“ಜಗದ ಯುಗದ ರಸ ಋಷಿ ಕುವೆಂಪು”…..

ಭರತ ಭೂವಿಯ ಕರುನಾಡ ಮಡಿಲಿನ
ಕುಪ್ಪಳ್ಳಿಯ ವೆಂಕಟಪ್ಪ ಸೀತಮ್ಮ
ಪುಣ್ಯವಂತರ ವರ ಸುಪುತ್ರ
ಕುವೆಂಪು ಆತ್ಮಶ್ರೀ ಚಿರಂಚೀವಿ ಚರಿತೆಯು
ಯುಗದ ಕವಿಯ ಸೊಬಗು
ಸಾಹಿತ್ಯ ಲೋಕದ ಜ್ಞಾನ ರವಿ ದೈತ್ಯ
ವರಕವಿಯು
ಶ್ರೀರಾಮಾಯಣ ದರ್ಶನಂ
ಐತಿಹಾಸಿಕತಥೆಯು
ಜನಮನ ಸೂರೆಗೊಂಡ ಸಿರಿ ಮಾನಸ
ಗಂಗೋತ್ರಿ ನಿರ್ಮಾತೃ
ಬೆರಳಿಗೆ ಕೊರಳ್ ವಿಶ್ವ ಮಾನವ ಸಂದೇಶ
ಸಾರಿದ ಜಗದ ಯುಗದ ಸಿರಿ ಕವಿಯು
ಕಾನೂರು ಹೆಗ್ಗೊಡತಿ ಮಲೆಗಳಲಿ
ಮದುಮಗಳು ರಸಮಯ ಮಲ್ಲಿಗೆ ಹೂವುಗಳ
ಕಂಪು
ಪರಿಸರ ಸ್ನೇಹಿ ಪಕ್ಷಿಕಾಶಿ ವರ್ಣನೆಯ ಸೃಷ್ಟಿಯ
ಸೌಂದರ್ಯದ ಕಾವ್ಯವು
ಮನುಜ ಮತ ವಿಶ್ವ ಪಥದೆಡೆಗೆ ಸಾಗಿಸಿದ
ಮಹಾನ್ ದಾರ್ಶನಿಕ ರಾಷ್ಟ್ರ ಕವಿಯು
ಕನ್ನಡ ನುಡಿ ಸಿರಿ ಕಂಪಿನ ಪಾಂಚಜನ್ಯ
ಮೊಳಗಿಸಿದ ಮಹಾಕವಿಯು
ಭಾರತ ಪದ್ಮಭೂಷಣ ಪ್ರಥಮ ಜ್ಞಾನಪೀಠದ
ರಾಷ್ಟ್ರಕವಿರಾಜನು
ಭಾರತಾಂಬೆಯ ಪದ್ಮಭೂಷಣ ಕರ್ನಾಟಕ
ರತ್ನ ಸಾಹಿತ್ಯ ಲೋಕದ ಕಿರೀಟಪ್ರಾಯರು
ಭಾರತ ಮಾತೆಯ ಕರುನಾಡ ಕನ್ನಡಮ್ಮನ
ನೆನಪಿನ ದೊಣಿಯಲಿ ಸದಾ ಮಿನಗುವ
ಧೃವತಾರೆ
ಜಗದ ಯುಗದ ರಸ ಋಷಿ ರಾಷ್ಟ ಕವಿ
ಕುವೆಂಪು
ಜನಸಿದ ಅಮೃತ ಘಳಿಗೆ ಶುಭ ಹರುಷ ತರಲಿ
ಸರ್ವಜನ ಮನಗಳಿಲಿ

ಶ್ರೀದೇಶಂಸು
ಶ್ರೀಸುರೇಶ ಶಂಕ್ರೆಪ್ಪ ಅಂಗಡಿ
ದೇವರ ಹಿಪ್ಪರಗಿ

