ತಾಲೂಕಿನ ದಲಿತ ಸೇನೆ ನೂತನ ಗೌರವ ಅಧ್ಯಕ್ಷರಾಗಿ -ಶ್ರೀ ಚಂದ್ರಾಮ.ಸೋಮಣ್ಣ ಮೇಲಿನಕೇರಿ ಆಯ್ಕೆ.
ಆಲಮೇಲ ಜ.12

ದಲಿತ ಸೇನೆಯ ವಿಜಯಪುರ ಜಿಲ್ಲೆಯ ಆಲಮೇಲ ತಾಲೂಕಿನ ದೇವಣಗಾಂವ ಗ್ರಾಮದ ಹಿರಿಯರಾದ ಶ್ರೀ ಚಂದ್ರಾಮ ಸೋಮಣ್ಣ ಮೇಲಿನಕೇರಿ ಅವರನ್ನು ದಲಿತ ಸೇನೆಯ ರಾಜ್ಯ ಹಿರಿಯ ಉಪಾಧ್ಯಕ್ಷ ಮಹಬೂಬ್ ಸಿಂದಗಿಕರ್ ಯವರ ಮತ್ತು ಮುಂಬೈ ಕರ್ನಾಟಕ ಅಧ್ಯಕ್ಷ ಮಹೇಶ್ ಜಾಬಾನೂರ್ ಹಾಗೂ ವಿಜಯಪುರ ಜಿಲ್ಲಾಧ್ಯಕ್ಷ ಖಾಜು ಹೊಸಮನಿ ಯವರ ಒಪ್ಪಿಗೆ ಮತ್ತು ನಿರ್ಣಯದಂತೆ ಶ್ರೀ ಚಂದ್ರಾಮ್ ಎಸ್ ಮೇಲಿನಕೇರಿ ಅವರನ್ನು ದಲಿತ ಸೇನೆ ಆಲಮೇಲ ತಾಲೂಕಿನ ನೂತನ ಗೌರವ ಅಧ್ಯಕ್ಷರನ್ನಾಗಿ ಇಂದು ಕಲಬುರ್ಗಿಯಲ್ಲಿ ದಲಿತ ಸೇನೆ ರಾಜ್ಯಾಧ್ಯಕ್ಷರಾದ ಶ್ರೀ ಹನುಮಂತ ಯಳಸಂಗಿ ಅವರು ಆಯ್ಕೆ ಮಾಡಿದರು.

ಆಲಮೇಲ್ ತಾಲೂಕಿನ ದಲಿತ ಸಮುದಾಯದ ಬಂಧುಗಳು ಎಂದಿನಂತೆ ದಲಿತ ಸೇನೆ ಬೆನ್ನಿಗಿದ್ದು ಸಮುದಾಯದ ರಕ್ಷಣೆಗಾಗಿ ಮತ್ತು ಜಾಗೃತಿಗಾಗಿ ಪುಲೇ – ಶಾಹೂ – ಅಂಬೇಡ್ಕರ ರವರ ವಿಚಾರ ರಕ್ಷಣೆ ಮತ್ತು ಪ್ರಚಾರ ಪ್ರಸಾರಕ್ಕಾಗಿ ಹಿರಿಯರಾದ ಶ್ರೀ ಚಂದ್ರಾಮ ಮೇಲಿನಕೇರಿ ಅವರನ್ನು ಬೆಂಬಲಿಸಿ ದಲಿತ ಸೇನೆ ಬಲ ಪಡಿಸುವಂತೆ ವಿನಂತಿಸಿದರು ಎಂದು ವರದಿಯಾಗಿದೆ.
ತಾಲೂಕ ವರದಿಗಾರರು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ರೇವಣಸಿದ್ದಯ್ಯ ಜಿ ಹಿರೇಮಠ ಆಲಮೇಲ

