ಮತದಾರರ ಸೇವೆ ಮಾಡುವುದು ನನ್ನ ದರ್ಮ – ರಾಜುಗೌಡ ಪಾಟೀಲ.
ದೇವರ ಹಿಪ್ಪರಗಿ ಡಿ.30

ನನ್ನ ಮತ ಕ್ಷೇತ್ರದಲ್ಲಿ ಬಹಳ ಹಳ್ಳಿಗಳ ಇವೆ ಆದರೆ ಪಂಚ ಗ್ಯಾರಂಟಿ ಗಳಿಂದ ಅಭಿವೃದ್ಧಿ ಕುಂಠಿತವಾಗಿದೆ ನನ್ನ ವಿರೋಧ ಪಕ್ಷದಲ್ಲಿ ಇದ್ದರೂ ಆದಷ್ಟು ಅನುದಾನ ತಂದು ನನ್ನ ಮತ ಕ್ಷೇತ್ರದಲ್ಲಿ ಕೊಡುತ್ತಿದ್ದೆನೆ ಆದರೆ ಕಾಂಗ್ರೆಸ್ ಪಕ್ಷದ ಶಾಸಕರಿಗೆ ಹೆಚ್ಚು ಅನುದಾನ ಸಿಗುತ್ತಿಲ್ಲ ಇದಕ್ಕೆ ಕಾರಣ ಐದು ಗ್ಯಾರಂಟಿಗಳು, ಆದಷ್ಟು ನನ್ನ ಮತ ಕ್ಷೇತ್ರದಲ್ಲಿ ಅನುದಾನ ತಂದು ಮತದಾರರ ಸೇವೆ ಮಾಡುತ್ತೇನೆ. ಯಲಗೋಡ ದಿಂದ ಕುದರಗುಂಡ ರಸ್ತೆ ಮಾಡುವಾ ಪ್ರಯತ್ನ ಮಾಡುತ್ತೇನೆ. ತಾಲ್ಲೂಕಿನ ಯಲಗೋಡ ಎಲ್.ಟಿ ಗ್ರಾಮದಲ್ಲಿ ಸರ್ಕಾರಿ ಶಾಲೆಯಲ್ಲಿ ಹೆಚ್ಚುವರಿ ಒಂದನೆಯ ತರಗತಿಯ ಕೊಠಡಿ ನಿರ್ಮಾಣದ ಭೂಮಿ ಪೂಜಾ ನೆರವೇರಿಸಿ ಮಾತನಾಡಿದ ದೇವರ ಹಿಪ್ಪರಗಿ ಮತ ಕ್ಷೇತ್ರದ ಶಾಸಕರಾದ ರಾಜುಗೌಡ ಪಾಟೀಲ ಕುದರಿ ಸಾಲವಾಡಗಿ ಅವರು.
ಈ ಸಂದರ್ಭದಲ್ಲಿ ನಿಂಗಯ್ಯ ಮಹಾ ಸ್ವಾಮಿಗಳು, ಮಶ್ಯಾಕಸಾಬ ಚೌದ್ರಿ ಶೇಖರಗೌಡ ಪಾಟೀಲ ಮಾಂತು ರಾಠೋಡ ಮಡಿವಾಳಪ್ಪ ಹಿಕನಗುತ್ತಿ ಡಾ ಬಸಲಿಂಗಪ್ಪ ಜ್ಯಾಯಿ ಮಲ್ಲಿಕಾರ್ಜುನ ಇಂಗಳಗಿ ಸಾಯಬಣ್ಣ ಬಾಗೇವಾಡಿ ಉಮೇಶ್ ಇಂಗಳಗಿ ನಿತ್ಯಾನಂದ ಕತ್ತಿ ಲಚಪ್ಪ ಬಸರಿ ಗುರುನಾಥ ರಾಠೋಡ ಮೇಗರಾಜ್ಯ ರಾಠೋಡ ಬಸವರಾಜ ರಾಠೋಡ ಪರಸುರಾಮ ರಾಠೋಡ ಭೀಮುನಾಯಕ ರಾಠೋಡ ಹಾಗೂ ಶಾಲೆಯ ಮುಖ್ಯ ಗಳಾದ ಮಲ್ಲಿಕಾರ್ಜುನ ನಾಟಿಕಾರ ಗುತ್ತಿಗೆದಾರ ಶಿವನಗೌಡ ಪಾಟೀಲ ರಮೇಶ್ ಗುಬ್ಬೇವಾಡ ಅತ್ತಿಕ ಖಾನಪೂರ ಹಾಗೂ ಶಾಲಾ ಮಕ್ಕಳು, ಸಾರ್ವಜನಿಕರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಭೀಮಪ್ಪ ಹಚ್ಯಾಳ ದೇವರ ಹಿಪ್ಪರಗಿ

