ಕೇದಾರನಾಥ ಕುಂಬಾರ ರವರು ಐವತೈದು ಕೆ.ಜಿ ಭಾರದ ಚೀಲ ಹೊತ್ತು – ಅಯೋಧ್ಯೆಗೆ ಪಾದಯಾತ್ರೆಗೆ ಗ್ರಾಮಸ್ಥರಿಂದ ಶುಭ ಹಾರೈಕೆಗಳು.

ಬಳಗಾನೂರ ಜ.04

ವಿಜಯಪುರ ಜಿಲ್ಲೆಯ ಆಲಮೇಲ ತಾಲ್ಲೂಕಿನ ಬಳಗಾನೂರ ಗ್ರಾಮದ ೨೭ ವರ್ಷದ ಯುವಕನಾದ ಕೇದಾರನಾಥ ಕುಂಬಾರ ಅವರು ೫೫ ಕೆ.ಜಿ ತೂಕದ ಗೋಧಿ ಚೀಲದ ಮೂಟೆಯನ್ನು ಹೊತ್ತು ಅಯೋಧ್ಯೆಗೆ ಪಾದಯಾತ್ರೆ ಮೂಲಕ ತೆರಳಿದರು. ಹೋಗುವ ಮೊದಲು ಗ್ರಾಮದ ಹನುಮಾನ ದೇವಸ್ಥಾನಕ್ಕೆ ವಿಶೇಷ ಪೂಜೆ ಸಲ್ಲಿಸಿ, ಗ್ರಾಮಸ್ಥರು ಇವರ ಪಾದಯಾತ್ರೆಗೆ ಶುಭ ಕೋರಿದ್ದರು. ಅಂದಾಜು ೧೪೫೦ ಕಿ.ಮೀ ದೂರದ ಅಯೋಧ್ಯೆಗೆ ಅಂದಾಜು ೪೫ ದಿನಗಳಲ್ಲಿ ತಲಪುವ ನಿರೀಕ್ಷೆ ಇದೆ. ಇವರೊಂದಿಗೆ ವಿವೇಕ ಕುಂಬಾರ ರವರು ಇವರ ಜೊತೆ ಪಾದಯಾತ್ರೆ ಮಾಡಲ್ಲಿದ್ದಾರೆ ಹಾಗೂ ಅರವಿಂದ ಪುರದಾಳ ಇವರು ಅಗತ್ಯ ವಸ್ತುಗಳೊಂದಿಗೆ ದ್ವಿಚಕ್ರ ವಾಹನದಲ್ಲಿ ತೆರಳುತ್ತಾರೆ, ಬಡ ಕೂಲಿ ಕಾರ್ಮಿಕನಾದ ಕೇದಾರನಾಥ ಕುಂಬಾರ ಇವರು ಇದಕ್ಕೂ ಮೊದಲು ಶ್ರೀಶೈಲ ಮಲ್ಲಿಕಾರ್ಜುನ ದೇವಸ್ಥಾನಕ್ಕೆ ಎರಡೂ ಬಾರಿ ೬೫ ಕೆ.ಜಿ ತೂಕದ ಮೂಟೆ ಯೊಂದಿಗೆ ೧೫ ದಿನಗಳಲ್ಲಿ ಪಾದಯಾತ್ರೆ ಮಾಡಿದರು. ಹಾಗೂ ಎರಡೂ ಬಾರಿ ಹುಲಜಂತಿ ಮಾಲಿಂಗರಾಯಗೆ ತೆರಳಿದ್ದರು. ಹಾಗೂ ಅಯೋಧ್ಯೆಗೆ ಪಾದಯಾತ್ರೆ ಕೂಡ ಯಶಸ್ಸು ಯಾಗಲೆಂದು ಎಂದು ಬಳಗಾನೂರ ಗ್ರಾಮದ ಗುರು ಹಿರಿಯರು ಶುಭ ಹಾರೈಸಿದರು.

ತಾಲೂಕ ವರದಿಗಾರರು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್‌ ಕನ್ನಡ ಚಾನಲ್:ಭೀಮಪ್ಪ ಹಚ್ಯಾಳ ದೇವರ ಹಿಪ್ಪರಗಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button