ಸ್ವಾಮಿ ವಿವೇಕಾನಂದರು ಸಾಕ್ಷಾತ್ ಶಿವ ಸ್ವರೂಪರು – ಮಾತಾಜೀ ತ್ಯಾಗಮಯೀ.
ಚಳ್ಳಕೆರೆ ಜ.12

ಕಾಶಿಯ ವೀರೇಶ್ವರ ಶಿವನ ವರ ಪ್ರಸಾದ ದಿಂದ ಹುಟ್ಟಿದ ಸ್ವಾಮಿ ವಿವೇಕಾನಂದರು ಸಾಕ್ಷಾತ್ ಶಿವ ಸ್ವರೂಪರು ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಅಧ್ಯಕ್ಷರಾದ ಪೂಜ್ಯ ಮಾತಾಜೀ ತ್ಯಾಗಮಯೀ ತಿಳಿಸಿದರು.

ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದ ದೇವಸ್ಥಾನದಲ್ಲಿ “ಸ್ವಾಮಿ ವಿವೇಕಾನಂದರ 164ನೇ ಜಯಂತ್ಯುತ್ಸವ”ದ ಪ್ರಯುಕ್ತ ಆಯೋಜಿಸಿದ್ದ ವಿಶೇಷ ಸತ್ಸಂಗ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಅವರು “ಶಿವ ಸ್ವರೂಪ ಸ್ವಾಮಿ ವಿವೇಕಾನಂದ” ಎಂಬ ವಿಷಯವಾಗಿ ವಿಶೇಷ ಪ್ರವಚನ ನೀಡಿದರು.

ಸಪ್ತ ಋಷಿ ಭುವನ ದಿಂದ ಇಳೆಗಿಳಿದು ಬಂದ ಸ್ವಾಮಿ ವಿವೇಕಾನಂದರ ಸಮಗ್ರ ಜೀವನವನ್ನು ಅವಲೋಕಿಸಿದಾಗ ಅವರು ಶಿವನ ಅವತಾರ ಎಂಬುವುದಕ್ಕೆ ಅನೇಕ ಘಟನೆಗಳು ಸಿಗುತ್ತವೆ. ಜೀವ ಸೇವೆಯೇ ಈಶ ಸೇವೆ ಎಂಬ ಮಹತ್ವದ ಸಂದೇಶ ನೀಡಿದ ಸ್ವಾಮಿ ವಿವೇಕಾನಂದರ ಜೀವನ ಮತ್ತು ಸಂದೇಶಗಳು ಇಂದಿನ ಜನರಿಗೆ ಆದರ್ಶ ವಾಗಬೇಕು ಎಂದರು.
ಸತ್ಸಂಗದ ಆರಂಭದಲ್ಲಿ ಶ್ರೀಶಾರದಾಶ್ರಮದ ಸದ್ಭಕ್ತರಿಂದ ಸಾಮೂಹಿಕ ಸ್ವಾಮಿ ವಿವೇಕಾನಂದರ ಭಜನೆಗಳು, ದಿವ್ಯತ್ರಯರಿಗೆ ಮಂಗಳಾರತಿ ಮತ್ತು ಜೀವ ಶಿವ ಸೇವೆಯನ್ನು ಕೈಗೊಂಡ ಕುಮಾರಿ ಸಂಜನಾ, ಹೃತಿಕ್, ಡಾ, ಭೂಮಿಕಾ, ಸಂತೋಷ್ ಅವರು ತಮ್ಮ ಅನುಭವಗಳನ್ನು ಹಂಚಿ ಕೊಂಡರು.
ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಎಚ್ ಲಕ್ಷ್ಮೀದೇವಮ್ಮ, ಪಿ.ಎಸ್ ಮಾಣಿಕ್ಯ ಸತ್ಯನಾರಾಯಣ, ಎಂ ಗೀತಾ ನಾಗರಾಜ್, ಗೀತಾ ವೆಂಕಟೇಶರೆಡ್ಡಿ, ಜಿ.ಯಶೋಧಾ ಪ್ರಕಾಶ್, ಅಂಬುಜಾ ಶಾಂತಕುಮಾರ್, ನಾಗರತ್ನಮ್ಮ, ವೀರಮ್ಮ, ರಶ್ಮಿ ವಸಂತ, ಯಶಸ್ವಿ, ಯತೀಶ್.ಎಂ ಸಿದ್ದಾಪುರ, ಡಾ, ಸಿ.ಟಿ ಬಸವರಾಜಪ್ಪ, ಗೀತಾ ಭಕ್ತವತ್ಸಲ, ಲತಾ, ವಾಸವಿ, ನಳಿನಿ, ಚೇತನ್, ಚೆನ್ನಕೇಶವ, ವಿನುತಾ, ನಿವೃತ್ತ ಶಿಕ್ಷಕ ಬಸವರಾಜ್, ಗಂಗಾಧರ ಶೆಟ್ಟಿ, ಕವಿತಾ, ಮಾನ್ಯ, ಪುಷ್ಪಲತಾ, ಉಷಾ ಶ್ರೀನಿವಾಸ್, ಮಂಜುಳಾ ಉಮೇಶ್, ಪ್ರೇಮಲೀಲಾ, ವಿಜಯಲಕ್ಷ್ಮೀ, ರಶ್ಮಿ ರಮೇಶ್ ಸೇರಿದಂತೆ ಸಾಕಷ್ಟು ಸಂಖ್ಯೆಯ ಸದ್ಭಕ್ತರು ಭಾಗವಹಿಸಿದ್ದರು.
ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.

