“ಸಾವಿತ್ರಿಬಾಯಿ ಪುಲೆ ಮರೆಯದ ಮಾಣಿಕ್ಯ”…..

ಸಾವಿತ್ರಿಬಾಯಿ ಪುಲೆ ಭಾರತಾಂಬೆಯ
ಹೆಮ್ಮೆಯ ಸುಪುತ್ರಿಯು
ದೇಶದ ಪ್ರಥಮ ಗುರುಮಾತೆಯು ಮಾನವ
ಕುಲದ ಜ್ಞಾನದೊಡತಿಯು
ಶಿಕ್ಷಣವೇ ಜೀವಾಳವೆಂದು ದೇಶ ಸೇವೆ ಗೈದ
ಪುಣ್ಯ ಜೀವಿಯು
ಸಾವಿತ್ರಿಬಾಯಿ ಪುಲೆ ಸ್ತ್ರೀಕುಲದ ಶಿಕ್ಷಣದ
ನೆಲೆಗೆ ಕಾಯಕಲ್ಪವು
ಅಕ್ಷರದವ್ವ ಜ್ಞಾನದಾತೆ ಸತ್ಯ ಶೋಧಕಿ
ದಣಿವರಿಯದ ಮಹಿಳಾಮಣಿ ಶಿಕ್ಷಣ ರೂವಾರಿ
ಭಾರತ ದೇಶದ ಪ್ರಥಮ ಗುರು ಮಾತೆ
ಮಹಿಳಾ ಸಮಾನತೆಯ ಬೆಳಕು
ಸಾಹಿತ್ಯ ಲೋಕಕ್ಕೆ ಕಾವ್ಯ ಪೂಲೆ ಹೂವು
ಮಾಲೆಯು
ಸುಜ್ಞಾನದ ಸಾವಿರ ಜ್ಯೋತಿ ವಿಶ್ವದಿ ಬೆಳಗಿದ
ಕೀರ್ತಿಯು
ಶಿಕ್ಷಣ ಕ್ಷೇತ್ರವು ಎಂದೂ ಮರೆಯದ
ಮಾಣಿಕ್ಯವು
ಶಿಕ್ಷಣರಂಗದ ಸೇವೆಗೆ ಪುಷ್ಪವೃಷ್ಠಿಯ ಕೋಟಿ
ಕೋಟಿ ನಮನಗಳು
ಜಗದಲಿ ಜ್ಯೋತಿಬಾಯಿ ಪುಲೆ ಮಾತೆಯು
ಚಿರ ನೆನಪು ಸದಾ ಬೆಳಗುತ್ತಿರುವ
ನಂದಾದೀಪವು
ಶ್ರೀದೇಶಂಸು
ಶ್ರೀ ಸುರೇಶ ಶಂಕ್ರೆಪ್ಪ ಅಂಗಡಿ
ದೇವರ ಹಿಪ್ಪರಗಿ

