🚨 ಬ್ರೇಕಿಂಗ್ ನ್ಯೂಸ್, ಉಡುಪಿಯಲ್ಲಿ ಶೀರೂರು – ಪರ್ಯಾಯ ಸಂಭ್ರಮ..! 🚨
ಉಡುಪಿ ಜ.14

ಶ್ರೀ ಶ್ರೀ ವೇದ ವರ್ಧನ ತೀರ್ಥ ಶ್ರೀಪಾದರ ಪರ್ಯಾಯ ಮಹೋತ್ಸವಕ್ಕೆ ಉಡುಪಿ ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿಯಿಂದ ಭಕ್ತಿ ಪೂರ್ವಕ ಶುಭಾಶಯಗಳು!
📍 ಉಡುಪಿ:-
ವಿಶ್ವಪ್ರಸಿದ್ಧ ಉಡುಪಿ ಶ್ರೀಕೃಷ್ಣ ಮಠದ ಪೂಜಾ ಕೈಂಕರ್ಯವನ್ನು ಬದಲಾಯಿಸುವ ಐತಿಹಾಸಿಕ ಪರ್ಯಾಯ ಮಹೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದೆ. ಶ್ರೀ ಶೀರೂರು ಮಠದ ಪರಮ ಪೂಜ್ಯ ಶ್ರೀ ಶ್ರೀ ವೇದ ವರ್ಧನ ತೀರ್ಥ ಶ್ರೀಪಾದರು ಇದೇ ಜನವರಿ 18 ರಂದು ಚೊಚ್ಚಲ ಬಾರಿಗೆ ಸರ್ವಜ್ಞ ಪೀಠಾರೋಹಣ ಮಾಡಲಿದ್ದಾರೆ. ಈ ಪುಣ್ಯ ಕಾರ್ಯಕ್ಕೆ ನಗರದ ಪ್ರತಿಷ್ಠಿತ ಉಡುಪಿ ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿ ಲಿಮಿಟೆಡ್ ಭಕ್ತಿ ಪೂರ್ವಕವಾಗಿ ಶುಭ ಕೋರಿದೆ.
✨ 🚩 ಭವ್ಯ ಪರ್ಯಾಯ ಮೆರವಣಿಗೆ:-
ಜನೆವರಿ 18 ರಂದು ಮುಂಜಾನೆ 3:00 ಗಂಟೆಗೆ ಉಡುಪಿಯ ಜೋಡುಕಟ್ಟೆಯಿಂದ ಅದ್ಧೂರಿ ಮೆರವಣಿಗೆ ಚಾಲನೆ ಗೊಳ್ಳಲಿದೆ.
🙏 ಪೂಜಾ ಸಾರಥ್ಯ:-
ಕೀರ್ತಿಶೇಷ ಶ್ರೀ ಶ್ರೀ ಲಕ್ಷ್ಮೀವರತೀರ್ಥ ಶ್ರೀಪಾದರ ಉತ್ತರಾಧಿಕಾರಿಗಳಾದ ಶ್ರೀ ವೇದವರ್ಧನತೀರ್ಥರು 2026-2028ರ ಅವಧಿಗೆ ಶ್ರೀಕೃಷ್ಣನ ಪೂಜಾ ಸಾರಥ್ಯ ವಹಿಸಲಿದ್ದಾರೆ.
🤝 ಸೊಸೈಟಿಯ ಅಭಿನಂದನೆ:-
“ಶೀರೂರು ಪರ್ಯಾಯ – ನಮ್ಮ ಪರ್ಯಾಯ” ಎಂಬ ಸಂಭ್ರಮದೊಂದಿಗೆ ಉಡುಪಿ ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿ ಲಿ., ಕಿನ್ನಿಮುಲ್ಕಿ ಇದರ ಆಡಳಿತ ಮಂಡಳಿ ಹಾಗೂ ಸರ್ವ ಸದಸ್ಯರು ಪರ್ಯಾಯ ಶ್ರೀಗಳಿಗೆ ಭಕ್ತಿ ಪೂರ್ವಕ ಪ್ರಣಾಮಗಳನ್ನು ಸಲ್ಲಿಸಿದ್ದಾರೆ.
📢 ಭಕ್ತಾದಿಗಳಿಗೆ ಆತ್ಮೀಯ ಆಮಂತ್ರಣ:-
ಈ ಮಹೋತ್ಸವದ ಅಂಗವಾಗಿ ನಡೆಯುವ ವೈವಿಧ್ಯಮಯ ಸಾಂಸ್ಕೃತಿಕ ಮತ್ತು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಉಡುಪಿ ಜಿಲ್ಲೆಯ ಸಮಸ್ತ ಸಾರ್ವಜನಿಕರು ಹಾಗೂ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶ್ರೀಗಳ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ಉಡುಪಿ ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿ ಆಮಂತ್ರಿಸಿದೆ.
🗓️ ದಿನಾಂಕ:-
18 ಜನವರಿ 2026 (ಭಾನುವಾರ)
⏰ ಸಮಯ:-
ಮುಂಜಾನೆ 3:00 ಗಂಟೆಯಿಂದ
📍 ಸ್ಥಳ:-
ಜೋಡುಕಟ್ಟೆ (ಮೆರವಣಿಗೆ ಆರಂಭ), ಉಡುಪಿ.
ವರದಿ:ಆರತಿ.ಗಿಳಿಯಾರು.ಉಡುಪಿ

