ಶ್ರೀಶಾರದಾಶ್ರಮದಲ್ಲಿ ಮಕ್ಕಳಿಂದ ಸ್ವಾಮಿ ವಿವೇಕಾನಂದರ – ಚೈತನ್ಯದಾಯಕ ನುಡಿಗಳ ಪಠಣ.
ಚಳ್ಳಕೆರೆ ಜ.14

ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದಲ್ಲಿ ಮಕ್ಕಳಿಗಾಗಿ ಆಯೋಜಿಸಿದ್ದ “ವಿವೇಕ ವಿಹಾರ ವಿದ್ಯಾರ್ಥಿ ಶಿಬಿರ” ಕಾರ್ಯಕ್ರಮದಲ್ಲಿ ಪೂಜ್ಯ ಮಾತಾಜೀ ತ್ಯಾಗಮಯೀ ಅವರ ಸಾನಿಧ್ಯದಲ್ಲಿ ಯತೀಶ್ ಎಂ ಸಿದ್ದಾಪುರ ಅವರ ನೇತೃತ್ವದಲ್ಲಿ ಮಕ್ಕಳಿಂದ ಓಂಕಾರ, ದಿವ್ಯತ್ರಯರ ಪ್ರಣಾಮಮಂತ್ರ, ಶ್ರೀರಾಮಕೃಷ್ಣರ ನಾಮಸ್ಮರಣೆ, ಸ್ವಾಮಿ ವಿವೇಕಾನಂದರ ಶಕ್ತಿಮಂತ್ರ, ಸ್ವದೇಶ ಮಂತ್ರ ಹಾಗೂ ಚೈತನ್ಯದಾಯಕ ನುಡಿಗಳ ಪಠಣ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಸುಧಾಮಣಿ, ಪದ್ಮ ನಾಗರಾಜ್, ಸಂತೋಷ್, ಪ್ರತೀಕ್ಷಾ, ಮನಸಿರಿ, ಯಶಸ್ವಿ, ವಿವಿಕ್ತ, ವಿಷ್ಣು, ಪ್ರಣಾಮ್ಯ, ನಮ್ರತಾ, ಜಶ್ವಿತಾ ಕೋಮಲಾಸಿರಿ, ವೈಷ್ಣವಿ, ಚರಣ್ಯ, ಗಾಯನಾ, ಶ್ಯಾಮ್, ಬಿಂದು, ಹಂಸ, ಮಹಾಲಕ್ಷ್ಮೀ, ಸಂಜನಾ, ಸಾಯಿ ಸಮರ್ಥ್, ಶ್ರೇಯಸ್ಸು, ವಿನತಿ, ಯಶಸ್ಸು, ಲಕ್ಷ್ಮೀ ಸೇರಿದಂತೆ ಸಾಕಷ್ಟು ಸಂಖ್ಯೆಯಲ್ಲಿ ಮಕ್ಕಳು ಭಾಗವಹಿಸಿದ್ದರು.
ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.

