ಶೌಚಾಲಯ ನೀರಿನಲ್ಲಿ ಬಡ ಮಕ್ಕಳ ಬದುಕುವ ಪರಿಸ್ಥಿತಿ ಬಂದಧೋದಗಿದೆ – ಮಹಿಳಾ ಮಣಿಗಳಿಂದ ಆಮ್ ಆದ್ಮಿ ಪಕ್ಷದ ಸಿಂಬಲ್ ಹಿಡಿದು ಎಚ್ಚರಿಕೆ.
ಕೊಟ್ಟೂರು ಜ .05

ಸುಮ್ಮ ಕುಂತರೇ ಈ ಅನಿಷ್ಠ ತಪ್ಪದು ದಂಗೆ ಎದ್ದರೇ ಜಯ ನಮ್ಮದು ಅನ್ನೋ ಮಂತ್ರ ಪಡಿಸಿದಾಗ ಮಾತ್ರ ಜಯ ನಮ್ಮದು…..
ವಿಜಯನಗರ ಜಿಲ್ಲೆಯ ಕೊಟ್ಟೂರು ತಾಲೂಕಿನ ಕೊಟ್ಟೂರು ಪಟ್ಟಣದ 1 ನೇ. ವಾರ್ಡಿನಲ್ಲಿ ಸ್ಲಂ ಏರಿಯಾ ಅನ್ನೋಕೆ ನಮ್ಮ ಜೀವನವೇ ಉದಾರಣೆಯಾಗಿದೆ ಇಲ್ಲಿ ಕೊಟ್ಟೂರೇಶ್ವರ ದೇವಸ್ಥಾನದ ಶೌಚಾಲಯದ ನೀರನ್ನು ಮತ್ತು ಇತರೆ ಮನೆಗಳ ನೀರು ನಮ್ಮ ಓಣಿಯ ಪೈಪು ಮೂಲಕ ಬರುತ್ತವೆ.
ಪಟ್ಟಣ ಪಂಚಾಯಿತಿ ಅಧಿಕಾರಿಗಳ ಕೊಳಕು ಮನಸ್ಥಿತಿಗೆ ಧಿಕ್ಕಾರವಿರಲಿ…..

ಆಮೂಲಾಗ್ರ ಬದಲಾವಣೆ ಆಗದಿದ್ದರೆ ಮಹಿಳಾ ಮಣಿಗಳ ಕೈಗೆ ಆಮ್ ಆದ್ಮಿ ಪಕ್ಷದ ಸಿಂಬಲ್ ಬಂದ್ರು ಅಚ್ಚರಿ ಪಡುವಂಗಿಲ್ಲಾ…..
ಪೈಪು ಹೊಡೆದು ಹೋಗಿ ಹೊರ ಬಂದು ಗಬ್ಬು ನಾರುತ್ತಿದೆ ಮತ್ತು ಚರಂಡಿಗಳು ತುಂಬಿ ತುಳುಕುತ್ತವೆ. ನಮ್ಮ ಮಕ್ಕಳಿಗೆ ನಮಗೆ ಜ್ವರ ನೆಗಡಿ, ಕೆಮ್ಮು ಮುಂತಾದ ಕಾಯಿಲೆಗಳೊಂದಿಗೆ ಜೀವನ ನಡೆಸುತ್ತಿದ್ದೇವೆ. ಇಷ್ಟೆಲ್ಲಾ ಆದರೂ ಅರ್ಜಿ ಮೂಲಕ ಮನವಿ ಮಾಡಿ ಕೊಂಡರು ಕ್ಯಾರೇ ಅನ್ನುತ್ತಿಲ್ಲಾ ಇಲ್ಲಿನ ಅಧಿಕಾರಿಗಳು ನಮ್ಮ ಜೀವನ ಗಬ್ಬು ನಾರುತ್ತಿರುವ ಕೊಳಚೆ ಪ್ರದೇಶದಲ್ಲಿ ನಡೆಸುತ್ತಿದ್ದೇವೆ.
ಇದರ ಬಗ್ಗೆ ಪ.ಪಂ ಮುಖ್ಯ ಅಧಿಕಾರಿಗಳಿಗೆ ತಹಶೀಲ್ದಾರರಿಗೂ ಧರ್ಮ ಕರ್ತರಿಗೂ ಎಲ್ಲರಿಗೂ ಇದರ ಬಗ್ಗೆ ತಿಳಿಸಿದ್ದೇವೆ ಏಕೆ ನಮ್ಮನ್ನು ಸ್ವಚ್ಛವಾಗಿಡಲು ರಕ್ಷಣೆ ಕೊಡಲು ಮುಂದಾಗುತ್ತಿಲ್ಲಾ ಎಂಬುದು ನಮಗೆ ಯಕ್ಷ್ಯೇ ಪ್ರಶ್ನೆಯಾಗಿದೆ ಇದೇ ರೀತಿ ಮುಂದುವರೆದರೆ ತಮ್ಮ ಕಚೇರಿ ಮುಂದೆ ಹೋರಾಟ ಮಾಡುವುದಾಗಿ ದುರುಗಮ್ಮ ಸುನಿತಾ ಕೊಟ್ರಮ್ಮ ಮತ್ತಿತರರು ನಮ್ಮ ಸುದ್ದಿ ವಾಣಿಯೊಂದಿಗೆ ಆಕ್ರೋಶ ವ್ಯಕ್ತಪಡಿಸಿ ತ್ವರಿತ ಕ್ರಮ ಕೈಗೊಳ್ಳದಿದ್ದರೆ ಮಹಿಳಾ ಮಣಿಗಳಿಂದ ಆಮ್ ಆದ್ಮಿ ಪಕ್ಷದ ಸಿಂಬಲ್ ಹಿಡಿದು ಮುಂದೈತಿ ಮಾರಿ ಹಬ್ಬ ಎಂದು ಎಚ್ಚರಿಕೆ ನೀಡಿದ್ದಾರೆ.
ತಾಲೂಕ ವರದಿಗಾರರು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಪ್ರದೀಪ್ ಕುಮಾರ್ ಸಿ ಕೊಟ್ಟೂರು

