ದಲಿತರ ಆದಿವಾಸಿಗಳ ಅಲೆಮಾರಿಗಳ ಸಮಸ್ಯೆಗಳನ್ನು ಬಗೆಹರಿಸಿ – ತರೀಕೆರೆ ಎನ್ ವೆಂಕಟೇಶ್.

ಮೈಸೂರು ಡಿ.29

ಹುಣಸೂರು ತಾಲೂಕಿನಲ್ಲಿ ದಲಿತರು ಮತ್ತು ಆದಿವಾಸಿಗಳು ಅಲೆಮಾರಿಗಳು ಮನೆ ನಿವೇಶನಗಳಿಲ್ಲದೆ ಬದುಕುತ್ತಿದ್ದಾರೆ ಅವರಿಗೆ ಹುಣಸೂರಿನಲ್ಲಿ 2004 ರಲ್ಲಿ ಶಾಸಕರಾಗಿದ್ದ ಕೋಡಿ ಪಾಪಣ್ಣ ರವರು 870 ನಿವೇಶನಗಳ ಹಂಚಿಕೆ ಮಾಡಿದ್ದು ಅದು ಉಳ್ಳವರ ಪಾಲಾಗಿದೆ ಕೂಡಲೇ ಅನರ್ಹರನ್ನು ರದ್ದುಪಡಿಸಿ ನಿಜವಾದ ಬಡವರಿಗೆ ನಿವೇಶನಗಳ ಹಂಚಿಕೆ ಮಾಡಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕರಾದ ತರೀಕೆರೆ ಎನ್ ವೆಂಕಟೇಶ್ ರವರು ಹೇಳಿದರು.

ಅವರು ಇಂದು ಹುಣಸೂರು ತಾಲೂಕು ಮಹಾತ್ಮಾ ಪ್ರೊ ಬಿ ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿ ಹಮ್ಮಿಕೊಂಡಿದ್ದ ಬೃಹತ್ ಚಳುವಳಿಯನ್ನು ಉದ್ದೇಶಿಸಿ ಮಾತನಾಡಿದರು.

ಗೌಡೆಕೆರೆ ಹೋಬಳಿ ಚಿಕ್ಕಾಡಿಗನಹಳ್ಳಿ, ಮಾಚಬಾರನಹಳ್ಳಿ, ಹುಲ್ಯಾಳ,ತನಗೂಡು, ಯಶೋದಪುರ, ಜೋಡಿ ಕೊಪ್ಪಲು ಕಾಲೋನಿಗೆ ಹಾಗೂ ಹುಣಸೂರು ನಗರದ ಬಾಚಳ್ಳಿ ರಸ್ತೆಯ ಅಂಬೇಡ್ಕರ್ ನಗರದಲ್ಲಿ ವಾಸ ಮಾಡುತ್ತಿರುವ ದಲಿತರಿಗೆ,ಅಲೆಮಾರಿಗಳಿಗೆ ಸ್ಮಶಾನ ಇಲ್ಲದೆ ತುಂಬಾ ತೊಂದರೆ ಆಗಿರುತ್ತದೆ ಕಂದಾಯ ಇಲಾಖೆಯವರು ಕೂಡಲೇ ಸ್ಮಶಾನ ಮಂಜೂರಿ ಮಾಡಿಕೊಡಬೇಕೆಂದು ಒತ್ತಾಯಿಸಿದರು.

ರಾಜ್ಯ ಸಂಘಟನಾ ಸಂಚಾಲಕರಾದ ಕೆ ನಂಜಪ್ಪ ಬಸವನಗುಡಿ ರವರು ಮಾತನಾಡಿ ಅಲೆಮಾರಿಗಳಿಗೆ ರೇಷನ್ ಕಾರ್ಡ್ ಇರುವುದಿಲ್ಲ ಮತದಾರರ ಪಟ್ಟಿಯಲ್ಲಿ ಹೆಸರಿಸಿರುವುದಿಲ್ಲ ಆಧಾರ ಕಾರ್ಡ್ ಇರುವುದಿಲ್ಲ ಮೂಲಭೂತ ಸೌಕರ್ಯಗಳನ್ನು ಸರ್ಕಾರ ಕಲ್ಪಿಸಿ ಕೊಡಬೇಕು ಎಂದು ಹೇಳಿದರು.

ರಾಜ್ಯ ಸಂಘಟನಾ ಸಂಚಾಲಕರಾದ ನಿಂಗರಾಜ ಮಲ್ಲಾಡಿ ರವರು ಮಾತನಾಡಿ ಪೌರ ಕಾರ್ಮಿಕರವಾದ ಚಿನ್ನಸ್ವಾಮಿ ರವರಿಗೆ ಪಿಟೀಶಿಯಲ್ ಕಾಯ್ದೆ ಯಡಿಯಲ್ಲಿ ನಾಲ್ಕು ಎಕರೆ , ಪುನರ್ ಸ್ಥಾಪಿಸಿ ಕೊಡಲು ತೀರ್ಮಾನವಾಗಿದ್ದರೂ ಅದರಲ್ಲಿ ಒಂದು ಎಕರೆ ಕೈಬಿಟ್ಟಿದ್ದು ಕೂಡಲೇ ಅದನ್ನು ಬಿಡಿಸಿ ಕೊಡಬೇಕು ಹಾಗೂ ತಮ್ಮಟದ ಹಳ್ಳಿ ಗ್ರಾಮದ ಸರ್ವೆ ನಂಬರ್ 37ರಲ್ಲಿ ಮಹದೇವಮ್ಮ ರವರ ಎರಡು ಎಕರೆ ಪಿಟಿಸಿಎಲ್ ಕಾಯ್ದೆಯಲ್ಲಿ ಆದೇಶವಾಗಿದ್ದು ಸವರ್ಣಿಯರು ತೊಂದರೆ ಕೊಡುತ್ತಿದ್ದು ಇವರಿಗೆ ಪೊಲೀಸ್ ರಕ್ಷಣೆ ನೀಡಬೇಕು ಎಂದು ಹೇಳಿದರು.

ಅಪ್ಪನ ಕುಪ್ಪೆ ಗ್ರಾಮದಲ್ಲಿ 40 ಪರಿಶಿಷ್ಟ ಮಾದಿಗ ಸಮಾಜದವರಿಗೆ ಮನೆ ನಿವೇಶನಗಳು ಪಂಚಾಯತ್ ರಾಜ್ ಇಲಾಖೆ ವತಿಯಿಂದ ನಮ್ಮ ಮನೆ ನಮ್ಮ ತೋಟ ಯೋಜನೆ ಮಂಜೂರಾಗಿದ್ದು ಆದರೆ ಅಕ್ಕಪತ್ರ ಕೊಟ್ಟಿರುವುದಿಲ್ಲ ಕೂಡಲೇ ಹಕ್ಕು ಪತ್ರ ಕುಡಿಸಿಕೊಡಬೇಕು, ಕೆಬ್ಬೆಕೊಪ್ಪಲು ದೊಂಬರ ಕಾಲೋನಿಯಲ್ಲಿ 30ಕ್ಕೂ ಹೆಚ್ಚು ನಿರ್ಗತಿಕ ದೊಂಬರ ಜಾತಿಗೆ ಸೇರಿದ ಅಲೆಮಾರಿ ಕುಟುಂಬಗಳಿಗೆ ವಾಸಿಸಲು ಮನೆ ರಸ್ತೆ ಚರಂಡಿ ಸಮುದಾಯ ಭವನ ಹಾಗೂ ಮುಂತಾದ ಮೂಲಭೂತ ಸೌಲಭ್ಯಗಳನ್ನು ಮಂಜೂರು ಮಾಡಿಕೊಡಬೇಕು, ಮಂಗಳೂರು ಮಾಳ ಆದಿವಾಸಿ ಆಡಿಯಲ್ಲಿ 40 ಜೇನು ಕುರುಬ ಕುಟುಂಬಗಳು ವಾಸ ಮಾಡುತ್ತಿದ್ದು 20 ಕುಟುಂಬ ಗಳಿಗೆ ರೇಷನ್ ಕಾರ್ಡ್ ಇರುವುದಿಲ್ಲ ಕೂಡಲೇ ರೇಷನ್ ಕಾರ್ಡ್ ಗಳನ್ನು ಆಹಾರ ಇಲಾಖೆಯಿಂದ ಕೊಡಿಸಿಕೊಡಬೇಕು ಎಂದು ಹೇಳಿದರು.

ಈ ಪ್ರತಿಭಟನೆಯಲ್ಲಿ ಮೈಸೂರು ವಿಭಾಗೀಯ ಸಂಚಾಲಕರಾದ ಜಗದೀಶ್ ಜಿಲ್ಲಾ ಸಂಚಾಲಕರಾದ ದಿವಾಕರ್ ತಾಲೂಕು ಸಂಚಾಲಕರಾದ ಕೆಂಪರಾಜ್, ಮುರುಗೇಶ್, ಶೇಖರ, ಮಹಿಳಾ ಒಕ್ಕೂಟದ ಲಕ್ಷ್ಮಿ, ಚುಂಚನಕಟ್ಟೆ ಸೌಮ್ಯ, ಗಜೇಂದ್ರ,ದೇವೇಂದ್ರ ಕುಲವಾಡಿ,ಪರಶುರಾಮ್, ಕುಮಾರ ಮತ್ತು ಪಿರಿಯಾಪಟ್ಟಣ ತಾಲೂಕು ಸಂಚಾಲಕರಾದ ಮಲ್ಲಿಕಾ, ನಾಗಮ್ಮ,ಕೆ ಆರ್ ನಗರ ತಾಲೂಕಿನ ರಂಗಮ್ಮ, ಗಂಗಮ್ಮ ಹಾಗೂ ಪುಷ್ಪ ಮುಂತಾದವರು ಸಾವಿರಾರು ಜನ ಅಲೆಮಾರಿ ಆದಿವಾಸಿ ಮತ್ತು ದಲಿತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು . ಹುಣಸೂರು ತಹಸಿಲ್ದಾರ್ ಅವರಿಗೆ ಮನವಿ ಪತ್ರ ನೀಡಿಲಾಯಿತು.

ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎನ್. ವೆಂಕಟೇಶ್ ತರೀಕೆರೆ ಚಿಕ್ಕಮಗಳೂರು

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button