ಆದಿವಾಸಿ ಮ್ಯಾಸನಾಯಕರ – ಚಿನ್ನಹಗರಿ ಉತ್ಸವ 2026.
ಕೊಟ್ಟೂರು ಡಿ.30

ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ತಿಪ್ಪೇಹಳ್ಳಿ (ಹೊನ್ನಿನ ಹಳ್ಳ) ಹತ್ತಿರ ಚಿನ್ನಹಗರಿ ನದಿಯಲ್ಲಿ ಆದಿವಾಸಿ ಮ್ಯಾಸನಾಯಕರ ಬುಡಕಟ್ಟು ಜನರ ಸಾಂಸ್ಕೃತಿಕ ಭಾಗವಾಗಿ ಚಿನ್ನಹಗರಿ ಉತ್ಸವವನ್ನು ಜನೇವರಿ 15 ರಂದು ಹಮ್ಮಿಕೊಳ್ಳಲಾಗಿದೆ ಎಂದು ಸೋಮವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.
ಆದಿವಾಸಿ ಮ್ಯಾಸನಾಯಕ ಬಂಧುಗಳು ಬುಡಕಟ್ಟು ಜನಾಂಗದ ಸಾಂಸ್ಕೃತಿಕ ಸಂಪ್ರದಾಯ ಹೊಳೆ ಪೂಜೆ ಕಾರ್ಯಕ್ರಮವನ್ನ ಚಿನ್ನಹಗರಿ ಉತ್ಸವವಾಗಿ ಆಚರಣೆ ಮಾಡಲು ಮ್ಯಾಸಬೇಡ (ಮ್ಯಾಸನಾಯಕ) ಬುಡಕಟ್ಟು ಸಂಸ್ಕೃತಿ (ರಿ) ಮತ್ತು ಚಿನ್ನಹಗರಿ ಪ್ರಕಾಶನ ಹಾಗೂ ಶ್ರೀ ಗಾದ್ರಿಪಾಲ ನಾಯಕರ ದೇವಸ್ಥಾನ ಅಭಿವೃದ್ಧಿ ಸಮಿತಿ (ರಿ) ಸಹಯೋಗದಲ್ಲಿ ಚಿನ್ನಹಗರಿ ಉತ್ಸವ ಅದ್ದೂರಿಯಾಗಿ ನಡೆಸಲು ಕರ ಪತ್ರ ಹಾಗೂ ಬಿತ್ತಿ ಪತ್ರ ಬಿಡುಗಡೆ ಮಾಡಿ, ಪದಾಧಿಕಾರಿಗಳು ಸಮುದಾಯ ಮುಖಂಡರಿಗೆ ಉತ್ಸವಕ್ಕೆ ಆಹ್ವಾನ ನೀಡಿದರು.

ಮ್ಯಾಸನಾಯಕ ಬುಡಕಟ್ಟು ನಾಯ್ಕಡ ಆದಿವಾಸಿ ಜನಾಂಗದಿಂದ ಬೇರ್ಪಟ್ಟು ಮೊಳಕಾಲ್ಮೂರು ಹಾಗೂ ಕೂಡ್ಲಿಗಿ ತಾಲೂಕಿನ ಭಾಗಗಳಲ್ಲಿ ವಾಸಿಸುತ್ತಿರುವರು. ನಮ್ಮ ಪರಿಶಿಷ್ಟ ಪಂಗಡದ ಮೀಸಲಾತಿ ಮೇಲೆ ಅನ್ಯರು ಜಾತಿಯವರು ದಾಳಿ ಮಾಡುತ್ತಿರುವ ಇದರ ವಿರುದ್ಧ ಮ್ಯಾಸನಾಯಕ ಬುಡಕಟ್ಟು ಜನಾಂಗದ ಜನರಿಗೆ ಮೀಸಲಾತಿ ಜಾಗೃತಿ ಹಾಗೂ ನಮ್ಮ ಹಿರಿಯರ ಆತ್ಮಗಳು ಎತ್ತುಗಳಲ್ಲಿ ವಾಸಿಸುತ್ತಿವೆ ಎಂಬ ನಂಬಿಕೆಯಿಂದ ನಮ್ಮ ಆದಿವಾಸಿ ಮ್ಯಾಸನಾಯಕ ಬುಡಕಟ್ಟು ಜನಾಂಗ ಉದಿ ಪದಿ ಸಂಪ್ರದಾಯ ಮಾಡಿ ಕೊಂಡು ಬಂದಿದೆ. ಅದರಂತೆ ಎತ್ತುಗಳನ್ನೆ ದೇವರೆಂದು ಪೂಜಿಸುತ್ತೇವೆ. ಆದಿವಾಸಿ ಸಾಂಸ್ಕೃತಿಕ ಸಂಸ್ಕೃತಿ ಮತ್ತು ಸಮುದಾಯ ಸಂಘಟನೆ ದೃಷ್ಟಿಯಿಂದ ಚಿನ್ನಹಗರಿ ಉತ್ಸವ ಕೈಗೊಳ್ಳಲಾಗಿದೆ ಎಂದು ದೊಡ್ಡಮನಿ ಪ್ರಸಾದ ಸಂಘಟನೆ ಕಾರ್ಯದರ್ಶಿ ಹೇಳಿದರು. ಈ ಸಂದರ್ಭದಲ್ಲಿ ವಾಲ್ಮೀಕಿ ಮುಖಂಡರಾದ ಮಲ್ಲಿಕಾರ್ಜುನ್ ಮಂದಾರ ಮೂಗಣ್ಣ ಆರ್ ಮೂಗಣ್ಣ ಚಿರುಬಿ ನಾಗರಾಜ್ ಮತ್ತಿತರರು ನಾಯಕ ಮುಖಂಡರು ಉಪಸ್ಥಿತರಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಪ್ರದೀಪ್ ಕುಮಾರ್ ಸಿ ಕೊಟ್ಟೂರು

