ಶ್ರೀ ಗುರು ಕೊಟ್ಟೂರೇಶ್ವರ ಜಾತ್ರೆಯಲ್ಲಿ ಬ್ಯಾನರ್ – ಬಾವುಟಗಳು ಬಂದ್.
ಕೊಟ್ಟೂರು ಜ.10

ಫೆ 12 ರಂದು ನಡೆಯಲಿರುವ ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿಯ ರಥೋತ್ಸವದ ಅಂಗವಾಗಿ ಬರುವ ಭಕ್ತದಿಗಳಿಗೆ ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತದಿಂದ ಯಾವುದೆ ಅನಾನುಕೂಲವಾಗದಂತೆ ಅಗತ್ಯವಾದ ಮೂಲ ಸೌಲಭ್ಯಗಳನ್ನು ಒದಗಿಸಬೇಕು ಎಂದು ಶಾಸಕ ನೇಮಿರಾಜ್ ನಾಯ್ಕ್ ರವರು ತಿಳಿಸಿದರು.ಪಟ್ಟಣದ ದೇವಸ್ಥಾನ ಆವರಣದಲ್ಲಿ ನಡೆದ ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿಯ ರಥೋತ್ಸವದ ಪ್ರಯುಕ್ತ ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು.
ಜಾತ್ರೆಯಲ್ಲಿ ಬ್ಯಾನರ್ ಬಾವುಟಗಳು ಬಂದ್:-
ಸ್ವಾಮಿಯ ಜಾತ್ರೆಯ ಪ್ರಯುಕ್ತ ಯಾರು ಕೂಡ ಬ್ಯಾನರ್ ಹಾಕ ಬಾರದು ಹಾಗೇ ಬಾವುಟಗಳನ್ನು ಹಿಡಿದು ತಿರುಗಿಸ ಬಾರದು ಒಂದು ವೇಳೆ ಈ ದೃಶ್ಯ ಗಳು ಕಂಡು ಬಂದರೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಿ ಇದರಲ್ಲಿ ನನ್ನದೇ ಬ್ಯಾನರ್ ಹಾಕಿದರೂ ಕೂಡ ತೆಗೆದು ಹಾಕಿ ಒಂದು ವೇಳೆ ಬಲವಂತಗಿ ಬ್ಯಾನರ್ ಹಾಕಿದ್ದೆ ಆದರೆ ಅಂಥವರ ವಿರುದ್ಧ ಪ್ರಕರಣ ದಾಖಲು ಮಾಡಿ ಎಂದು ಪೊಲೀಸ್ ಇಲಾಖೆಗೆ ತಿಳಿಸಿದರು.
ವಿಶೇಷವಾಗಿ ಮ್ಯಾಟ್ ವ್ಯವಸ್ಥೆ:-
ಪಾದಯಾತ್ರೆಗೆ ಬರುವ ಭಕ್ತಾದಿಗಳಿಗೆ ಈ ಬಾರಿ ವಿಶೇಷವಾಗಿ ಪಟ್ಟಣದ ಸುತ್ತ ಮುತ್ತ ಪ್ರಮುಖ ಸ್ಥಳಗಳಲ್ಲಿ ಮ್ಯಾಟ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ ಈ ಸಂಬಂಧ 55 ಲಕ್ಷ ರೂಪಾಯಿ ಹಣವನ್ನು ವ್ಯಯ ಮಾಡಲಾಗಿದೆ ಎಂದು ತಿಳಿಸಿದರು.
ಪಟ್ಟಣದ ಸುತ್ತಲೂ ತಾತ್ಕಾಲಿಕ ಸಿ.ಸಿ.ಟಿ.ವಿ ಕಣ್ಗಾವಲು ಅವಶ್ಯಕ:-
ಪಟ್ಟಣದ ಪ್ರಮುಖ ಸ್ಥಳಗಳಲ್ಲಿ ತಾತ್ಕಾಲಿಕವಾಗಿ ಸಿಸಿಟಿವಿ ಕಣ್ಗಾವಲು ಅಳವಡಿಸಬೇಕು ಬರುವ ಭಕ್ತಾದಿಗಳು ಎಲ್ಲರೂ ಸಿಸಿಟಿವಿ ಕಣ್ಗಾವಲು ಒಳ್ಳಗೆ ಇರುವಂತೆ ಕ್ರಮ ವಹಿಸ ಬೇಕು ಹಾಗೇ ಬರುವ ಭಕ್ತಾದಿಗಳು ಕೂಡ ಜವಾಬ್ದಾರಿಯುತವಾಗಿ ತಮ್ಮ ವಸ್ತುಗಳ ಮತ್ತು ಆಭರಣ ಕಡೆಗೆ ಗಮನ ವಹಿಸ ಬೇಕು ಇದರಿಂದಾಗಿ ಪೋಲಿಸ್ ಇಲಾಖೆಗೆ ಸಹಕಾರ ಅಗತ್ಯತೆ ಎಂದರು.
ಪೂರ್ವಭಾವಿ ಸಭೆಯಲ್ಲಿ ಜಿಲ್ಲಾಧಿಕಾರಿ ಕವಿತ ಎಸ್ ಮನ್ನಿಕೇರಿ ಮಾತನಾಡಿ ಸ್ವಚ್ಛತೆಗೆ ಮೊದಲ ಆದ್ಯತೆ ನೀಡಿ.ಪಟ್ಟಣದ ಎಲ್ಲಾ ನಗರಗದ ಚರಂಡಿಗಳನ್ನು ಸ್ವಚ್ಛ ಗೊಳಿಸಿ ಬ್ಲೀಚಿಂಗ್ ಪೌಡರ್ ಸಿಂಪಡಿಸ ಬೇಕು ಹಾಗೇ ನಿರಂತರವಾಗಿ ಘನ ತಾಜ್ಯವನ್ನು ತಕ್ಷಣವೇ ತೆಗೆದು ಕೊಂಡು ಹೋಗುವ ಕೆಲಸ ನಡೆಯ ಬೇಕು ಧೂಳ್ ಆಗದಂತೆ ಪಟ್ಟಣದ ಎಲ್ಲಾ ರಸ್ತೆಗಳಿಗೆ ನೀರು ಹಾಕಬೇಕು ಹೆಚ್ಚಿನ ಮಟ್ಟದಲ್ಲಿ ನೀರಿನ ಟ್ಯಾಂಕರ್ ವ್ಯವಸ್ಥೆಯನ್ನು ಕಲ್ಪಿಸಿ ಕೊಳ್ಳಿ ಎಂದು ಪ.ಪಂ. ಮುಖ್ಯ ಅಧಿಕಾರಿ ನಸರುಲ್ಲಾ ರವರಿಗೆ ಸೂಚಿಸಿದರು.
ತುರ್ತು ತಾತ್ಕಾಲಿಕ ಆಸ್ಪತ್ರೆ ನಿರ್ಮಾಣ:-

ಪಾದಯಾತ್ರೆ ಬರುವ ಭಕ್ತಾದಿಗಳಿಗೆ ಆರೋಗ್ಯದಲ್ಲಿ ಯಾವುದೇ ವ್ಯತ್ಯಾಸವಾಗದಂತೆ ತುರ್ತು ಚಿಕಿತ್ಸೆಗಾಗಿ ನಾಲಕ್ಕು ದಿಕ್ಕಿನ ಕಡೆ ತಾತ್ಕಾಲಿಕ ಆಸ್ಪತ್ರೆಯನ್ನು ನಿರ್ಮಿಸ ಬೇಕು ಇದಕ್ಕೆ ಹೆಚ್ಚಿನ ಮಟ್ಟದಲ್ಲಿ ಸಿಬ್ಬಂದಿ ವ್ಯವಸ್ಥೆಯನ್ನು ತೆಗೆದು ಕೊಳ್ಳಿ ಎಂದು ಆರೋಗ್ಯ ಅಧಿಕಾರಿಗಳಿಗೆ ತಾಕಿತ್ ಮಾಡಿದರು.
ರಾಜ್ಯ ಮಟ್ಟದ ಪತ್ರಿಕೆಗಳಲ್ಲಿ ಹಾಗೂ ಡಿಜಿಟಲ್ ಮೀಡಿಯಾ ಗಳಲ್ಲಿ ಜಾತ್ರೆಯ ವಿಶೇಷತೆಯನ್ನು ಹೆಚ್ಚಿನ ಸಂಖ್ಯೆಯಲ್ಲಿ ಪ್ರಚಾರ ಪಡಿಸಿ ಎಂದು ಜಿಲ್ಲಾಧಿಕಾರಿಯವರು ಅಧಿಕಾರಿಗೆ ತಿಳಿಸಿದಾಗ ಇದರ ಸಂಬಂಧ ಪತ್ರಕರ್ತ ಕೊಟ್ರೇಶ್ ಮಾತನಾಡಿ ಇಲ್ಲಿನ ಸ್ಥಳೀಯ ಪತ್ರಕರ್ತರು ವರ್ಷ ಪೂರ್ತಿ ಸ್ವಾಮಿಯ ಶ್ರೇಯೋಭಿವೃದ್ಧಿಯ ನಿರಂತರ ಸುದ್ದಿ ಪ್ರಕಟಿಸುತ್ತಿದ್ದಾರೆ ಜಾಹೀರಾತು ಸಂಬಂಧ ಮೊದಲು ಸ್ಥಳೀಯ ಪತ್ರಕರ್ತರಿಗೆ ಆದ್ಯತೆ ನೀಡಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು.
ಸೂಕ್ತ ಬಂದೋಬಸ್ತಿಗಾಗಿ ಹೆಚ್ಚಿನ ಮಟ್ಟದ ಪೊಲೀಸ್ ಬ್ಯಾರಿಕೆಡ್ ವ್ಯವಸ್ಥೆಯನ್ನು ನೀಡಬೇಕು ಎಂದು ಪೊಲೀಸ್ ಇಲಾಖೆಯಿಂದ ಮನವಿ ಸಲ್ಲಿಸಿದ್ದೇವೆ ಇದನ್ನು ಪರಿಗಣಿಸಿ ಎಂದು ಪಿಎಸ್ಐ ಗೀತಾಂಜಲಿ ಸಿಂಧೆ ರವರು ಜಿಲ್ಲಾಧಿಕಾರಿಯವರಿಗೆ ಮನವಿ ಮಾಡಿದರು ಇದಕ್ಕೆ ಪ್ರತಿಕ್ರಿಸಿದ ಅವರು ಬಗೆಹರಿಸಿ ಕೊಡುವುದಾಗಿ ತಿಳಿಸಿದರು.
ಸಭೆಯಲ್ಲಿ ಸ್ಥಳೀಯ ಮುಖಂಡರ ಸಲಹೆ ಸೂಚನೆ ಮೇರೆಗೆ ಸ್ವಾಮಿಯ ಮಹಾ ರಥೋತ್ಸವವನ್ನು ಅಚ್ಚು ಕಟ್ಟಾಗಿ ನೆರವರಿಸುವುದಾಗಿ ತಿಳಿಸಿದರು.
ಪೊಲೀಸ್ ಜಿಲ್ಲಾವರಿಷ್ಠಾಧಿಕಾರಿ ಎಸ್.ಜಾಹ್ನವಿ ಮಾತನಾಡಿ, ರಥೋತ್ಸವದ ಸಂದರ್ಭದಲ್ಲಿ ಬಂದೋಬಸ್ತಿಗಾಗಿ ಹೆಚ್ಚುವರಿ ಸಿಬ್ಬಂದಿ ನಿಯೋಜಿಸಿ ಸೂಕ್ತ ಬಿಗಿ ಬಂದೋಬಸ್ತ್ ಕಲ್ಪಿಸಲಾಗುವುದು ಜೊತೆಗೆ ಸ್ಧಳೀಯರ ಸಹಕಾರ ಅತ್ಯಗತ್ಯ ಎಂದರು.
ಈ ಸಂದರ್ಭದಲ್ಲಿ ಮಹಲ್ ಮಠದ ಶಿವಪ್ರಕಾಶ ಸ್ವಾಮಿ ಕೊಟ್ಟೂರು ದೇವರು, ಮುಖಂಡರಾದ ಎಂ.ಎಂ.ಜೆ ಹರ್ಷವರ್ಧನ್, ಪಿ.ಎಚ್ ದೊಡ್ಡರಾಮಣ್ಣ, ಸಹಾಯಕ ಆಯುಕ್ತ ವಿವೇಕಾನಂದ, ತಹಶೀಲ್ದಾರ್ ಜಿ.ಕೆ. ಅಮರೇಶ್ ತಾ.ಪಂ ಇ.ಓ ಬಿ.ಆನಂದ್ ಕುಮಾರ್, ಡಿವೈಎಸ್ಪಿ ಮಲ್ಲೇಶ್ ದೊಡ್ಡಮನಿ, ಧಾರ್ಮಿಕ ಇಲಾಖೆ ಸಹಾಯಕ ಆಯುಕ್ತರು ಎಚ್.ಸವಿತಾ, ಪ.ಪಂ ಮುಖ್ಯಾಧಿಕಾರಿ ಎ.ನಸರುಲ್ಲಾ, ದೇವಸ್ಧಾನ ಕಾರ್ಯ ನಿರ್ವಾಹಕ ಅಧಿಕಾರಿ ಮಲ್ಲಪ್ಪ, ಧರ್ಮ ಕರ್ತ ಎಂ.ಕೆ ಶೇಖರಯ್ಯ, ಅರವಿಂದ್ ಬಸಾಪುರ್, ಕಟ್ಟೆಮನಿ ದೈವಸ್ಥರು, ಆಯಗಾರ ಬಳಗ, ಹಾಗೂ ಸ್ಥಳೀಯ ಮುಖಂಡರು ಪಾಲ್ಗೊಂಡಿದ್ದರು.
ತಾಲೂಕ ವರದಿಗಾರರು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಪ್ರದೀಪ್ ಕುಮಾರ್ ಸಿ ಕೊಟ್ಟೂರು

