ಎಂ.ಕೆ ಗುಡಿಮನಿ ಅವರಿಗೆ ಗೌರವ – ಡಾಕ್ಟರೇಟ್ ಪ್ರಧಾನಕ್ಕೆ ಭಾಜನ.
ಮುದ್ದೇಬಿಹಾಳ ಡಿ.27

ಅಮೆರಿಕನ್ ವೀಸಡಂ ಫೀಸ್ ಯೂನಿವರ್ಸಿಟಿ ವತಿಯಿಂದ ಶನಿವಾರ ಹೊಸೂರಿನಲ್ಲಿ ಆಯೋಜಿಸಿದ್ದ ವಿಶೇಷ ಕಾರ್ಯಕ್ರಮದಲ್ಲಿ ಮುದ್ದೇಬಿಹಾಳ ತಾಲೂಕಿನ ಆರ್‌ಡಿಪಿಆರ್ ಇಲಾಖೆಯ ಉದ್ಯೋಗಿ ಹಾಗೂ ರಾಷ್ಟ್ರ ಮಟ್ಟದ ಕ್ರೀಡಾಪಟು ಎಂ.ಕೆ ಗುಡಿಮನಿ ಅವರಿಗೆ ಗೌರವ ಡಾಕ್ಟರೇಟ್ ಪ್ರಶಸ್ತಿ ಪ್ರಧಾನ ಮಾಡಿ ಗೌರವಿಸಲಾಯಿತು.
ಎಂ.ಕೆ ಗುಡಿಮನಿ ಅವರು ರಾಷ್ಟ್ರಮಟ್ಟದ ವಿವಿಧ ಕ್ರೀಡಾಕೂಟಗಳಲ್ಲಿ ಸಾಧಿಸಿರುವ ಗಣನೀಯ ಸಾಧನೆಗಳನ್ನು ಗುರುತಿಸಿ, ಕ್ರೀಡಾ ಕ್ಷೇತ್ರಕ್ಕೆ ನೀಡಿರುವ ಕೊಡುಗೆಯನ್ನು ಮೆಚ್ಚಿ ಈ ಗೌರವ ಡಾಕ್ಟರೇಟ್ ಪ್ರಶಸ್ತಿಯನ್ನು ನೀಡಲಾಗಿದೆ.

ಪ್ರಶಸ್ತಿ ಸ್ವೀಕರಿಸಿದ ಬಳಿಕ ಮಾತನಾಡಿದ ಎಂ.ಕೆ ಗುಡಿಮನಿ ಅವರು, ಈ ಗೌರವ ನನ್ನ ಕ್ರೀಡಾ ಜೀವನಕ್ಕೆ ಮತ್ತಷ್ಟು ಪ್ರೇರಣೆಯಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಸಹದ್ಯೋಗಿಗಳು, ಕುಟುಂಬಸ್ಥರು, ಸ್ನೇಹಿತರು ಹಾಗೂ ಕ್ರೀಡಾಭಿಮಾನಿಗಳು ಉಪಸ್ಥಿತರಿದ್ದು ಎಂ.ಕೆ. ಗುಡಿಮನಿ ಅವರಿಗೆ ಅಭಿನಂದನೆಗಳನ್ನು ಸಲ್ಲಿಸಿದರು.
ವರದಿ:-ಜಿ.ಎನ್ ಬೀರಗೊಂಡ (ಮುತ್ತು).
