“ರೈತರು ಹರುಷದಿರಲು ಜಗವೆಲ್ಲಾ ಆನಂದಮಯವು”…..

ಭಾರತ ದೇಶದ ಭಾಗ್ಯದಾತರು ಭೂದೇವಿಯ
ಒಡಲ ಕರ್ಮಸ್ಥಳವು
ಬೆವರುಸುರಿಸಿ ಶ್ರಮದಿ ದುಡಿವರು
ಭೂಮಿ ತಾಯಿ ನೆಚ್ಚಿನ ಮಕ್ಕಳು
ಎತ್ತುಗಳೇ ಗೆಳೆಯರು ಸಕಲ ಜೀವರಾಶಿ
ಪ್ರಾಣಿ ಪಕ್ಷಿಗಳ ಸ್ನೇಹ ಬೆಸುಗೆಯು
ಸಕಾಲದಲಿ ಮಳೆ ಭೂಮಿಗೆ ಇಳೆ
ನಮ್ಮ ಪರಿವಾರಕ್ಕೆ ಹರುಷದ ಹೊಳೆ
ಜೋಡೆತ್ತು ಉತ್ತಮ ಫಸಲಿಗೆ ಉತ್ತು
ಕೃಷಿಯು ನಾಡ ದೇಶದ ಖುಷಿಯು
ನಿತ್ಯ ಕರ್ಮಯೋಗಿ ದೇಶದ ಬೆನ್ನುಲುಬು
ತ್ಯಾಗಿಯಾಗಿ ಯೋಗಿಯ ಬಲ ಯುಕ್ತಿಯ
ಸಾಧಕರು
ವಿಶ್ವ ನಿಜ ವಿಶ್ವನಾಯಕನು ಊಟ ಸವಿಯುವ
ಸಮಯವು
ನಾವೆಲ್ಲಾರು ರೈತರಿಗೊಂದು ಸಲಾಂ
ಹೇಳೋಣ
“ಅನ್ನದಾತ ಸುಖಿಭವ” ನಮ್ಮೆಲ್ಲರ
ಬಯಕೆಯಂ
ರೈತರು ಹರುಷದಿರಲು ಜಗವೆಲ್ಲಾ
ಆನಂದಮಯವು
ಶ್ರೀದೇಶಂಸು
ಶ್ರೀಸುರೇಶ ಶಂಕ್ರೆಪ್ಪ ಅಂಗಡಿ
ದೇವರ ಹಿಪ್ಪರಗಿ
