ಕಾನ ಹೊಸಹಳ್ಳಿ ಗ್ರಾಮದಲ್ಲಿ ಜನೇವರಿ 1 – ಭೀಮಾ ಕೋರೆಗಾಂವ್ ವಿಜಯೋತ್ಸವ.
ಕೆ ಹೊಸಹಳ್ಳಿ ಜ.04

ಕೂಡ್ಲಿಗಿ ತಾಲೂಕಿನ ಕೆ ಹೊಸಹಳ್ಳಿ ಗ್ರಾಮದಲ್ಲಿ ಜೈ ಭೀಮ್ ಗೆಳೆಯರ ಬಳಗದ ವತಿಯಿಂದ ಶನಿವಾರ ಭೀಮಾ ಕೋರೆಗಾಂವ್ ವಿಜಯೋತ್ಸವ ಆಚರಿಸಲಾಯಿತು. ಡಿ.ಎಸ್.ಎಸ್ ಸಂಘದ ಕಾರ್ಯಕರ್ತರು ಅಂಬೇಡ್ಕರ್ ಭಾವ ಚಿತ್ರಕ್ಕೆ ಪುಪ್ಪಾರ್ಚನೆ ಮಾಡಿ ಗೌರವ ಸಮರ್ಪಣೆ ಮಾಡಿದರು ವಿಜಯನಗರ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಎಸ್ ದುರುಗೇಶ್ ಮಾತನಾಡಿ ಭೀಮಾ ಕೋರೆಗಾಂವ್ ಎಂದರೆ ಸಾರ್ವಜನಿಕರಿಗೆ ಮಾಹಿತಿ ಕಡಿಮೆಯಿದ್ದು, ಮಹರ್ ರೆಜಿಮೆಂಟ್ ಎಂದರೆ ಪರಿಶಿಷ್ಟ ಜನಾಂಗದವರು ಹುಟ್ಟು ಹಾಕಿ ಕೊಂಡಿದ್ದ ಸೈನ್ಯ. ಇಂತಹ ಮಹರ್ ರೆಜಿಮೆಂಟ್ 500 ಸೈನ್ಯ 1818 ರ ಜ. 1 ರಂದು ನಡೆದ ಭೀಮಾ ನದಿ ತೀರದಲ್ಲಿ ನಡೆದ ಕೋರೆಗಾಂವ್ ಯುದ್ಧದಲ್ಲಿ 28,000 ಪೇಶ್ವೆ ಸೈನ್ಯದ ವಿರುದ್ಧ ಜಯಗಳಿಸಿದ ದಲಿತ ಸ್ವಾಭಿಮಾನಿ ಸೈನಿಕರ ರಕ್ತ ಚರಿತ್ರೆ ದೇಶದ ಎಲ್ಲರಿಗೂ ತಿಳಿಯ ಬೇಕಿದೆ.

ಮಹಾರಾಷ್ಟ್ರದಲ್ಲಿ 500 ಸೈನಿಕರ ನೆನಪಿಗಾಗಿ ಧ್ವಜ ಸ್ತಂಭ ನಿರ್ಮಿಸಲಾಗಿದೆ. ಮಹಾರಾಷ್ಟ್ರದ ಪುಣೆಯಲ್ಲಿ ಪ್ರತಿ ವರ್ಷ ಜ,1 ರಂದು ಅಸ್ಪೃಶ್ಯರ ವಿಜಯ ದಿನ ಭೀಮಾ ಕೋರೆಗಾಂವ್ ವಿಜಯೋತ್ಸವ ಎಂದು ಆಚರಣೆ ಮಾಡಲಾಗುತ್ತಿದೆ ಹಾಗಾಗಿ ಈ ದಿನವನ್ನು ಭೀಮಾ ಕೋರೆಗಾಂವ್ ವಿಜಯೋತ್ಸವ ಆಚರಣೆ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಎನ್ ,ತಿಪ್ಪೇಶ್ ನೀರು ಗಂಟೆ , ಅಜಯ್ , ಮಲ್ಲೇಶ್ ಎಂ.ಬಸವರಾಜ್ , ರಜಿನಿ ಹೊನ್ನೂರು ಸ್ವಾಮಿ ,ನಡವಲ ಮನೆ ತಿಪ್ಪೇಶ್, ಎಳೆನೀರು ಗಂಗಾಧರ ಬಿಟಿ ಗುದ್ದಿ ದುರುಗೇಶ್, ಬಡಲಡಕು ದುರುಗೇಶ್, ಎನ್ ಫಕೀರಪ್ಪ ಕಾನಮಡಗು ನಾಗರಾಜ್ (ಪುಟ್ಟ) ಚೌಡಪ್ಪ , ವಿರುಪಾಕ್ಷಿ, ಪರಶುರಾಮ್, ಸಿದ್ದಪ್ಪ, ಶ್ರೀಧರ, ಕೆ.ಬಿ ಓಬಳೇಶ್ ಕೆಂಚಮ್ಮನಹಳ್ಳಿ, ನೀರು ಗಂಟೆ ಸುರೇಶ್ ಸೇರಿದಂತೆ, ತಾಲೂಕಿನ 20 ಕ್ಕೂ ಹೆಚ್ಚು ಹಳ್ಳಿಗಳ ದಲಿತ ಪರ ಸಂಘಟನೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಹೋಬಳಿ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಕೆ.ಎಸ್ ವೀರೇಶ್ ಕೆ ಹೊಸಹಳ್ಳಿ

