ಅಪಾಯದ ಮೂನ್ಸೂಚನೆಗೆ ಆಹ್ವಾನಿಸುತ್ತಿರುವ – ದೇವಣಗಾಂವ ಸೇತುವೆ.

ಆಲಮೇಲ ಆ.08

ಸೇತುವೆಯ ಮೇಲ್ಬಾಗದಲ್ಲಿ ಸಸಿಗಳು ಮರಗಳಾಗಿ ಬೆಳೆಯುತ್ತಿರುವುದು

ಸೇತುವೆಯ ಮೇಲ್ಬಾಗದಲ್ಲಿ ಸಂಪೂರ್ಣ ನೀರು ನಿಂತು ದೊಡ್ಡ ದೊಡ್ಡ ಹೊಂಡಗಳಾಗಿರುವ ದೃಶ್ಯಗಳನ್ನು ನೋಡಬಹುದು

ವಿಜಯಪುರ ಕಲಬುರಗಿ ಜಿಲ್ಲೆಗಳ ಒಂದು ಗೂಡಿಸುವ ಕರ್ನಾಟಕ ಮಹಾರಾಷ್ಟ್ರ ರಾಜ್ಯಗಳ ಗಡಿಯನ್ನು ಸಂಪರ್ಕ ಕೊಂಡಿ ಯಾಗಿರುವ ವಿಜಯಪುರ ಜಿಲ್ಲೆಯ ಆಲಮೇಲ ತಾಲೂಕಿನ ದೇವಣಗಾಂವ ಹಾಗೂ ಕಲಬುರ್ಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಸೊನ್ನ ಗ್ರಾಮಗಳ ಮಧ್ಯೆ ನಿರ್ಮಿಸಿರುವ ದೇವಣಗಾಂವ ಸೇತುವೆ ಅಪಾಯದ ಅಂಚಿನಲ್ಲಿದೆ.ಸೇತುವೆ ಕುಸಿಯುವ ಸಾಧ್ಯತೆ ಇದೆ ಆದರೂ ಅಧಿಕಾರಿಗಳು ಇತ್ತ ಕಣ್ಣು ತೆರೆಯುತ್ತಿಲ್ಲಾ. ಔರಾದ ಸದಾಶಿವಘಢ ರಾಜ್ಯ ಹೆದ್ದಾರಿ (34) ಇದಾಗಿದ್ದು. ರಾಷ್ಟ್ರೀಯ ಹೆದ್ದಾರಿಯನ್ನಾಗಿ ಮೇಲ್ದರ್ಜೆಗೆರಿಸ ಬೇಕೆಂಬ ಕೂಗು ಅನೇಕ ವರ್ಷಗಳಿಂದ ಈ ಭಾಗದ ಜನರಲ್ಲಿ ಕೇಳಿ ಬರುತ್ತಿದೆ. ಆದರೆ ಜನ ಪ್ರತಿನಿಧಿಗಳ ನಿರ್ಲಕ್ಷಕ್ಕೆ ಒಳಗಾಗಿ ಈ ರಸ್ತೆ ಸಂಪೂರ್ಣ ಹದಗೆಟ್ಟು ಹೋಗಿದೆ.ಕಳೆದ 2-3 ವರ್ಷಗಳಿಂದ ದುರಸ್ತಿಯಾಗದೆ ಇರುವುದರಿಂದ ಸೇತುವೆ ಮೇಲ್ಭಾಗದಲ್ಲಿ ಮಳೆಯ ನೀರು ನಿಂತು ದೊಡ್ಡ ದೊಡ್ಡ ಕಂದಕಗಳು ನಿರ್ಮಾಣವಾಗಿವೆ. ಪ್ರತಿ ನಿತ್ಯ 20,000ಕ್ಕೂ ಹೆಚ್ಚು ವಾಹನಗಳು ಈ ಸೇತುವೆಯ ಮೂಲಕ ಸಂಚರಿಸುತ್ತವೆ ಆದರೆ ದೊಡ್ಡ ಕಂದಕಗಳು ನೀರು ನಿಂತು ಸೇತುವೆಯ ಮೇಲ್ಭಾಗವು ಸಂಪೂರ್ಣ ಕಿತ್ತುಕೊಂಡು ಹೋಗಿ ಆಳವಾದ ಗುಂಡಿಗಳು ಬಿದ್ದಿವೆ.ಸೇತುವೆಯಯೂ ದೊಡ್ಡ ದೊಡ್ದ ಕಮಾನುಗಳನ್ನು ಹೊಂದಿದ್ದು. ಆ ಕಮಾನುಗಳ ರೀತಿಯಲ್ಲಿ ಸೇತುವೆ ಮೇಲ್ಭಾಗದಲ್ಲಿ ಉಬ್ಬು ಮತ್ತು ತಗ್ಗು ನಿರ್ಮಾಣ ಗೊಂಡಿವೆ.ಸೇತುವೆಯ ಮೇಲೆ ಸಂಚರಿಸುವ ವಾಹನ ಸವಾರರು ಗುಂಡಿಯನ್ನು ತಪ್ಪಿಸುವುದಕ್ಕಾಗಿ ಸರ್ಕಸ್ ಮಾಡ ಬೇಕಾದ ಅನಿವಾರ್ಯತೆ ಇದೆ. ಗುಂಡಿಗಳಲ್ಲಿ ಚಕ್ರಗಳು ಸಿಲುಕಿ ಬಿದ್ದು ಅಪಘಾತ ಸಂಭವಿಸಿದ ಅನೇಕ ಉದಾಹರಣೆಗಳು ಇವೆ. ಇದು ಕಳೆದ ಮೂರು ವರ್ಷಗಳಿಂದ ಇದೇ ರೀತಿಯಾಗಿ ಅಪಘಾತಕ್ಕೆ ಆಹ್ವಾನ ನೀಡುತ್ತಿದೆ.

ಈ ಸೇತುವೆಯ ಮೇಲೆ ನಿತ್ಯ 10 ಸಾವಿರ ದ್ವಿಚಕ್ರ, ನೂರಾರು ತ್ರಿಚಕ್ರ, ಸಾವಿರಾರು ಕಾರು ಜೀಪ್, 200 ಕ್ಕೂ ಹೆಚ್ಚು ಸಾರಿಗೆ ಸಂಸ್ಥೆ ಬಸ್, 50 ಕ್ಕೂ ಹೆಚ್ಚು ಶಾಲಾ ವಾಹನಗಳು, 300 ಕ್ಕೂ ಹೆಚ್ಚು ಸಣ್ಣ ಮತ್ತು ಬೃಹತ್ ಪ್ರಮಾಣದ ಲಾರಿಗಳು, ಈ ಸೇತುವೆ ಮೂಲಕ ಸಂಚರಿಸುತ್ತವೆ. ಒಂದು ವೇಳೆ ಚಾಲಕನ ನಿಯಂತ್ರಣ ತಪ್ಪಿ ದೊಡ್ಡ ಮಟ್ಟದ ಅಪಾಯ ಆಗುವ ಮುಂಚೆ ಅಧಿಕಾರಿಗಳು ಇತ್ತ ಗಮನ ಹರಿಸ ಬೇಕಾಗಿದೆ ಒಂದು ವೇಳೆ ರಿಪೇರಿ ಮಾಡಲು ಆಗದೆ ಇದ್ದರೆ ಇರಲಿ ಕನಿಷ್ಠ ಪಕ್ಷ ಗುಂಡಿಗಳ ಮುಚ್ಚುವುದೂ ಆಗುವುದಿಲ್ಲವೇ ಎನ್ನುತ್ತಾರೆ ಸಾರ್ವಜನಿಕರು. ಕೈಯಲ್ಲಿ ಜೀವ ಹಿಡಿದು ಸಂಚರಿಸುವ ಸ್ಥಿತಿ ಎದುರಾಗಿದ್ದು ವಾಹನ ಸವಾರರು ಸಂಕಟ ಪಡುತ್ತಿದ್ದಾರೆ. ಅನೇಕ ಜನರು ಬಿದ್ದು ಕೈಕಾಲುಗಳಿಗೆ ಗಾಯಗಳನ್ನು ಮಾಡಿ ಕೊಂಡಿದ್ದಾರೆ ಕಳೆದ ವರ್ಷ ದೇವಣಗಾಂವ ಮತ್ತು ಸುತ್ತ ಮುತ್ತಲಿನ ಗ್ರಾಮಸ್ಥರು ಸೇರಿ ಕೊಂಡು ಸೇತುವೆ ಉಳಿಸಿ ಎಂಬ ಬೃಹತ್ ಪ್ರಮಾಣದ ರಸ್ತೆ ತಡೆದು ಪ್ರತಿಭಟನೆಯನ್ನು ಮಾಡಿ ಸೇತುವೆ ರಿಪೇರಿ ಮಾಡುವಂತೆ ಆಗ್ರಹಿಸಿ ಅಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಿದರು. ಆದರೆ ಕೆಲವೇ ದಿನಗಳಲ್ಲಿ ರಿಪೇರಿ ಮಾಡುತ್ತೇವೆ ಎಂದು ಹೇಳಿ ಹೋದ ಅಧಿಕಾರಿಗಳು ಮತ್ತೆ ಸೇತುವೆಯ ಕಡೆಗೆ ಮುಖ ಮಾಡಿಲ್ಲಾ.ಸೇತುವೆಯ ಎರಡು ಮಗ್ಗುಲಗಳಲ್ಲಿ ಸಸಿಗಳು ಹುಟ್ಟಿ ಕೊಂಡು ಮರಗಳಾಗಿ ಬೆಳೆದು ನಿಂತಿವೆ ಇವುಗಳು ಸೇತುವೆಯ ತಳವನ್ನೇ ಅಲುಗಾಡಿಸುತ್ತಿವೆ ಅವುಗಳ ನಿರ್ವಹಣೆ ಕೂಡ ಮಾಡುತ್ತಿಲ್ಲಾ.

ಸೇತುವೆಯ ಇತಿಹಾಸ:-

ಸುಮಾರು ಅರ್ಧ ಕಿ.ಮೀ ಉದ್ದವಿರುವ ಈ ಸೇತುವೆಯು 1960 ರಿಂದ 1963 ರ ವರೆಗೆ ನಿರ್ಮಿಸಲ್ಪಟ್ಟಿದ್ದು ಗಟ್ಟಿ ಮುಟ್ಟಾದ ಉದ್ದನೆಯ ಬಾಲ ಹೊಂದಿರುವ ಕಲ್ಲುಗಳಿಂದ ನಿರ್ಮಿಸಲ್ಪಟ್ಟಿದ್ದು ಕಲ್ಲಿನ ಕಂಬಗಳು, ದೊಡ್ಡ ಕಮಾನುಗಳನ್ನು ಹೊಂದಿದೆ. ಈ ಕಂಬಗಳು ಹಾಗೂ ಪಕ್ಕದಲ್ಲಿನ ತಡೆಗೋಡೆ ಇನ್ನೂ ಕೂಡ ಗಟ್ಟಿ ಮುಟ್ಟಾಗಿ ಇದೆ. ಆದರೆ 2002 ರಲ್ಲಿ ಸೇತುವೆ ಮೇಲ್ಭಾಗ ಹಾಳಾಗಿದ್ದ ಪರಿಣಾಮ ಮೇಲ್ಭಾಗವನ್ನು ಮರು ನಿರ್ಮಿಸಲಾಗಿದೆ ಆದರೆ ಸದ್ಯ ಇದೇ ಮೇಲ್ಭಾಗ ಮತ್ತೆ ಕುಸಿಯುತ್ತಿದ್ದು ಸೇತುವೆ ಅಡಿಪಾಯ ಅಲುಗಾಡುವ ಸಾಧ್ಯತೆ ಹೆಚ್ಚಾಗಿದೆ. ಬೆಳಗಾವಿ ನಿಪ್ಪಾಣಿಗಳಿಂದ ಕಲಬುರ್ಗಿ ವರೆಗೆ ನಿತ್ಯ ಸಂಚರಿಸುತ್ತೇವೆ ಆದರೆ ಆಲಮೇಲ ದೇವಣಗಾಂವ ನಡುವಿನ ರಸ್ತೆ ಹಾಗೂ ಇಂತಹ ಗುಂಡಿಗಳು ಬಿದ್ದಿರುವ ಸೇತುವೆಯನ್ನು ನಾವು ಎಲ್ಲಿಯೂ ಕಂಡಿಲ್ಲಾ.

ಈ 15 ಕಿ.ಮಿ ರಸ್ತೆ ಸಂಪೂರ್ಣ ಹದಗೆಟ್ಟಿದ.ಎಂ ಸಾರಿಗೆ ಸಂಸ್ಥೆಯ ಚಾಲಕ ನಿಪ್ಪಾಣಿ ಘಟಕ 65 ವರ್ಷಗಳ ಇತಿಹಾಸ ಹೊಂದಿರುವ ಇಂದಿಗೂ ಕೂಡ ಗಟ್ಟಿ ಮುಟ್ಟಾಗಿರುವ ದೇವಣಗಾಂವ ಸೇತುವೆ ಉಳಿಸಿ ಕೊಳ್ಳುವ ಗೋಸ್ಕರವಾಗಿ ಜಿಲ್ಲೆಯಲ್ಲಿಯೇ ವಿಶಿಷ್ಟವಾದ ಇತಿಹಾಸ ಹೊಂದಿರುವ ಈ ಸೇತುವೆ ಉಳಿಸಿ ಕೊಳ್ಳುವ ಸಲುವಾಗಿ ದೇವಣಗಾಂವ ಗ್ರಾಮದ ಯುವಕರ ತಂಡವೊಂದು ಹೋರಾಟಕ್ಕೆ ಸಿದ್ಧತೆ ಕೈಗೊಳ್ಳುತ್ತಿದೆ. ಇಷ್ಟು ದಿನಗಳ ವರೆಗೂ ಅಧಿಕಾರಿಗಳು, ಜನ ಪ್ರತಿನಿಧಿಗಳು, ಸೇತುವೆ ರಿಪೇರಿ ಮಾಡಬಹುದು ಎಂದು ಇಲ್ಲಿಯ ವರೆಗೆ ಕಾಯ್ದು ನೋಡಿದೆವು ಆದರೆ ಹೀಗೆ ಕೈ ಕಟ್ಟಿ ಕುಳಿತರೆ ಸೇತುವೆ ನಶಿಸಿ ಹೋಗುತ್ತದೆ. ಈ ಭಾಗದ ಜನರಿಗೆ ಸಂಚಾರಕ್ಕೆ ಸಂಚಕಾರ ಬರುವ ಕಾಲ ದೂರವಿಲ್ಲ ಆದ್ದರಿಂದ ಎರಡು ಜಿಲ್ಲೆಗಳ ಸಂಪರ್ಕ ಕೊಂಡಿ ಕಳಚಿ ಬೀಳುವ ಮೊದಲು ಸುತ್ತ ಮುತ್ತಲಿನ ಗ್ರಾಮಗಳಾದ ಆಲಮೇಲ, ದೇವಣಗಾಂವ, ಬೊಮ್ಮನಹಳ್ಳಿ, ಕುಮಸಗಿ, ದೇವರ ನಾದವದಗಿ, ಕಡ್ಲೆವಾಡ, ಶಂಬೆವಾಡ, ಬ್ಯಾಡಗಿಹಾಳ, ಕುರುಬತಹಳ್ಳಿ, ಹಾಗೂ ಅಫಜಲಪುರ, ಸೊನ್ನ, ಬಳುಂಡಗಿ, ಶಿರವಾಳ, ಗೌರ, ಅಳ್ಳಗಿ, ಕರಜಗಿ ಮಾಶಾಳ ಸೇರಿದಂತೆ ಹಲವಾರು ಗ್ರಾಮಸ್ಥರು ಸೇತುವೆ ರಕ್ಷಣೆಗಾಗಿ ಹೋರಾಟಕ್ಕೆ ಮುಂದಾಗಿದ್ದಾರೆ ತೀವ್ರ ಎಚ್ಚರಿಕೆ ಇತ್ತ ಕಡೆ ತಿರುಗಿ ನೋಡದ ಅಧಿಕಾರಿ ವರ್ಗ, ಕಣ್ಣು ಇದ್ದು ಕುರುಡಾದ ಸರ್ಕಾರಕ್ಕೆ ಕರೆ ಘಂಟೆ ಕೊಟ್ಟಿದ್ದಾರೆ.

ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ರೇವಣಸಿದ್ದಯ್ಯ.ಜಿ.ಹಿರೇಮಠ.ಆಲಮೇಲ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button