, ಗೀತಾ ನಾಗರಾಜ್, ಸುಜಾತಾ, ನಾಗವೇಣಿ, ಮಮತ, ಮನ್ವಿತ್, ಭಾಗ್ಯ, ಸವಿತಾ, ಲಾವಣ್ಯ, ರತ್ನ, ಜ್ಯೋತಿ ಸತೀಶ್, ಕಾಲುವೆಹಳ್ಳಿ ಪಾಲಕ್ಕ, ಪಾರ್ವತಮ್ಮ, ಜಯಮ್ಮ, ಎಚ್.ಲಕ್ಷ್ಮೀದೇವಮ್ಮ, ರಂಗಮ್ಮ, ವೀರಮ್ಮ, ಯತೀಶ್.ಎಂ ಸಿದ್ದಾಪುರ, ಜಿ.ಯಶೋಧಾ ಪ್ರಕಾಶ್, ಅಂಬಿಕಾ, ಲತಾ, ಪಂಕಜಾ, ಸರಸ್ವತಿ, ದ್ರಾಕ್ಷಾಯಣಿ, ವಿಜಯಲಕ್ಷ್ಮೀ, ರಶ್ಮಿ ರಮೇಶ್, ರಶ್ಮಿ ವಸಂತ, ಶೈಲಜಾ, ಕೃಷ್ಣವೇಣಿ, ಸಂಗೀತ, ಶಾರದಮ್ಮ, ಶಾಂತಮ್ಮ, ನಾಗರತ್ನಮ್ಮ, ಕವಿತಾ, ಉಷಾ ಶ್ರೀನಿವಾಸ್, ಪಿ.ಎಸ್ ಮಾಣಿಕ್ಯ ಸತ್ಯನಾರಾಯಣ, ಗೀತಾ.ವೆಂಕಟೇಶ್, ಭಾಗ್ಯಲಕ್ಷ್ಮೀ ಸೇರಿದಂತೆ ಸಾಕಷ್ಟು ಸಂಖ್ಯೆಯ ಸದ್ಭಕ್ತರು ಉಪಸ್ಥಿತರಿದ್ದರು.
ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.

