ಭಗವಂತ ಯಾವ ರೂಪದಿ ಬರುತ್ತಾನೆಯೋ ಊಹಿಸಲು ಸಾಧ್ಯವಿಲ್ಲ – ಶ್ರೀಶಾರದಾಶ್ರಮದ ಸದ್ಭಕ್ತ ವೆಂಕಟೇಶ್ ಅಭಿಮತ.
ಚಳ್ಳಕೆರೆ ಜ.02

ಭಗವಂತ ಯಾವ ರೂಪದಲ್ಲಿ ನೊಂದವರ ಪಾಲಿಗೆ ಬರುತ್ತಾನೆಯೋ ಊಹಿಸಲು ಸಾಧ್ಯವಿಲ್ಲ ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಸದ್ಭಕ್ತರಾದ ವೆಂಕಟೇಶ್ ತಿಳಿಸಿದರು.
ತಾಲೂಕಿನ ಚಿಕ್ಕಮ್ಮನಹಳ್ಳಿ ಸಮೀಪದ ದೇವರಹಟ್ಟಿ ಗ್ರಾಮದ ನಿವಾಸಿಗಳು ಮತ್ತು ಸದ್ಭಕ್ತರಾದ ಶ್ರೀಮತಿ ಲಕ್ಷ್ಮೀ ಚೆನ್ನಕೇಶವ ಅವರ ಮನೆಯ ಆವರಣದಲ್ಲಿ ಶ್ರೀಶಾರದಾಶ್ರಮದ ಸಹಯೋಗದಲ್ಲಿ ಆಯೋಜಿಸಿದ್ದ ವಿಶೇಷ ಸತ್ಸಂಗ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅವರು ತಮ್ಮ ಜೀವನದಲ್ಲಿ ದೇವರ ಕೃಪಾನುಭವಗಳನ್ನು ಹಂಚಿಕೊಂಡರು.
ನಿರಂತರ ಶ್ರೀರಾಮರಕ್ಷಾ ಸ್ತೋತ್ರ ಪಠಣ ಮತ್ತು ಲಿಖಿತ ಜಪದ ಮೂಲಕ ಜೀವನದ ಕಷ್ಟಗಳಿಂದ ಸುಲಭವಾಗಿ ಪಾರಾದ ನಾನು ಚಳ್ಳಕೆರೆ ಶ್ರೀಶಾರದಾಶ್ರಮದ ಸಂಪರ್ಕದ ಮೂಲಕ ಬದುಕನ್ನು ಸಾರ್ಥಕ ಪಡಿಸಿ ಕೊಳ್ಳುತ್ತೀದ್ದೇನೆ ಎಂದು ಸ್ವಾನುಭವಗಳನ್ನು ವಿನಿಮಯ ಮಾಡಿಕೊಂಡರು.
ಆಧ್ಯಾತ್ಮಿಕ ಚಿಂತಕ ಚೇತನ್ ಕುಮಾರ್ ಮಾತನಾಡಿ ಪ್ರತಿಯೊಬ್ಬ ಸಹಮಾನವರನ್ನು ದೇವರಂತೆ ಪ್ರೀತಿಸಬೇಕು, ಅವರಲ್ಲಿರುವ ಮಹನೀಯ ಗುಣವನ್ನು ಗುರುತಿಸಿ ಅದನ್ನು ಪ್ರೋತ್ಸಾಹಿಸಬೇಕು,ಸ್ವಾಮಿ ವಿವೇಕಾನಂದರ ಜೀವ ಶಿವಸೇವೆಯ ಆದರ್ಶವನ್ನು ಇಂದಿನ ಯುವ ಜನಾಂಗ ಮತ್ತು ನಾಗರಿಕರು ಅನುಷ್ಠಾನ ಮಾಡುವ ಅಗತ್ಯತೆಯನ್ನು ಪ್ರತಿಪಾದಿಸಿದರು.
ಸತ್ಸಂಗದ ಆರಂಭದಲ್ಲಿ ಪ್ರಾರ್ಥನೆ ಮತ್ತು ಭಜನೆಯನ್ನು ಯತೀಶ್ ಎಂ ಸಿದ್ದಾಪುರ ನಡೆಸಿಕೊಟ್ಟರೆ ಕುಮಾರಿ ಗಾಯನ ಅವರು ಸ್ವಾಮಿ ವಿವೇಕಾನಂದರ ಚೈತನ್ಯದಾಯಕ ನುಡಿಮುತ್ತುಗಳನ್ನು ಹೇಳಿದರು.
ಕಾರ್ಯಕ್ರಮದ ಕೊನೆಯಲ್ಲಿ ಶ್ರೀಮಾತೆಯವರಿಗೆ ಮಂಗಳಾರತಿ ಮತ್ತು ಅನ್ನಪ್ರಸಾದ ವಿನಿಯೋಗ ನಡೆಯಿತು.
ಸತ್ಸಂಗ ಸಭೆಯಲ್ಲಿ ಲಕ್ಷ್ಮೀ ಚೆನ್ನಕೇಶವ, ಡಾ, ಭೂಮಿಕಾ, ಋತಿಕ್, ಸಂತೋಷ್, ಮಾನ್ಯ, ತಿಪ್ಪಮ್ಮ , ಪಾಪಣ್ಣ, ಮಲ್ಲೇಶ್, ಚಿತ್ತಮ್ಮ, ಶಾರದಾ, ಇಂದು, ವಿಜಯಮ್ಮ , ಬೋರಮ್ಮ ಸೇರಿದಂತೆ ಸಾಕಷ್ಟು ಸಂಖ್ಯೆಯ ಮಕ್ಕಳು ಮತ್ತು ಸದ್ಭಕ್ತರು ಭಾಗವಹಿಸಿದ್ದರು.
ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.

