ಡಿ. 28 ಕ್ಕೆ ನೂತನ ಹಂಡೇಸಿರಿ ಸಹಕಾರ ಸಂಘ – ಉದ್ಘಾಟನೆಗೆ ಸಜ್ಜು.
ಮುದ್ದೇಬಿಹಾಳ ಡಿ.27

ನಗರದ ಮದರಿ ಕಾಂಪ್ಲೆಕ್ಸನ ಪಲ್ಲವಿ ಬಿಲ್ಡಿಂಗ್ (ಹೇಮರೆಡ್ಡಿ ಮಲ್ಲಮ್ಮ ಸರ್ಕಲ್ ಹುಡುಕೋ ಕಾಲೋನಿ) ನಲ್ಲಿ ಡಿಸೆಂಬರ್ 28 ರ ರವಿವಾರ ಮುಂಜಾನೆ 11:00 ಗಂಟೆಗೆ ಹಂಡೇಸಿರಿ ಸಹಕಾರ ಸಂಘ ನಿಯಮಿತ ಮುದ್ದೇಬಿಹಾಳ ನೂತನ ಸಹಕಾರಿ ಸಂಘ ಉದ್ಘಾಟನಾ ಸಮಾರಂಭ ಆಯೋಜಿಸಲಾಗಿದೆ.
ಕಾರ್ಯಕ್ರಮಕ್ಕೆ ವಿಷಮರ್ಧನ ಶ್ರೀ ಗಂಗಾಧರೇಶ್ವರ ಮಠದ ಪರಮ ಪೂಜ್ಯ ಶ್ರೀ ಶಿವಕುಮಾರ್ ಮಹಾ ಸ್ವಾಮಿಗಳು ಹಾಗೂ ಕೊಡೆಕಲ್ ಮಹಲಿನ್ ಮಠದ ಬಸವ ಪೀಠಾಧಿಪತಿಗಳಾದ ಪರಮ ಪೂಜ್ಯ ಶ್ರೀ ವೃಷಭೇಂದ್ರ ಅಪ್ಪನವರು ದಿವ್ಯ ಸಾನಿಧ್ಯ ವಹಿಸಲಿದ್ದಾರೆ. ಸಮಾರಂಭವನ್ನು ಮುದ್ದೇಬಿಹಾಳ ವಿಧಾನ ಸಭಾ ಕ್ಷೇತ್ರದ ಶಾಸಕರು ಹಾಗೂ ಕರ್ನಾಟಕ ಸಾಬೂನು ಮತ್ತು ಮರ್ಜಕ ನಿಗಮ ಮಂಡಳಿಯ ಅಧ್ಯಕ್ಷರು ಆದ ಮಾನ್ಯ ಸಿ,ಎಸ್ ನಾಡಗೌಡ (ಅಪ್ಪಾಜಿ) ಉದ್ಘಾಟಿಸಲಿದ್ದಾರೆ, ಸಂಘದ ಅಧ್ಯಕ್ಷರಾದ ಎಸ್,ಬಿ ಹಂಡ್ರಗಲ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಹಿರಿಯ ನ್ಯಾಯವಾದಿ ಹಾಗೂ ಸಂಗಮೇಶ್ವರ ಪತ್ತಿನ ಸಹಕಾರಿ ಸಂಘದ ಸಂಸ್ಥಾಪಕ ಅಧ್ಯಕ್ಷ ಆರ್,ಬಿ ಪಾಟೀಲ್ ನಿವೃತ್ತ ಉಪ ನಿಬಂಧಕ ಪಿ,ಬಿ,ಕಾಳಗಿ ತಾಲೂಕ ಕುರುಬರ ಸಂಘದ ಅಧ್ಯಕ್ಷ ಎಂ, ಎನ್, ಮದರಿ, ಕರ್ನಾಟಕ ಕೋ-ಆಪ್ ಬ್ಯಾಂಕ್ ಅಧ್ಯಕ್ಷ ಸಿ,ಎಲ್, ಬಿರಾದಾರ್, ( ಮುತ್ತು ಗೌಡ ) ಸಂಗಮೇಶ್ವರ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ, ಸಾವಿತ್ರಿ, ಶೇ, ತೊಂಡಿಹಾಳ, ತಾಲೂಕ ಸಹಕಾರ ಅಭಿವೃದ್ಧಿ ಅಧಿಕಾರಿ ವಿಜಯಕುಮಾರ್, ಎಸ್, ಉತ್ಪಾಳ್, ವಿ, ಡಿ, ಸಿ, ಸಿ, ಬ್ಯಾಂಕ್ ವ್ಯವಸ್ಥಾಪಕ ಎಸ್, ಪಿ, ಪಾಟೀಲ್, ಸಹಕಾರಿ ಕ್ಷೇತ್ರದ ಹಿರಿಯರಾದ ಮೊಮ್ಮದ್ ರಫೀಕ್,ಎಲ್, ನಾಡಗೇರ್, ಭಾಗವಹಿಸಲಿದ್ದಾರೆ.
ಸಹಕಾರ ಕ್ಷೇತ್ರದಲ್ಲಿ ಹೊಸ ಭರವಸೆಯಾಗಿ ರೂಪು ಕೊಂಡಿರುವ ಹಂಡೇಸಿರಿ ಸಹಕಾರ ಸಂಘವು ಸ್ಥಳೀಯ ವ್ಯಾಪಾರ, ಉದ್ಯಮ ಹಾಗೂ ಆರ್ಥಿಕ ಸಬಲೀಕರಣಕ್ಕೆ ನೆರವಾಗಲಿದೆ ಎಂದು ಸಂಘದ ಆಡಳಿತ ಮಂಡಳಿ ವಿಶ್ವಾಸ ವ್ಯಕ್ತಪಡಿಸಿದೆ.
ಕಾರ್ಯಕ್ರಮಕ್ಕೆ ಸಂಘದ ಅಧ್ಯಕ್ಷರು ಉಪಾಧ್ಯಕ್ಷರು, ಆಡಳಿತ ಮಂಡಳಿ ಸದಸ್ಯರು, ಹಾಗೂ ಸರ್ವ ನಿರ್ದೇಶಕರು, ಸದಸ್ಯರು ಮತ್ತು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಸಂಘದ ವತಿಯಿಂದ ಮನವಿ ಮಾಡಲಾಗಿದೆ.

