ಸ್ವಾಮಿ ವಿವೇಕಾನಂದರ ಜಯಂತಿ ಪ್ರಯುಕ್ತ – ಮಕ್ಕಳಿಗೆ ಲೇಖನ ಸಾಮಗ್ರಿಗಳ ವಿತರಣೆ.
ಚಳ್ಳಕೆರೆ ಜ.13

ತಾಲೂಕಿನ ನೇರಲಗುಂಟೆ ಸಮೀಪದ ಕಾಟವ್ವನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಐವತ್ತೈದು ಮಕ್ಕಳಿಗೆ ಚಳ್ಳಕೆರೆ ಶ್ರೀಶಾರದಾಶ್ರಮದಿಂದ ಲೇಖನ ಸಾಮಗ್ರಿಗಳಾದ ನೋಟ್ ಬುಕ್, ಪೆನ್, ಪೆನ್ಸಿಲ್, ಸ್ಕೆಲ್, ಫೈಲ್ ಸೇರಿದಂತೆ ಸಿಹಿ ವಿತರಿಸಿ ಸ್ವಾಮಿ ವಿವೇಕಾನಂದರ 164 ನೇ. ಜಯಂತ್ಯುತ್ಸವ ಕಾರ್ಯಕ್ರಮವನ್ನು ಜೀವ ಶಿವ ಸೇವೆಯ ಮೂಲಕ ಅತ್ಯಂತ ಅರ್ಥ ಪೂರ್ಣವಾಗಿ ಆಚರಿಸಿಲಾಯಿತು.

ಈ ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಶ್ರೀಶಾರದಾಶ್ರಮದ ಸ್ವಯಂ ಸೇವಕ ಯತೀಶ್ ಎಂ ಸಿದ್ದಾಪುರ ಮಕ್ಕಳಿಗೆ ಸ್ವಾಮಿ ವಿವೇಕಾನಂದರ ಭಜನೆ, ಶಕ್ತಿಮಂತ್ರ, ಚೈತನ್ಯದಾಯಕ ನುಡಿಗಳನ್ನು ಹೇಳಿ ಕೊಟ್ಟು ಸ್ವಾಮಿ ವಿವೇಕಾನಂದರ ಜೀವನ ಮತ್ತು ಅವರ ಸಂದೇಶಗಳನ್ನು ವಿದ್ಯಾರ್ಥಿಗಳಿಗೆ ತಿಳಿಯ ಪಡಿಸಿದರು.

ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯ ಶಿಕ್ಷಕಿ ಶಶಿಕಲಾ, ಸಹ ಶಿಕ್ಷಕಿ ಸಿ.ಎಸ್ ಭಾರತಿ ಚಂದ್ರಶೇಖರ್, ಭಾಗ್ಯಮ್ಮ, ಚೈತನ್ಯ, ಬೋರಮ್ಮ, ರಾಧಮ್ಮ, ಸೂರ್ಯ, ರಾಘವೇಂದ್ರ, ನವಿಕಾ, ಅರ್ಚನಾ ಸೇರಿದಂತೆ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.

