🚨 BREAKING NEWS, ಸಚಿವ ಪ್ರಿಯಾಂಕ್ ಖರ್ಗೆ ಅವರ ಇಲಾಖೆಯಲ್ಲಿ ಬಿಲ್ಲಾಡಿ PDO ವಿನೋದ ಕಾಮತ್ ಮತ್ತು ಜನ ಪ್ರತಿನಿಧಿಗಳ ಹಗರಣ ಬಯಲು..! 🚨ಉಡುಪಿ ಜಿಲ್ಲೆಯ ಬಿಲ್ಲಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ದಲಿತ ಕಾಲೋನಿಯಲ್ಲಿ ಮೃತ್ಯು ಕೂಪವಾದ ಅನಧಿಕೃತ ಕೈಗಾರಿಕೆ – ಸಾರ್ವಜನಿಕರ ಆಕ್ರೋಶ.
ಬೆಂಗಳೂರು/ಉಡುಪಿ ಜ.02

ರಾಜ್ಯದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರ ಹೆಸರಿಗೆ ಮಸಿ ಬಳಿಯುವಂತೆ ಉಡುಪಿ ಜಿಲ್ಲೆಯ ಬ್ರಹ್ಮವರ ತಾಲೂಕಿನ ಬಿಲ್ಲಾಡಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ (PDO) ವಿನೋದ ಕಾಮತ್ ಹಾಗೂ ಸ್ಥಳೀಯ ಜನ ಪ್ರತಿನಿಧಿಗಳು ಅನಧಿಕೃತ ಕೈಗಾರಿಕೆಗೆ ಸಾತ್ ನೀಡುತ್ತಿರುವುದು ಬೆಳಕಿಗೆ ಬಂದಿದೆ. ಜಾನುವಾರು ಕಟ್ಟೆಯ ದಲಿತ ಕಾಲೋನಿಯ ಜನರ ಬದುಕನ್ನು ವಿಷವಾಗಿಸುತ್ತಿರುವ ಈ ಘಟನೆಯ ಬಗ್ಗೆ ರಾಜ್ಯಾದ್ಯಂತ ತೀವ್ರ ಚರ್ಚೆ ಶುರುವಾಗಿದೆ.
🔴 ವರದಿಯ ಮುಖ್ಯಾಂಶಗಳು:-

ಆರೋಗ್ಯ ಹನನ, ರವಿ ನಾಯ್ಕ್ ಎಂಬುವವರ ಜಾಗದಲ್ಲಿ ನಡೆಯುತ್ತಿರುವ ಈ ‘ಓಲಾ ಬ್ಲಾಕ್’ ಮತ್ತು ಸಿಮೆಂಟ್ ಘಟಕದಿಂದಾಗಿ ಗಾಳಿಯಲ್ಲಿ ಸಿಮೆಂಟ್ ಧೂಳು ಹರಡುತ್ತಿದೆ. ಆಹಾರಕ್ಕೆ ಧೂಳು ಸೇರುತ್ತಿದ್ದು, ಜನರಿಗೆ ಮೂಗಿನಲ್ಲಿ ದುರ್ಮಾಂಸ (Nasal Polyps) ಬೆಳೆದು ಶಸ್ತ್ರ ಚಿಕಿತ್ಸೆ ಯಾಗುವಂತಹ ಗಂಭೀರ ಪರಿಸ್ಥಿತಿ ನಿರ್ಮಾಣವಾಗಿದೆ.
ಪ್ರಾಣಿ ಬಲಿ ಮತ್ತು ಪರಿಸರ ನಾಶ:-

ಘಟಕದ ವಿಷ ಪೂರಿತ ತ್ಯಾಜ್ಯ ನೀರು ಕುಡಿದು ಈ ಹಿಂದೆ ಹಸುವೊಂದು ಸಾವನ್ನಪ್ಪಿದ್ದು, ಸ್ಥಳೀಯ ತೋಟಗಳು ನಾಶವಾಗುತ್ತಿವೆ. ಶಾಲಾ ವಿದ್ಯಾರ್ಥಿಗಳ ಆರೋಗ್ಯಕ್ಕೂ ಇದು ಕುತ್ತು ತಂದಿದೆ.
ಅಧಿಕಾರಿ ವಿನೋದ ಕಾಮತ್ ಅವರ ಹೂನ್ನಾರ:-

ಬಿಲ್ಲಾಡಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ವಿನೋದ ಕಾಮತ್ ಅವರು ಅನಧಿಕೃತ ಘಟಕವನ್ನು ಬಂದ್ ಮಾಡುವ ಪೂರ್ಣ ಅಧಿಕಾರವಿದ್ದರೂ, ದೂರುದಾರರನ್ನೇ ಕಚೇರಿಗೆ ಕರೆಯಿಸಿ ‘ರಾಜಿ’ ಮಾಡಿಕೊಳ್ಳಲು ಒತ್ತಡ ಹೇರುತ್ತಿದ್ದಾರೆ. ಅಲ್ಲದೆ, ವಿಷಯವನ್ನು ಪರಿಸರ ಇಲಾಖೆಗೆ ವರ್ಗಾಯಿಸಿ ಕಾಲಹರಣ ಮಾಡುವ ತಂತ್ರ ರೂಪಿಸಿದ್ದಾರೆ ಎಂದು ಸಾರ್ವಜನಿಕರು ದೂರಿದ್ದಾರೆ.
ಜನ ಪ್ರತಿನಿಧಿಗಳ ಕುಮ್ಮಕ್ಕು:-

ಈ ಘಟಕದ ಹಿಂದೆ ಪಂಚಾಯತ್‌ನ ಮಾಜಿ ಅಧ್ಯಕ್ಷರು ಸೇರಿದಂತೆ ಪ್ರಭಾವಿ ಜನ ಪ್ರತಿನಿಧಿಗಳ ಕೈವಾಡವಿರುವುದು ಸ್ಪಷ್ಟವಾಗಿದ್ದು, ದಲಿತ ಕಾಲೋನಿಯ ಜನರ ಬಡತನ ಮತ್ತು ಮುಗ್ಧತೆಯನ್ನು ದುರುಪಯೋಗ ಪಡಿಸಿ ಕೊಳ್ಳಲಾಗುತ್ತಿದೆ.
⚖️ ಕಾನೂನು ಉಲ್ಲಂಘನೆ ಮತ್ತು ಕಠಿಣ ಕ್ರಮದ ಎಚ್ಚರಿಕೆ:-

ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಕಾಯ್ದೆಯಡಿ ಇಂತಹ ಹಗರಣಗಳಲ್ಲಿ ಭಾಗಿಯಾದ ಅಧಿಕಾರಿಗಳ ಮೇಲೆ ಈ ಕೆಳಗಿನ ಕ್ರಮಗಳನ್ನು ಕೈಗೊಳ್ಳಬಹುದು.
ಅಧಿಕಾರಿಯ ಅಮಾನತ್ತು:-

ಪರವಾನಿಗೆ ಇಲ್ಲದ ಘಟಕಕ್ಕೆ ರಕ್ಷಣೆ ನೀಡುತ್ತಿರುವ PDO ವಿನೋದ ಕಾಮತ್ ಅವರನ್ನು ಕೂಡಲೇ ಸೇವೆಯಿಂದ ಅಮಾನತ್ತುಗೊಳಿಸಬೇಕು ಎಂದು ಗ್ರಾಮಸ್ಥರು ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಮನವಿ ಮಾಡಿದ್ದಾರೆ.
ಪರವಾನಿಗೆ ರದ್ಧತಿ:-

ಜನ ವಸತಿ ಪ್ರದೇಶದಲ್ಲಿ ಅಕ್ರಮವಾಗಿ ನಡೆಯುತ್ತಿರುವ ಕೈಗಾರಿಕೆಯನ್ನು ಯಾವುದೇ ಮುನ್ಸೂಚನೆ ಇಲ್ಲದೆ ಮುಚ್ಚುವ ಅಧಿಕಾರ ಜಿಲ್ಲಾಡಳಿತಕ್ಕಿದೆ.
ಸದಸ್ಯತ್ವ ವಜಾ:-

ಇದರಲ್ಲಿ ಭಾಗಿಯಾಗಿರುವ ಜನಪ್ರತಿನಿಧಿಗಳು ಸಾರ್ವಜನಿಕ ಹಿತಾಸಕ್ತಿಗೆ ವಿರುದ್ಧವಾಗಿ ಕೆಲಸ ಮಾಡುತ್ತಿರುವುದರಿಂದ ಅವರ ಸದಸ್ಯತ್ವವನ್ನು ವಜಾಗೊಳಿಸಲು ಕಾನೂನಿನಲ್ಲಿ ಅವಕಾಶವಿದೆ.
🔥 ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಸಾರ್ವಜನಿಕರ ನೇರ ಪ್ರಶ್ನೆ: –
“ಸಚಿವರೇ, ಉಡುಪಿ ಜಿಲ್ಲೆಯ ಬಿಲ್ಲಾಡಿ ಪಂಚಾಯತ್‌ನಲ್ಲಿ ಅಧಿಕಾರಿಗಳು ಇಷ್ಟೊಂದು ಲಜ್ಜೆಗಟ್ಟಂತೆ ವರ್ತಿಸುತ್ತಿದ್ದರೂ ನೀವು ಸುಮ್ಮನಿರುವುದು ಸರಿಯೇ? ಈ ಭ್ರಷ್ಟ ವ್ಯವಸ್ಥೆಗೆ ಯಾವಾಗ ಕಡಿವಾಣ ಹಾಕುತ್ತೀರಿ? ಕೂಡಲೇ ಈ ಅಕ್ರಮ ಘಟಕ ತೆರವುಗೊಳಿಸದಿದ್ದರೆ ನಾವು ಗ್ರಾಮ ಪಂಚಾಯತ್ ಎದುರು ಬೃಹತ್ ಪ್ರತಿಭಟನೆ ನಡೆಸುತ್ತೇವೆ.” ಸ್ಥಳೀಯ ದಲಿತ ಸಂಘರ್ಷ ಸಮಿತಿ ಮತ್ತು ಬಿಲ್ಲಾಡಿ ಸಾರ್ವಜನಿಕರು.
ತಾಲೂಕ ವರದಿಗಾರರು:ಗಣೇಶ್ ಮಂದರ್ತಿ
ಬ್ರಹ್ಮಾವರ

