ಸ್ನೇಹಾಲಯಂ ಕ್ರಿಯೇಷನ್ಸ್ ಲಾಂಛನದಲ್ಲಿ ಸಿದ್ಧವಾಗಿರುವ – ಚಂದ್ರಗಿರಿ ಸಿನಿಮಾ.
ಬೆಂಗಳೂರು ಡಿ.27

ಶ್ರೀ ನಿವಾಸ ಪ್ರೊಡಕ್ಷನ್ಸ್ ಸಮರ್ಪಿಸಿ ಸ್ನೇಹಾಲಯಂ ಕ್ರಿಯೇಷನ್ಸ್ ಲಾಂಛನದಲ್ಲಿ ಶಿಲ್ಪಾ ಶ್ರೀನಿವಾಸ್ ರವರು ನಿರ್ಮಿಸುತ್ತಿರುವ ಸಿನಿಮಾ ಚಂದ್ರಗಿರಿ. ಬಹಳ ದಿನಗಳ ನಂತರ ಡೈನಾಮಿಕ್ ಹೀರೋ ದೇವರಾಜ್ ರವರು ಹೀರೋ ಆಗಿ ಕಾಣಿಸಿ ಕೊಳ್ಳಲಿರುವ ಚಂದ್ರಗಿರಿ ಗೆ ಈಗಾಗಲೇ ಹಾಡುಗಳ ಧ್ವನಿ ಮುದ್ರಣ ಕಾರ್ಯ ಮುಗಿದಿದ್ದು.

ಚಿತ್ರದಲ್ಲಿನ ಮೂರು ಹಾಡುಗಳನ್ನು ಅನಿರುದ್ಧ ಶಾಸ್ತ್ರಿ. ಕಾರುಣ್ಯ. ಮತ್ತು ಶ್ರೀ ಕ್ರಿಷ್ಣ ಹಾಡಿದ್ದಾರೆ, ತುಳಸಿಪುರ ಎಂಬ ಊರಿನಲ್ಲಿ ಪ್ರತಿ ಅಮಾವಾಸ್ಯೆಯ ದಿನ ದಂದು ಕಾಣಿಸಿ ಕೊಳ್ಳುವ ಎರಡು ಶವಗಳು. ಮತ್ತು ಆ ಊರಿನ ಬೀದಿ ಬೀದಿಗಳಲ್ಲಿ ರಕ್ತದ ಕಲೆ, ಆ ರಕ್ತದ ಕಲೆಗೆ ಕಾರಣ ಹಾಗೂ ಆ ಇಬ್ಬರು ಹೇಗೆ ಸತ್ತರು ಎಂಬ ನಿಗೂಢ, ಅದನ್ನು ಭೇದಿಸಲು ಬರುವವರಿಗೆ ಗೋಚರವಾಗುವ ಅಗೋಚರ ಶಕ್ತಿ. ಆ ಅಗೋಚರ ಶಕ್ತಿಯು, ದೈವದ ನೆಲೆಯನ್ನು ಧ್ವಂಸ ಮಾಡಲು ಆತ್ಮಗಳನ್ನು ಸಿದ್ದ ಪಡಿಸುವ ದುಷ್ಟರನ್ನು ಹೇಗೆ ಧಮನ ಗೊಳಿಸುತ್ತದೆ ಎಂಬುದೇ ಕಥಾವಸ್ತು. ಹಾರರ್ ಸಸ್ಪೆನ್ಸ್ ಥ್ರಿಲ್ಲರ್ ನಾ ಚಂದ್ರಗಿರಿ ಸಿನಿಮಾ ಚಿಕ್ಕಬಳ್ಳಾಪುರ, ಬೆಳ್ಳಿಕೆರೆ, ಹೊಸಕೋಟೆ ಸುತ್ತುಮುತ್ತ ಜನೇವರಿ 8 ರಿಂದ ಚಿತ್ರೀಕರಣ ಪ್ರಾರಂಭವಾಗಲಿದೆ.

ಈಗಾಗಲೇ ಬಿಡುಗಡೆಗೆ ಸಿದ್ದವಿರುವ ಮುಗಿಲ ಮಲ್ಲಿಗೆ ಚಿತ್ರದ ನಿರ್ದೇಶಕ ರಾಜೀವ್ ಕೃಷ್ಣ ಕಥೆ ಚಿತ್ರಕಥೆ ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಪ್ರಮೋದ್ ಭಾರತೀಯ ಅವರ ಛಾಯಾಗ್ರಹಣ, ಸಾಹಿತ್ಯ ಆರ್ ಕೆ ಗಾಂಧಿ, ಕಲೆ ಮಲ್ಲಿಖಾರ್ಜುನ, ಸಂಕಲನ ವಿನಯ್ ಜಿ ಆಲೂರು, ಪ್ರಸಾಧನ ಮೋಹನ್ ಕುಮಾರ್, ಸ್ಥಿರ ಚಿತ್ರಣ ಇಂದ್ರಕುಮಾರ್, ಸಂಗೀತ ಎಂ ಎಲ್ ರಾಜ, ಸಾಹಸ ಮಾರುತಿ, ಪತ್ರಿಕಾ ಸಂಪರ್ಕ ಎಂ ಜಿ ಕಲ್ಲೇಶ್ ಡಾ, ಪ್ರಭು ಗಂಜಿಹಾಳ ಡಾ, ವೀರೇಶ್ ಹಂಡಗಿ, ವಿ.ಎಂ.ಎಸ್ ಗೋಪಿ, ಈ ಚಿತ್ರದಲ್ಲಿ ಬಾಹುಬಲಿ ಖ್ಯಾತಿಯ ಕಾಲಕೇಯ ಪ್ರಭಾಕರ್. ಶೋಭರಾಜ್. ಪ್ರಿಯ. ಧನ್ಯ ಭೂಮಿಕಾ ಶ್ರೀ,ಅಮೃತ ಕಾಳೆ ಮರಿಸ್ವಾಮಿ. ಪಂಚಾಕ್ಷರಯ್ಯ. ಬೆಂಗಳೂರು ಮನೊ, ಕಿಶೋರ್ ಕಾಸರಗೋಡು, ಮಂಜುನಾಥ್ ಸಾರಟೂರ ನಟಿಸುತ್ತಿದ್ದಾರೆ.
– ವಿ.ಎಂ.ಎಸ್.ಗೋಪಿ ✍️
ಬೆಂಗಳೂರು.

