ಭಗವಂತ ಸಾಕಾರನೋ ಹೌದು, ನಿರಾಕಾರನೋ ಹೌದು – ಶ್ರೀಮತಿ ಪಿ.ಎಸ್ ಮಾಣಿಕ್ಯ ಸತ್ಯನಾರಾಯಣ.
ಚಳ್ಳಕೆರೆ ಜ.10

ಶ್ರೀರಾಮಕೃಷ್ಣ ಪರಮಹಂಸರು ತಿಳಿಸಿದಂತೆ ಭಗವಂತನು ಸಾಕಾರನಂತೆ ನಿರಾಕಾರದಿಂದಲೂ ಕೂಡಿದ್ದಾನೆ ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಸದ್ಭಕ್ತರಾದ ಶ್ರೀಮತಿ ಪಿ.ಎಸ್ ಮಾಣಿಕ್ಯ ಸತ್ಯನಾರಾಯಣ ಹೇಳಿದರು.

ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದ ದೇವಸ್ಥಾನದಲ್ಲಿ ಆಯೋಜಿಸಿದ್ದ ಸತ್ಸಂಗ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅವರು “ಯುಗಾವತಾರ ಶ್ರೀರಾಮಕೃಷ್ಣ ಭಾಗ-೨” ರ ಗ್ರಂಥ ಪಾರಾಯಣ ಮಾಡುತ್ತ “ಭಕ್ತಪಾಲಕ” ಎಂಬ ಅಧ್ಯಾಯವನ್ನು ಓದಿದರು.

ಈ ಸತ್ಸಂಗದ ಪ್ರಯುಕ್ತ ಶ್ರೀಶಾರದಾಶ್ರಮದ ಸದ್ಭಕ್ತರಿಂದ ಸಾಮೂಹಿಕ ಭಜನೆ, ದಿವ್ಯತ್ರಯರಿಗೆ ಮಂಗಳಾರತಿಯನ್ನು ಸದ್ಭಕ್ತರಾದ ಶ್ರೀಮತಿ ಮಂಜುಳಾ ಉಮೇಶ್ ನಡೆಸಿ ಕೊಟ್ಟರು.

ಕಾರ್ಯಕ್ರಮದಲ್ಲಿ ರಶ್ಮಿ ವಸಂತ, ಯಶಸ್ವಿ, ಸಂಜನಾ, ಡಾ, ಭೂಮಿಕಾ, ಮಾನ್ಯ, ಪುಷ್ಪಲತಾ, ಹಣ್ಣಿನ ವ್ಯಾಪಾರಿ ವೆಂಕಟೇಶ್, ಯತೀಶ್ ಎಂ ಸಿದ್ದಾಪುರ ಹಾಜರಿದ್ದರು.

