ಭಗವಂತನ ನಾಮಸ್ಮರಣೆಯಿಂದ ನಿಜವಾದ ಸುಖ ಲಭ್ಯ – ಮಾತಾಜೀ ಅನನ್ಯಮಯೀ ಅಭಿಪ್ರಾಯ.
ಚಳ್ಳಕೆರೆ ಡಿ.26

ನಿರಂತರ ಭಗವಂತನ ನಾಮಸ್ಮರಣೆ ಮಾಡುವುದರಿಂದ ಮನುಷ್ಯನಿಗೆ ನಿಜವಾದ ಸುಖ ದೊರೆಯುತ್ತದೆ ಎಂದು ನವಲಗುಂದದ ಶ್ರೀಶಾರದೇಶ್ವರಿ ಆಶ್ರಮದ ಅಧ್ಯಕ್ಷರಾದ ಪೂಜ್ಯ ಮಾತಾಜೀ ಅನನ್ಯಮಯೀ ಅವರು ತಿಳಿಸಿದರು.

ಶಿವನ ಗರದ ಶ್ರೀಮತಿ ಜಿ.ಯಶೋಧಾ ಪ್ರಕಾಶ್ ನೇತೃತ್ವದ ಶ್ರೀಶಾರದಾದೇವಿ ಸತ್ಸಂಗ ಕೇಂದ್ರದಲ್ಲಿ ಆಯೋಜಿಸಿದ್ದ ವಾರದ ವಿಶೇಷ ಸತ್ಸಂಗ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಭಜನೆ ನಡೆಸಿ ಕೊಡುತ್ತ ಅವರು ಮಾತನಾಡಿದರು. ಈ ಸಂದರ್ಭದಲ್ಲಿ ಅವರು ಶ್ರೀಮದ್ ಭಗವದ್ಗೀತೆಯ ಶ್ಲೋಕಗಳ ಕಲಿಕಾ ಕಾರ್ಯಕ್ರಮವನ್ನು ನಡೆಸಿ ಕೊಟ್ಟರು.

ಸತ್ಸಂಗ ಸಭೆಯಲ್ಲಿ ಶ್ರೀಮತಿ ಜಿ.ಯಶೋಧಾ ಪ್ರಕಾಶ್, ಗಂಗಾಧರಶೆಟ್ಟಿ, ಎಚ್.ಲಕ್ಷ್ಮೀದೇವಮ್ಮ, ರಂಗಮ್ಮ, ಅಂಬಿಕಾ, ಪಂಕಜಾ, ಸರಸ್ವತಿ ನಾಗರಾಜ್, ವೀಣಾ, ಸುಧಾಮಣಿ, ಯತೀಶ್ ಎಂ ಸಿದ್ದಾಪುರ, ಭ್ರಮರಂಭಾ, ಲೀಲಾವತಿ, ವೀರಮ್ಮ, ಶಾಂತಮ್ಮ, ಶೈಲಜಾ, ಕೃಷ್ಣವೇಣಿ, ರಶ್ಮಿ ವಸಂತ, ರಶ್ಮಿ ರಮೇಶ್, ವಿಜಯಲಕ್ಷ್ಮೀ, ಶಾರದಮ್ಮ, ಕವಿತಾ, ನಾಗರತ್ನಮ್ಮ, ಭಾಗ್ಯಲಕ್ಷ್ಮೀ, ಪಿ.ಎಸ್ ಮಾಣಿಕ್ಯ ಸತ್ಯನಾರಾಯಣ, ಜಯಮ್ಮ, ಜಯಶೀಲಮ್ಮ, ಉಷಾ ಶ್ರೀನಿವಾಸ್, ಮಂಗಳಾ, ಸರಸ್ವತಿ ರಾಜು, ಮಂಜುಳ ಉಮೇಶ್ ಭಾಗವಹಿಸಿದ್ದರು.
ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.

