ಭಕ್ತರ ಕಲ್ಪತರು ಶ್ರೀರಾಮಕೃಷ್ಣರು – ಮಾತಾಜೀ ತ್ಯಾಗಮಯೀ ಅಭಿಪ್ರಾಯ.
ಚಳ್ಳಕೆರೆ ಜ.03

ಜನವರಿ 1ರಂದು ಶ್ರೀರಾಮಕೃಷ್ಣರು ಭಕ್ತರ ಆಸೆ ಆಕಾಂಕ್ಷೆಗಳನ್ನು ಮತ್ತು ಪ್ರಾರ್ಥನೆಯನ್ನು ಈಡೇರಿಸುವ ಮೂಲಕ ಭಕ್ತರ ಕಲ್ಪತರು ಆಗಿದ್ದರು ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಅಧ್ಯಕ್ಷರಾದ ಪೂಜ್ಯ ಮಾತಾಜೀ ತ್ಯಾಗಮಯೀ ಅಭಿಪ್ರಾಯ ಪಟ್ಟರು.

ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದ ದೇವಸ್ಥಾನದಲ್ಲಿ “ಕಲ್ಪತರು ದಿನ”ದ ನಿಮಿತ್ತ ಆಯೋಜಿಸಿದ್ದ ವಿಶೇಷ ಸತ್ಸಂಗ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಅವರು “ಕಲ್ಪತರು ದಿನದ ವಿಶೇಷತೆಗಳ” ಬಗ್ಗೆ ಪ್ರವಚನ ನೀಡಿದರು.

ಅಕ್ಷಯಕುಮಾರ ಸೇನ, ಉಪೇಂದ್ರ, ರಾಮಲಾಲ, ವೈಕುಂಠನಾಥ ಸನ್ಯಾಲ ಸೇರಿದಂತೆ ಅನೇಕ ಭಕ್ತರ ಪ್ರಾರ್ಥನೆಯನ್ನು ಮನ್ನಿಸಿ ಕಲ್ಕತ್ತಾದ ಕಾಶೀಪುರ ತೋಟದ ಮನೆಯ ಆವರಣದಲ್ಲಿ ಆತ್ಮಜಾಗೃತಿ ಉಂಟಾಗಲಿ ಎಂದು ಹರಸಿ ಅಹೇತುಕ ಕೃಪಾಸಿಂಧು ಆಗಿ ಶ್ರೀರಾಮಕೃಷ್ಣರು ಆಶೀರ್ವಾದಿಸಿದ ಪುಣ್ಯ ದಿನ ಎಂದು ಬಣ್ಣಿಸಿದರು.
ಸತ್ಸಂಗದ ಆರಂಭದಲ್ಲಿ ಶ್ರೀಶಾರದಾಶ್ರಮದ ಸದ್ಭಕ್ತರಿಂದ ಸಾಮೂಹಿಕ ವಿಶೇಷ ಭಜನೆ, ದಿವ್ಯತ್ರಯರಿಗೆ ಮಂಗಳಾರತಿ ಮತ್ತು ಕುಮಾರಿ ಕೀರ್ತನ ಆರ್ ಅವರಿಂದ ಶ್ರೀಮದ್ ಭಗವದ್ಗೀತೆಯ ಕರ್ಮಯೋಗದ ಶ್ಲೋಕಗಳ ಪಠಣ ನಡೆಯಿತು.
ಈ ಸಂದರ್ಭದಲ್ಲಿ ಎಚ್.ಲಕ್ಷ್ಮೀದೇವಮ್ಮ, ಉಷಾ ಶ್ರೀನಿವಾಸ್, ಶೋಭಾ, ನೇತಾಜಿ ಪ್ರಸನ್ನ, ಎಂ.ಗೀತಾ ನಾಗರಾಜ್, ಸೌಮ್ಯ, ಪಿ.ಎಸ್ ಮಾಣಿಕ್ಯ ಸತ್ಯನಾರಾಯಣ, ಚೇತನ್, ವೆಂಕಟೇಶ್, ಚೆನ್ನಕೇಶವ, ಅಪ್ಸರಾ ನೇತಾಜಿ, ನಾಗರತ್ನಮ್ಮ, ದ್ರಾಕ್ಷಾಯಣಿ, ಕಾವೇರಿ ಸುರೇಶ್, ಗೀತಾ ವೆಂಕಟೇಶರೆಡ್ಡಿ, ಜಿ.ಯಶೋಧಾ ಪ್ರಕಾಶ್, ಸುರೇಶ್, ಯತೀಶ್ ಎಂ ಸಿದ್ದಾಪುರ, ವಿಜಯಲಕ್ಷ್ಮೀ, ನಾಗಮಣಿ, ಹೂವಿನ ಲಕ್ಷ್ಮೀದೇವಿ, ಪಂಕಜಾ, ಸುಧಾಮಣಿ, ಸುಮನಾ, ಗಾಯನ, ರಶ್ಮಿ ವಸಂತ, ಯಶಸ್ವಿ, ಪ್ರಕಾಶ್ ಸೇರಿದಂತೆ ಸದ್ಭಕ್ತರು ಉಪಸ್ಥಿತರಿದ್ದರು.
ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.

