ಮಾಜಿ ಸೈನಿಕರಿಂದ ಸ್ವದೇಶಿ ಬಳಸಿ, ದೇಶ ಬೆಳಸಿ – ಸೈಕಲ್ ಜಾಥಾ.
ತರೀಕೆರೆ ಡಿ.27

ಭಾರತದಲ್ಲಿ ಉತ್ಪಾದನೆಯಾದ ವಸ್ತುಗಳನ್ನು ಖರೀದಿಸಬೇಕು ನಮ್ಮ ಹಣ ನಮ್ಮ ದೇಶದ ಪ್ರಗತಿಗೆ ಸಾಧ್ಯವಾಗುತ್ತದೆ ಎಂದು ಮಾಜಿ ಸೈನಿಕರು ಬ್ರಿಗೇಡ್ ರವಿ ಮುನಿಸ್ವಾಮಿ ರವರು ಹೇಳಿದರು. ಅವರು ಇಂದು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಾಜಿ ಸೈನಿಕರ ಸಂಘ ಏರ್ಪಡಿಸಿದ್ದ ಜಾತದಲ್ಲಿ ಬಂದ ಮಾಜಿ ಸೈನಿಕರಿಗೆ ಅಭಿನಂದನಾ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು.
ವಿದೇಶಿ ಉತ್ಪನ್ನಗಳನ್ನು ಖರೀದಿಸಿದರೆ ನಮ್ಮ ಹಣ ಹೊರ ದೇಶಗಳ ಅಭಿವೃದ್ಧಿಗೆ ಕಾರಣವಾಗುತ್ತದೆ ಆದ್ದರಿಂದ ಸ್ವದೇಶಿ ವಸ್ತುಗಳನ್ನು ಖರೀದಿಸ ಬೇಕು ನಮ್ಮ ನೆಲ ಜಲ ಉಳಿಸ ಬೇಕು ನಮ್ಮ ಸಂಸ್ಕೃತಿ ಉಳಿಸ ಬೇಕು ಎಂದು ಸೈಕಲ್ ಜಾಥಾ ಮೂಲಕ ಜನ ಜಾಗೃತಿ ಮೂಡಿಸುತ್ತಿದ್ದೇವೆ. ಈಗ 1400 ಕಿಲೋ ಮೀಟರ್ ಜಾಥಾ ಮುಗಿಸಿದ್ದೇವೆ ಇನ್ನು 3600 ಕಿಲೋ ಮೀಟರ್ ಜಾಥಾ ಮಾಡಲಿದ್ದೇವೆ ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಬಿಎಸ್ ಭಗವಾನ್ ರವರು ಮಾತನಾಡಿ ದೇಶ ಎಂಬುದು ದೊಡ್ಡ ಪರಿಕಲ್ಪನೆ ನಿವೃತ್ತಿಯ ನಂತರವೂ ದೇಶಪ್ರೇಮ ನಮ್ಮ ಮಾಜಿ ಸೈನಿಕರದ್ದು, ಅನ್ನ ಕೊಡುವ ರೈತ ಎಷ್ಟು ಮುಖ್ಯ ದೇಶ ಕಾಯುವ ಸೈನಿಕರು ಅತಿ ಮುಖ್ಯ, ದೇಶದ ಅಳಿವು ಉಳಿವಿಗೆ ನಮ್ಮ ಕಟ್ಟುಪಾಡುಗಳು ಮುಖ್ಯವಾದದ್ದು. ಮಾನವೀಯ ಧರ್ಮ ಅರಿವು ಮೂಡಿಸುವ ಜಾಥಾ ಇದಾಗಿದೆ ಎಂದು ಹೇಳಿದರು.
ಮಾಜಿ ಸೈನಿಕರು ಕರ್ನಲ್ ಕಂದ ಸ್ವಾಮಿ ಮಾತನಾಡಿ ಭಾರತದ ಭೀಮ್ ಆಪ್, ಭಾರತ್ ಆಪ್ ಬಳಸಿ, ವಿದೇಶಿಯ ಆ್ಯಪ್ ಗಳನ್ನು ಬಳಸ ಬೇಡಿರಿ ಎಂದು ಕರೆ ನೀಡಿದರು. ಜನ ಚಿಂತನ ಸಂಸ್ಥೆಯ ಅಧ್ಯಕ್ಷರಾದ ವೀರಭದ್ರಯ್ಯ ಮಾತನಾಡಿ ಸೈನಿಕರು ಜಾತಿ ಧರ್ಮ ಎನ್ನದೆ ದೇಶ ಸೇವೆ ಮತ್ತು ಸಮಾಜ ಸೇವೆಯಲ್ಲಿ ತೊಡಗಿದ್ದಾರೆ ಅವರು ಸೈಕಲ್ ಜಾಥಾ ಮೂಲಕ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದು ಹೇಳಿದರು.

ಮಹಾತ್ಮ ಪ್ರೊ ಬಿ ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕರಾದ ತರೀಕೆರೆ ಎನ್ ವೆಂಕಟೇಶ್ ಮಾತನಾಡಿ ಸೈನಿಕರಿಗೆ ಸಮಾಜವು ವಿಶೇಷವಾದ ಗೌರವ ಸಮರ್ಪಣೆ ಮಾಡುತ್ತದೆ ಏಕೆಂದರೆ ಅವರು ದೇಶವನ್ನು ರಕ್ಷಣೆ ಮಾಡುವ ಮೂಲಕ ನಮ್ಮೆಲ್ಲರ ರಕ್ಷಣೆ ಮಾಡುತ್ತಿದ್ದಾರೆ ಅವರು ಇಂದು ಸ್ವದೇಶಿ ಬಳಸಿ ದೇಶ ಬೆಳೆಸಿ ಎಂದು ಜಾಥಾ ಮಾಡುತ್ತಿರುವುದು ಒಂದು ಬದಲಾವಣೆಯ ಅಲೆ ಎಬ್ಬಿಸುತ್ತಿದ್ದಾರೆ ಎಂದು ಹೇಳಿದರು. ಅವರ ಈ ಜಾಥಾ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.
ಈ ಜಾಥಾದಲ್ಲಿ ಡಿಪ್ಟಿ ಕಮಾಂಡೆಂಟ್ ಆದ ರಮೇಶ್ ನರಸಯ್ಯ, ವೇದಮೂರ್ತಿ,ಗೋಪಿನಾಥ ಪಿಳ್ಳಿ, ಜಾಹಿರ್, ಜಗನ್ನಾಥ, ಬಾಬು, ಚೀಪ್ ಇಂಜಿನಿಯರ್ ಸಾಗರ್, ಹೇಮಂತ್ ಜಾದವ್,ಶಾಂತ, ಸಹಸ್ರನಾಮ ಅಯ್ಯರ್, ಹಾಗೂ ರಮೇಶ್ ಜಗತ್ತಪ್ಪ ಭಾಗವಹಿಸಿದ್ದು ಮಾಜಿ ಸೈನಿಕರಾದ ದೇವೇಂದ್ರ,ಎಸ್ ಹೆಚ್ ಕುಮಾರ್, ಗೋವಿಂದಪ್ಪ, ಸಿದ್ದಪ್ಪ, ಪಾಲಾಕ್ಷಪ್ಪ, ಸಹಾಯಗಂ, ಜಗನ್ನಾಥ್, ಸೋಮಣ್ಣ ಹಾಗೂ ಅರಿವು ವೇದಿಕೆಯ ಶಿವಣ್ಣ ಉಪಸಿತರಿದ್ದು ಮಾಜಿ ಸೈನಿಕರ ಸಂಘದ ಅಧ್ಯಕ್ಷರಾದ ಮಿಲಿಟರಿ ಶ್ರೀನಿವಾಸ್ ಸ್ವಾಗತಿಸಿ ವಂದಿಸಿದರು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಎನ್.ವೆಂಕಟೇಶ್ ತರೀಕೆರೆ ಚಿಕ್ಕಮಗಳೂರು
