“ಸಂಕ್ರಾಂತಿ ಸವಿ ಕವಿ ಕಾಂತಿ”…..

ರೈತ ಬಂಧುಗಳ ಧಾರ್ಮಿಕ ಸಂಸ್ಕಾರ ಸಂಸ್ಕೃತಿ
ಸವಿ ದಿನವು
ಭೂದೇವಿಯ ಮಡಿಲಲಿ ಉತ್ತಿಬೇಳೆದ ಸಿರಿಯ
ಸೋಬಗು
ರೈತ ರಥ ಚಕ್ಕಡಿಯಲಿ ಹರುಷದಿ ಸಾಗುವರು
ಭೂಮಾತೆಗೆ ನಮಿಸುತ ಉತ್ಥರಾಯಣದೆಡೆಗೆ
ಪಯಣವು
ಕರಿ ಎತ್ತ ಕಾಳಿಂಗ ಬಿಳಿ ಎತ್ತ ಮಾಳಿಂಗ ಗೆಜ್ಜೆ
ಹೆಜ್ಜೆಗಳ ಶಬ್ಧವು
ಕೃಷಿ ಮಿತ್ರ ಎತ್ತುಗಳ ಸಿಂಗಾರವು
ತರಹ ತರಹ ಸವಿ ರುಚಿ ಆಹಾರವು
ಸಜ್ಜೆರೋಟ್ಟಿ ಕಿಚಡಿ ಕಡಬು ಶೆಂಗಾ ಹೊಳಿಗೆ
ಪಾಯಿಸ ಅನ್ನ ಪ್ರಸಾದವು
ಸಹಕುಟುಂಬ ಜೋತೆ ಖುಷಿ ನಗುವಿನಜೋತೆ
ಆಹಾರ ರುಚಿ ಸವಿಯವರು
ದ್ವೇಷ ಮರೆಸಿ ಪ್ರೀತಿ ಬೆರೆಸಿ ಎಳ್ಳು ಬೆಲ್ಲ
ಹಂಚುವರು
ಸರ್ವ ಜೀವಸಂಕುಲಗಳ ಜೋತೆ
ನಲಿಯುವವರು
ಹೆತ್ತವರ ಹಿರಿಯರ ಶುಭಾರ್ಶೀವಾದ ಅಮೃತ
ಘಳಿಗೆಯು
ಹೊಸ ಬೆಳೆಯ ಫಸಲು ಸಿರಿ ಸಂಪತದ
ಸಂಕ್ರಾಂತಿ ಹಬ್ಬವು
ಸಂಕ್ರಾಂತಿ ಕವಿ ಕಾಂತಿ ಭಾರತ ಭಾಗ್ಯದಾತ
ಅನ್ನದಾತರ ಆನಂದೋತ್ಸವವು
ಶ್ರೀದೇಶಂಸು
ಶ್ರೀಸುರೇಶ ಶಂಕ್ರೆಪ್ಪ ಅಂಗಡಿ
ದೇವರ ಹಿಪ್ಪರಗಿ

