ಸ್ವಾಮಿ ವಿವೇಕಾನಂದರ ಆದರ್ಶಗಳನ್ನು ವಿದ್ಯಾರ್ಥಿ ದೆಸೆಯಿಂದಲೇ ತಮ್ಮ ಜೀವನದಲ್ಲಿ ಅಳವಡಿಸಿ ಕೊಳ್ಳಿ – ವೈಭವ ಶಾಲೆಯ ಮುಖ್ಯಸ್ಥರಾದ ಮುರಳಿಧರ ಗಜೇಂದ್ರಗಡ ಕರೆ.
ಕೆ ಹೊಸಹಳ್ಳಿ ಜ.13

ಕೂಡ್ಲಿಗಿ ತಾಲೂಕಿನ ಕಾನ ಹೊಸಹಳ್ಳಿಯ ಕಾನಾ ಹೊಸಹಳ್ಳಿಯ ಯುವ ಬ್ರಿಗೇಡ್ ಕಾರ್ಯಕರ್ತರಿಂದ ಮತ್ತು ವಿವೇಕಾನಂದ ಟುಟೋರಿಯಲ್ ಹೊಸಹಳ್ಳಿಯಲ್ಲಿ ಸ್ವಾಮಿ ವಿವೇಕಾನಂದ ಜಯಂತಿ ಅಂಗವಾಗಿ ಸ್ವಾಮಿ ವಿವೇಕಾನಂದರ ಭಾವ ಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.
ಸ್ವಾಮಿ ವಿವೇಕಾನಂದ ಅವರು ತಮ್ಮ ವಿದ್ಯಾರ್ಥಿ ದೆಸೆಯಿಂದಲೇ ಆಧ್ಯಾತ್ಮ, ದೇಶಾಭಿಮಾನ, ಮೈಗೂಡಿಸಿ ಕೊಂಡು ನಿರ್ಭಯತೆ, ಆಶಾವಾದ ಮತ್ತು ಸಾಮಾಜಿಕ ಸಮಸ್ಯೆಗಳ ಬಗೆಗಿನ ವಿಶಾಲ ದೃಷ್ಟಿಯ ಸಂಕೇತವಾಗಿ ಅವರು ಪರಿಗಣಿತರಾಗಿದ್ದಾರೆ. ಸ್ವಾಮಿ ವಿವೇಕಾನಂದರ ಜನ್ಮ ದಿನವಾದ ಜನವರಿ ೧೨ ರಂದು ರಾಷ್ಟ್ರೀಯ “ಯುವದಿನ” ವೆಂದು ಆಚರಿಸಲಾಗುತ್ತದೆ. ಸ್ವಾಮಿ ವಿವೇಕಾನಂದರ ಆದರ್ಶಗಳನ್ನು ವಿದ್ಯಾರ್ಥಿ ದೆಸೆಯಿಂದಲೇ ತಮ್ಮ ಜೀವನದಲ್ಲಿ ಅಳವಡಿಸಿ ಕೊಳ್ಳಿ ಎಂದರು.
ಶರಣ ಬಸವೇಶ್ವರ ಕಾಲೇಜಿನ ಪ್ರಾಂಶುಪಾಲರಾದ ಸುಭಾಷ್ ಚಂದ್ರ ಬೋಸ್ ಮತ್ತುಪೊಲೀಸ್ ಅಧಿಕಾರಿ ಸಂದೀಪ್, ವಿವೇಕಾನಂದರ ಕುರಿತು ಸವಿವರವಾಗಿ ಮಾತನಾಡಿ ಇದೇ ಸಂದರ್ಭದಲ್ಲಿ ದಯಾನಂದ ಸಜ್ಜನ್, ಕೆಂಚಮ್ಮನಹಳ್ಳಿ ಬಸವರಾಜ್, ವಿನೋದ್ ಕಾಮಶೆಟ್ಟಿ, ರಂಗನಾಥನಹಳ್ಳಿ ಬಸವರಾಜ್, ಬಸವರಾಜ್, ಸಂದೀಪ್, ಕಣದಮನೆ ಶಿವಕುಮಾರ್, ಮಹಾಂತೇಶ್, ಪರಶುರಾಮ್,ಸಿದ್ದೇಶ್, ಸತೀಶ್, ಸಂದೇಶ್ ಸೇರಿದಂತೆ ಹೊಸಹಳ್ಳಿ ಗ್ರಾಮದ ಯುವ ಬ್ರಿಗೇಡ್ ನ ಕಾರ್ಯಕರ್ತರು ವಿದ್ಯಾರ್ಥಿ ವಿದ್ಯಾರ್ಥಿನಿಯರು ಪುಸ್ತಕ ಮತ್ತು ಪೆನ್ನನ್ನು ವಿತರಿಸಲಾಯಿತು ಇತರರು ಉಪಸ್ಥಿತರಿದ್ದರು ಎಂದು ವರದಿಯಾಗಿದೆ.
ಹೋಬಳಿ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಕೆ.ಎಸ್ ವೀರೇಶ್ ಕೆ ಹೊಸಹಳ್ಳಿ

