ಸರಳ ಉಡುಪು ಉತ್ತಮ ವ್ಯಕ್ತಿತ್ವದ ಲಕ್ಷಣ – ಯತೀಶ್.ಎಂ ಸಿದ್ದಾಪುರ.
ಚಳ್ಳಕೆರೆ ಡಿ.30

ಸರಳ ಉಡುಪು ಉತ್ತಮ ವ್ಯಕ್ತಿತ್ವದ ಲಕ್ಷಣವಾಗಿದೆ ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಸ್ವಯಂಸೇವಕ ಯತೀಶ್ ಎಂ ಸಿದ್ದಾಪುರ ತಿಳಿಸಿದ್ದಾರೆ.

ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದಲ್ಲಿ ಮಕ್ಕಳಿಗಾಗಿ ಆಯೋಜಿಸಿದ್ದ “ವಿವೇಕ ವಿಹಾರ ವಿದ್ಯಾರ್ಥಿ ಶಿಬಿರ” ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಭಜನೆ ನಡೆಸಿಕೊಟ್ಟು “ಸಮರ್ಥ ವ್ಯಕ್ತಿತ್ವ ನಿರ್ಮಾಣದಲ್ಲಿ ನಮ್ಮ ಉಡುಪುಗಳ ಪಾತ್ರ” ಎಂಬ ವಿಷಯವಾಗಿ ಉಪನ್ಯಾಸ ನೀಡಿದರು.

ನಮ್ಮ ಉಡುಪುಗಳು ನಮ್ಮ ವ್ಯಕ್ತಿತ್ವದ ಪ್ರತಿ ಬಿಂಬವಾಗಿವೆ, ಇವು ಶರೀರವನ್ನು ರಕ್ಷಿಸುವುದಲ್ಲದೆ ಘನತೆಯನ್ನು ಹೆಚ್ಚಿಸುತ್ತದೆ.ಉಡುಪುಗಳ ಖರೀದಿಯಲ್ಲಿ ದುಂದು ವೆಚ್ಚ ಮಾಡಿದೆ ಸರಳ ಉಡುಗೆ ತೊಡಿಗೆಗಳನ್ನು ಧರಿಸ ಬೇಕೆಂದು ಸಲಹೆ ನೀಡಿದರು.
ಈ ಶಿಬಿರದ ಪ್ರಯುಕ್ತ ಮಕ್ಕಳಿಂದ ಓಂಕಾರ, ದಿವ್ಯತ್ರಯರ ಪ್ರಣಾಮಮಂತ್ರ, ಶ್ರೀರಾಮಕೃಷ್ಣರ ನಾಮಸ್ಮರಣೆ, ಸ್ವಾಮಿ ವಿವೇಕಾನಂದರ ಶಕ್ತಿಮಂತ್ರ, ಸ್ವದೇಶ ಮಂತ್ರ, ಅಮ್ಮಾ ಶಾರದಾಮಾತೆ ಪಠಣ ನಡೆದರೆ ಕಾರ್ಯಕ್ರಮದ ಕೊನೆಯಲ್ಲಿ ಮಕ್ಕಳಿಗೆ ವಿವಿಧ ಆಟಗಳನ್ನು ಆಡಿಸಲಾಯಿತು.
ಶಿಬಿರದಲ್ಲಿ ಮಾತಾಜೀ ತ್ಯಾಗಮಯೀ ದಿವ್ಯ ಸಾನಿಧ್ಯ ವಹಿಸಿದ್ದರು ತರಗತಿಯಲ್ಲಿ ಚರಣ್ಯ, ಯಶಸ್ವಿ, ಜಶ್ವಿತಾ, ವಿವಿಕ್ತ, ಪ್ರಣವ್, ಸಾಯಿ ಸಮರ್ಥ್, ವಸಿಷ್ಠ, ಸುದೀಪ್ ಸೇರಿದಂತೆ ವಿದ್ಯಾರ್ಥಿಗಳು ಹಾಜರಿದ್ದರು.
ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.

