🚨 ಬ್ರೇಕಿಂಗ್ ನ್ಯೂಸ್, ಬಾರಕೂರು ಕಾಳಿಕಾಂಬ ದೇವಸ್ಥಾನದ ಸಭೆಯಲ್ಲಿ ರೌಡಿ ಶೀಟರ್ ಅಬ್ಬರ – ಸಾರ್ವಜನಿಕವಾಗಿ ಬೆದರಿಕೆ..! 🚨

ಬಾರಕೂರು/ಉಡುಪಿ ಜ.11

ಧಾರ್ಮಿಕ ಕಾರ್ಯಕ್ರಮವೊಂದರ ವೇದಿಕೆ ಈಗ ವಿವಾದದ ಕೇಂದ್ರ ಬಿಂದುವಾಗಿದೆ. ಬಾರಕೂರಿನ ಶ್ರೀ ಕಾಳಿಕಾಂಬ ದೇವಸ್ಥಾನದ ಕಾರ್ತಿಕ ದೀಪೋತ್ಸವದ ಧಾರ್ಮಿಕ ಸಭೆಯಲ್ಲಿ, ಬ್ರಹ್ಮಾವರ ಪೊಲೀಸ್ ಠಾಣಾ ವ್ಯಾಪ್ತಿಯ ರೌಡಿ ಶೀಟರ್ ಹಾಗೂ ದೇವಸ್ಥಾನದ 2 ನೇ. ಆಡಳಿತ ಮುಕ್ತೇಶ್ವರ ಪ್ರವೀಣ್ ಆಚಾರ್ಯ ರಂಗನಕೆರೆ ಎಂಬಾತ ಸಾರ್ವಜನಿಕವಾಗಿ ಬೆದರಿಕೆ ಒಡ್ಡಿರುವುದು ತೀವ್ರ ಸಂಚಲನ ಮೂಡಿಸಿದೆ.

📍 ಘಟನೆಯ ಮುಖ್ಯಾಂಶಗಳು:-

ಪ್ರಚೋದನಾತ್ಮಕ ಭಾಷಣ: ಸುಮಾರು 6 ಸಾವಿರ ಭಕ್ತರು ಹಾಗೂ ಮಾಜಿ ಸಚಿವರಿದ್ದ ವೇದಿಕೆಯಲ್ಲಿ ಮೈಕ್ ಹಿಡಿದು ತನ್ನದೇ ಸಮಾಜದ ವ್ಯಕ್ತಿಗಳ ವಿರುದ್ಧ ಪ್ರವೀಣ್ ಆಚಾರ್ಯ ಅಬ್ಬರಿಸಿದ್ದಾನೆ.

ಹಿಟಾಚಿ ಬೆದರಿಕೆ:-

ದೇವಸ್ಥಾನಕ್ಕೆ ಸೇರಿದ ಜಾಗವನ್ನು ಅತಿಕ್ರಮಿಸಲಾಗಿದೆ ಎಂದು ಸುಳ್ಳು ಆರೋಪ ಮಾಡಿ, “15 ದಿನದೊಳಗೆ ವಾಣಿಜ್ಯ ಸಂಕಿರಣದ ಅರ್ಧ ಭಾಗವನ್ನು ಹಿಟಾಚಿಯಿಂದ ಕೆಡವಿ ಕೆರೆ ನಿರ್ಮಿಸುತ್ತೇವೆ” ಎಂದು ಬಹಿರಂಗವಾಗಿ ಬೆದರಿಕೆ ಹಾಕಿದ್ದಾನೆ.

ನ್ಯಾಯಾಂಗ ನಿಂದನೆ ಆರೋಪ:-

ಪ್ರಸ್ತುತ ಬ್ರಹ್ಮಾವರ ನ್ಯಾಯಾಲಯದಲ್ಲಿ ತನಿಖಾ ಹಂತದಲ್ಲಿರುವ ಸಿವಿಲ್ ಭೂ ವ್ಯಾಜ್ಯದ (O.S. No. 598/2023) ಬಗ್ಗೆ ಸಾರ್ವಜನಿಕವಾಗಿ ಸುಳ್ಳು ಮಾಹಿತಿ ಹರಡಿ ಹಾದಿ ತಪ್ಪಿಸುವ ಪ್ರಯತ್ನ ಮಾಡಿದ್ದಾನೆ ಎಂದು ಸಂತ್ರಸ್ತರು ದೂರಿದ್ದಾರೆ.

⚖️ ಸಂತ್ರಸ್ತರ ದೂರು ಮತ್ತು ಕಾನೂನು ಹೋರಾಟ:-

ಈ ಘಟನೆಯಿಂದ ಕಂಗಾಲಾದ ಶ್ರೀಕಾಂತ್ ಆಚಾರ್ಯ ಮತ್ತು ನಾಗರಾಜ್ ಆಚಾರ್ಯ ಅವರು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಹಾಗೂ ಬ್ರಹ್ಮಾವರ ಪೊಲೀಸ್ ಠಾಣೆಗೆ ದಾಖಲೆ ಸಹಿತ ದೂರು ನೀಡಿದ್ದಾರೆ.

ಆರೋಪ:-

ಶಾಂತಿಭಂಗ, ಕ್ರಿಮಿನಲ್ ಸಂಚು ಮತ್ತು ಬೆದರಿಕೆ.

ಎಫ್.ಐ.ಆರ್ ದಾಖಲು:-

ಈ ಕುರಿತು ಈಗಾಗಲೇ ಖಾಸಗಿ ಫಿರ್ಯಾದು ಸಂಖ್ಯೆ 0004/2026 ರಂತೆ ಪ್ರಕರಣ ದಾಖಲಾಗಿದ್ದು, ವರದಿಯನ್ನು ನ್ಯಾಯಾಲಯಕ್ಕೆ ರವಾನಿಸಲಾಗಿದೆ.

ಪುರಾವೆ:-

ಸ್ಥಳೀಯ ವಾಹಿನಿಯಲ್ಲಿ ನೇರ ಪ್ರಸಾರವಾದ ಭಾಷಣದ ವೀಡಿಯೋ ತುಣುಕುಗಳನ್ನು (CD) ಪೊಲೀಸರಿಗೆ ಹಸ್ತಾಂತರಿಸಲಾಗಿದೆ.

📁 ಆರೋಪಿತನ ಕರಾಳ ಕ್ರಿಮಿನಲ್ ಇತಿಹಾಸ:-

ದೂರುದಾರರ ಪ್ರಕಾರ, ಆರೋಪಿ ಪ್ರವೀಣ್ ಆಚಾರ್ಯ ಬ್ರಹ್ಮಾವರ ಠಾಣೆಯ ರೌಡಿ ಶೀಟರ್ ಆಗಿದ್ದು, ಈತನ ಮೇಲೆ ಹಲವಾರು ಗಂಭೀರ ಪ್ರಕರಣಗಳಿವೆ.

ಕೊಲೆ ಯತ್ನ ಪ್ರಕರಣ:-

ಅಪರಾಧ ಕ್ರಮಾಂಕ 0027/2021 ರ SC No. 21/2024 ಉಡುಪಿ ಜಿಲ್ಲಾ ನ್ಯಾಯಾಲಯದಲ್ಲಿ ತನಿಖಾ ಹಂತದಲ್ಲಿದ್ದು, ಈತನೂ 1 ನೇ. ಆರೋಪಿ ಯಾಗಿದ್ದಾನೆ.

ಇತ್ತೀಚಿನ FIRಗಳು:-

ಬ್ರಹ್ಮಾವರ ಠಾಣೆಯಲ್ಲಿ 2021ರ ನಂತರ 3 ಪ್ರಕರಣಗಳು ದಾಖಲಾಗಿವೆ (ಅ.ಕ್ರ 0012/2024, 0076/2025 ಹಾಗೂ 0004/2026).

ವಿಚಾರಣೆಯಲ್ಲಿರುವ ಕೇಸುಗಳು:-

ಬ್ರಹ್ಮಾವರ ನ್ಯಾಯಾಲಯದಲ್ಲಿ CC 64/2024, CC 1227/2023 ಹಾಗೂ CC 2349/2023 ಪ್ರಕರಣಗಳು ವಿಚಾರಣೆಯಲ್ಲಿದೆ.

SC/ST ದೌರ್ಜನ್ಯ:-

ಈ ಹಿಂದೆ ದಲಿತ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿದ ಪ್ರಕರಣದಲ್ಲಿ ಶಿಕ್ಷೆಯಾಗಿದ್ದು, ಪ್ರಸ್ತುತ ಹೈಕೋರ್ಟ್‌ನಿಂದ (CRL.A. 39/2016) ಷರತ್ತು ಬದ್ಧ ಜಾಮೀನಿನಲ್ಲಿದ್ದಾನೆ.

ಗಡಿಪಾರು ಭೀತಿ:-

ಈತನ ನಡವಳಿಕೆಯಿಂದಾಗಿ ಕಳೆದ ವಿಧಾನಸಭಾ ಚುನಾವಣೆ ವೇಳೆ ಪೊಲೀಸರು ಗಡಿಪಾರು ನೋಟೀಸ್ ಸಹ ಜಾರಿ ಮಾಡಿದ್ದರು.

🔍 ಮೂಲಗೇಣಿ ಹಕ್ಕಿನ ವಿವಾದ:-

ವಿವಾದಿತ ಭೂಮಿಯು 2011 ರ ಭೂ ಸುಧಾರಣಾ ಕಾಯ್ದೆಯ ತಿದ್ದುಪಡಿಯಂತೆ ಮೂಲಗೇಣಿ ಹಕ್ಕಿನಡಿ ಬರುತ್ತದೆ. ಇದರ ಮಾಲೀಕತ್ವ ಕಾನೂನಾತ್ಮಕವಾಗಿ ಗೇಣಿಧಾರರ ಬಳಿಯೇ ಇದ್ದರೂ, ಕಾನೂನಿನ ಅರಿವಿಲ್ಲದ ಭಕ್ತರನ್ನು ಎತ್ತಿಕಟ್ಟಲು ಪ್ರವೀಣ್ ಆಚಾರ್ಯ ಹಸಿ ಸುಳ್ಳುಗಳನ್ನು ಹೇಳುತ್ತಿದ್ದಾನೆ ಎಂದು ದೂರುದಾರರು ಸ್ಪಷ್ಟಪಡಿಸಿದ್ದಾರೆ.

“ಒಬ್ಬ ರೌಡಿ ಶೀಟರ್ ಧಾರ್ಮಿಕ ವೇದಿಕೆಯನ್ನು ಬಳಸಿ ಕೊಂಡು ಸಾರ್ವಜನಿಕವಾಗಿ ಆಸ್ತಿ ಪಾಸ್ತಿಗೆ ಹಾನಿ ಮಾಡುವ ಮತ್ತು ಬೆದರಿಕೆ ಹಾಕುವ ಧೈರ್ಯ ಮಾಡಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಕೂಡಲೇ ಈತನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು.” – ಸಂತ್ರಸ್ತರು.

ವರದಿ:ಆರತಿ.ಗಿಳಿಯಾರು.ಉಡುಪಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button